Sunday, April 7, 2024

ಬೆಳಕಿನೆಡೆಗೆ… – ಒಡಿಯೂರುಶ್ರೀ ದೀಪಾವಳಿ ಸಂದೇಶ

ವಿಟ್ಲ: ದೀಪದ ಆರಾಧನೆ ದೀಪೋತ್ಸವ. ಬದುಕೇ ದೀಪೋತ್ಸವ ಆಗಬೇಕು. ಅಂತರ್‌ಜ್ಯೋತಿ ಬೆಳಗಿದರೆ ನಮ್ಮಲ್ಲಿ ಹುದುಗಿರುವ ಅಸುರ ಶಕ್ತಿಯೆಂಬ ಅಂಧಕಾರ ನೀಗಿ ಜ್ಞಾನದ ಬೆಳಕು ಮೂಡಿ ಬರಲು ಸಾಧ್ಯ. ಬೆಳಕಿಲ್ಲದೆ ಕತ್ತಲಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಬೆಳಕಿನ ದೀಪ ಬೆಳಗಿಸಲು ಕತ್ತಲು ಬೇಕು. ಅಂಧಕಾರವನ್ನು ಓಡಿಸಲು ಬೆಳಕು ಬೇಕು. ಆ ಬೆಳಕು ಎಂಬ ಶಕ್ತಿ ಪ್ರತಿಯೋರ್ವನ ದೇಹದ ಒಳಗೂ ಇದೆ ಹೊರಗೂ ಇದೆ. ನಮ್ಮಲ್ಲಿರುವ ಬೆಳಕು ಎಂಬ ತೇಜಸ್ಸನ್ನು ಮತ್ತಷ್ಟು ಪ್ರಕಾಶಿಸುವಂತೆ ಮಾಡುವುದೇ ನಮ್ಮ ಕರ್ತವ್ಯ. ಅಂತರಂಗದ ಬೆಳಕಿನೊಂದಿಗೆ ಬಹಿರಂಗದ ತೇಜಸ್ಸಿನ ಬೆಳಕನ್ನು ಸದುಪಯೋಗಪಡಿಸಿದಾಗಲೇ ಬದುಕಿನ ಸಾರ್ಥಕತೆ.
’ಮಮೇತಿ ಬದ್ಯತೇ ಜಂತುಃ ನ ಮಮೇತಿ ವಿಮುಚ್ಯತೇ’
ನಾನು ಎನ್ನುವುದು ನಮಗೆ ಬಂಧನ. ನನ್ನದಲ್ಲ ಎಂಬುದೇ ಬಿಡುಗಡೆ. ಅಹಂಕಾರ ಮಮಕಾರವೇ ನಮಗೆ ಬಂಧನ. ಅದನ್ನು ಮರೆತರೆ ಅಂತರಂಗದತ್ತ ಸಾಗುವುದಕ್ಕೆ ಅನುಕೂಲ. ಬಲಿ ಚಕ್ರವರ್ತಿಯ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಜತೆಗೆ ನರಕಾಸುರ ವಧೆಯಿಂದಾಗಿ ನರಕ ಚತುರ್ದಶಿ ಎಂಬುದನ್ನು ನೆನಪಿಸಬಹುದು. ನಾನು, ನನ್ನದು ಎಂಬ ಅಹಮಿಕೆಯನ್ನೂ, ಸ್ವಾರ್ಥವನ್ನೂ, ಅಜ್ಞಾನವನ್ನೂ ಹರಿದೊಗೆದು ಬಂದರೆ ಮಾನವ ಜನ್ಮವು ಸಾರ್ಥಕವಾಗುತ್ತದೆ. ನಮ್ಮ ಎದೆಗೂಡಲ್ಲಿ ಬೆಳಕಿನ ಕಿರುಸೊಡರನ್ನು ಬೆಳಗಿಸಿ ಸುತ್ತಮುತ್ತಲು ಆ ಬೆಳಕು ಹರಡಲು ಅನುವು ಮಾಡಿ ಕೊಡುವುದೇ ದೀಪಾವಳಿ. ನಮ್ಮೊಳಗೆ ಹುದುಗಿರುವ ಕತ್ತಲು ಸರಿದು ತಿಳಿವಿನ ತಿಳಿಬೆಳಕು ಹಬ್ಬಲೆಂದು ಬೆಳಕಿನ ಹಬ್ಬವನ್ನು ಸ್ವಾಗತಿಸುವ. ಬೆಳಕು ಹಬ್ಬುವುದೇ ಹಬ್ಬ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪಾವಳಿಯ ಸಂದೇಶ ನೀಡಿದ್ದಾರೆ.

 

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...