Saturday, April 6, 2024

ಬಂಟ್ವಾಳ ಫ್ರೆಂಡ್ಸ್ ವತಿಯಿಂದ ಎರಡನೇ ವರ್ಷದ ಗೂಡುದೀಪ ಸ್ಪರ್ಧೆ

ಬಂಟ್ವಾಳ: ದೀಪಾವಳಿ ಪ್ರಯಕ್ತ ಬಂಟ್ವಾಳ ಫ್ರೆಂಡ್ಸ್‌ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ಎರಡನೇ ವರ್ಷದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆ ಬಂಟ್ವಾಳ ಸಮಾಜ ಸೇವ ಸಹಕಾರಿ ಬ್ಯಾಂಕ್ ನ‌ ಸಭಾಂಗಣದಲ್ಲಿ ನ.15 ರಂದು ಆದಿತ್ಯವಾರ ಸಂಜೆ ನಡೆಯಿತು.
ಸುಮಾರು 35 ಕ್ಕೂ ಅಧಿಕ ಗೂಡು ದೀಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.


ಗೂಡು ದೀಪ ಸ್ಪರ್ಧೆಯಲ್ಲಿ ಪ್ರವೀಣ್ ಸಪಲ್ಯ ಅರ್ಭಿಗುಡ್ಡೆ ಅವರ ಗೂಡುದೀಪ ಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ದ್ವೀತಿಯ ಅನಿಲ್ ಮಂಡಾಡಿ ಅವರ ಗೂಡುದೀಪ ಕ್ಕೆ ಲಭಿಸಿತು ಹಾಗೂ ತೃತಿಯ ಬಹುಮಾನ ಜಗದೀಶ್ ಸಾಲ್ಯಾನ್ ಅವರ ಗೂಡುದೀಪಕ್ಕೆ ಸಿಕ್ಕಿತು.

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸುರೇಶ್ ಕುಲಾಲ್, ಅರುಣ್ ಕುಮಾರ್ ಸಜೀಪ, ಪದ್ಮನಾಭ ವಿಟ್ಲ, ಜನಾರ್ಧನ ಬೊಂಡಲ, ಸತೀಶ್ ಪಲ್ಲ ಮಜಲು,ರಮೇಶ್ ಎಸ್. ಸಾಲಿಯಾನ್ ಬಂಡಾರಿಬೆಟ್ಟು, ಪೆರ್ನೆ ಶ್ರೀ ರಾಮ ಪದವಿ ಕಾಲೇಜ್ ನ ಚಿತ್ರ ಕಲಾ ಹಾಗೂ ಯೋಗ ಶಿಕ್ಷಕ ಚೆನ್ನಕೇಶವ, ಸಾಯಿ ಐಸ್ ಕ್ರಿಮ್ ಎಂಟಪ್ರೈಸೆಸ್ ನ ಕೃಷ್ಣ ಕನಪಾದೆ, ಚೇತನ್ ಪೂಜಾರಿ ಅರ್ಬಿಗುಡ್ಡೆ ಉಪಸ್ಥಿತರಿದ್ದರು.

ಚಿತ್ರ: ವಿಕೇಶ್, ದಿಶಾ ಸ್ಟುಡಿಯೋ ಬಂಟ್ವಾಳ

More from the blog

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...