Sunday, October 22, 2023

ರಮಾನಾಥ ರೈ ಅಪ್ಪಟ ಸುಳ್ಳುಗಾರ : ಹರಿಕೃಷ್ಣ ಬಂಟ್ವಾಳ ಆರೋಪ

Must read

ಬಂಟ್ವಾಳ: ಚುನಾವಣಾ ಪೂರ್ವದಲ್ಲಿ ಯಾವುದೇ ಮತೀಯವಾದಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡುವುದಿಲ್ಲ ಎಂದು ಜನತೆಗೆ ಭರವಸೆ ನೀಡಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಈಗ ಮಾತಿಗೆ ತಪ್ಪಿದ್ದು ದುಡ್ಡಿನ ವ್ಯವಹಾರದ ಮೂಲಕ ಎಸ್.ಡಿ.ಪಿ.ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಪುರಸಭೆಯಲ್ಲಿ ಅಧಿಕಾರ ಪಡೆದುಕೊಂಡಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ , ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಆರೋಪ ವ್ಯಕ್ತಪಡಿಸಿದ್ದಾರೆ.
ರೈ ಅವರು ಜರ್ಮಿನಿಯ ಸರ್ವಾಧಿಕಾರಿ ಹಿಟ್ಲರ್ ನ ಮಂತ್ರಿ ಗೋಗಲ್ ನ ತದ್ರೂಪಿ ಎಂದು ಆರೋಪಿಸಿದರು.
ಆರ್.ಎಸ್.ಎಸ್.ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಜೊತೆ ಕಾಂಗ್ರೇಸ್ ಪಕ್ಷ ಕೈವಾಡ ಇದೆ ಎಂದು ಆರೋಪ ಮಾಡಿದಾಗಲೂ ಅವರು ಒಪ್ಪಿಕೊಂಡಿರಲಿಲ್ಲ, ತನಿಖೆಯಲ್ಲಿ ಎಸ್.ಡಿ.ಪಿ.ಐ. ಪಕ್ಷದ ಕಾರ್ಯಕರ್ತರು ಕಾಂಗ್ರೇಸ್ ಜೊತೆಯಲ್ಲಿ ಗುರುತಿಸಿಕೊಂಡವರು ಎಂದು ಗೊತ್ತಾದ ಬಳಿಕ ಮಾಜಿ ಸಚಿವ ರಮಾನಾಥ ರೈ ಅವರು ಪರಂಗಿಪೇಟೆಯಿಂದ ಮಾಣಿ ವರೆಗೆ ಶಾಂತಿಗಾಗಿ ಕಾಲ್ನಡಿಗೆ
ಸಂದರ್ಭದಲ್ಲಿ ಎಸ್.ಡಿ.ಪಿ.ಪಕ್ಷವನ್ನು ಹೊರಗಿಟ್ಟಿದ್ದರು. ಅಂತವರ ಜೊತೆ ಹೀಗ ಹೊಂದಾಣಿಕೆ ಹೇಗೆ ಮಾಡಿದರು.
ಕೆಲವು ಸಂದರ್ಭಗಳಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ಹೊಂದಾಣಿಕೆ ಅನಿವಾರ್ಯ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂಬ ಟ್ವಿಟರ್ ಹಾಕಿದ್ದಾನೆ ಆದರೆ ರೈ ಮಾತ್ರ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಆರೋಪ ಮಾಡಿದ್ದಾರೆ.

ಖಾದರ್ ಜೊತೆ ಮನಸ್ತಾಪ ಹೊಂದಿರುವ ರೈ ಅವರು ನೇರವಾಗಿ ಅವರ ವಿರುದ್ದ ಆರೋಪ ಮಾಡಲು ಶಕ್ತರಲ್ಲದ ತಾಕತ್ತಿಲ್ಲದೆ ಬಂಟ್ವಾಳ ಶಾಸಕರ ಹೆಗಲ ಮೇಲೆ ಕೋವಿಯಿಟ್ಟು ಹೊಡೆಯುವ ಕೆಲಸ ಮಾಡಿದ್ದೀರಿ ಪಕ್ಷದವರ ಮೇಲೆಯೇ ಗುಂಡು ಹಾರಿಸಲು ಬಿಜೆಪಿಯನ್ನು ಉಪಯೋಗಿಸುವ ನೀವು ಇವತ್ತು ಏನು ಹೇಳುತ್ತೀರಿ. ನಿಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಂತ್ರಿಯಾಗಿದ್ದ ವೇಳೆ ಎಸ್.ಡಿ.ಪಿ.ಅವರ 1600 ಕೇಸ್ ಗಳನ್ನು ವಾಪಸು ಪಡೆದಿದ್ದೀರಿ ಇದರಲ್ಲಿ ನಿಮ್ಮ ಬಣ್ಣ ಬದಲಾಗುತ್ತೆ ಎಂದು ಆರೋಪ ಮಾಡಿದರು.

ರೈ ಸುಳ್ಳುಗಾರ:

ಕಲ್ಲಡ್ಕ ಶ್ರೀರಾಮ‌ ವಿದ್ಯಾ ಕೇಂದ್ರದ ಮಕ್ಕಳ ಅನ್ನದ ಬಟ್ಟಲಿಗೆ ಕಲ್ಲು ಹಾಕಿದಾಗ ಒಪ್ಪಿಕೊಳ್ಳದ ರೈ ಬಳಿಕ ಚುನಾವಣಾ ಸಂದರ್ಭದಲ್ಲಿ ಹೇಗೆ ಒಪ್ಪಿಕೊಂಡೀರಿ?
ಜನಾರ್ಧನ ಪೂಜಾರಿ ಅವರ ಕಣ್ಣೀರು ಹಾಕಿಸಿದಾಗ ಬಗ್ಗೆ ಒಪ್ಪಿಕೊಳ್ಳಲಾಗದ ರೈ ಚುನಾವಣೆ ಸಂದರ್ಭದಲ್ಲಿ ತಪ್ಪಾಗಿದೆ ಚುನಾವಣೆಯಲ್ಲಿ ನನಗೆ ಗೆಲುವಿಗಾಗಿ ಆರ್ಶೀವಾದ ಮಾಡಿ ಎಂದು ಯಾಕೆ ಹೇಳಿದ್ದೀರಿ ನೀವು?
ಅಪ್ಪಟ ಸುಳ್ಳುಗಾರ ನಾಗಿರುವಾಗ ಹೀಗೆ ಪ್ರತಿಯೊಂದು ಘಟನೆಯನ್ನು ಒಪ್ಪಿಕೊಳ್ಳದ ನೀವು ಪುರಸಭೆಯ ಹೊಂದಾಣಿಕೆಯನ್ನು ಒಪ್ಪಿಕೊಳ್ಳಲು ತಯಾರಿದ್ದೀರಾ? ಎಂದು ಪ್ರಶ್ನಿಸಿದರು.

ಪುರಸಭೆಯಲ್ಲಿ 12 ಸದಸ್ಯರಲ್ಲಿ ಒಬ್ಬರಿಗಾದದರೂ ಹಿಂದುಗಳಿಗೆ ಆಡಳಿತದಲ್ಲಿ ಅವಕಾಶ ನೀಡಬಹುದಿತ್ತು. ಹಾಗಿದ್ದ ಮೇಲೆ ನೀವು ಇನ್ನೂ ಕೂಡ ಕಾಂಗ್ರೆಸ್ ನಲ್ಲಿ ಯಾಕೆ ಉಳಿದುಕೊಂಡಿದ್ದೀರಿ? ರಾಜಿನಾಮೆ ನೀಡಿ ಬಿಜೆಪಿಗೆ ಬನ್ನಿ ನಿಮಗೆ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ಅವಕಾಶ ನೀಡಿ ಗೆಲ್ಲಿಸಿ ಕೊಡುತ್ತೇವೆ ಎಂದು ಭರವಸೆ ನೀಡುತ್ತೇವೆ ಎಂದರು.

ಗೋಷ್ಟಿಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ ಅರಳ , ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುದರ್ಶನ ಬಜ, ಜಿಲ್ಲಾ ಎಸ್.ಟಿ.ಮೋರ್ಚಾ ಪ.ಕಾರ್ಯದರ್ಶಿ ಲೋಕೇಶ್ ಎರ್ಮೆನಾಡು, ಮಾಧ್ಯಮ ಪ್ರಮುಖ್ ರಂಜಿತ್ ಮೈರ, ಪ್ರಮುಖರಾದ ಚಿದಾನಂದ ರೈ, ಜಯರಾಮ ನಾಯ್ಕ್, ಚಂದ್ರಾವತಿ ಕರಿಯಂಗಳ, ಗಣೇಶ್ ರೈ ಮಾಣಿ, ಸೀತರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ, ಹರ್ಷಿಣಿ, ಭಾರತಿ ಚೌಟ, ಮಹೇಶ್ ಶೆಟ್ಟಿ, ಧನಂಜಯ ಶೆಟ್ಟಿ ಉಪಸ್ಥಿತಿರಿದ್ದರು.

More articles

Latest article