Saturday, April 6, 2024

ತುಂಬೆ ಶಾಲಾ ಪರಿಸರದಲ್ಲಿ ಪರಿಸರ ಸ್ವಚ್ಛತಾ ಅಭಿಯಾನ

ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವತಿಯಿಂದ ತುಂಬೆ ಶಾಲಾ ಪರಿಸರದಲ್ಲಿ “ಪರಿಸರ ಸ್ವಚ್ಛತಾ ಅಭಿಯಾನ” ನಡೆಯಿತು.

ಸಂಘದ ಅಧ್ಯಕ್ಷ ಐತಪ್ಪ ಕುಲಾಲ್ ಉದ್ಘಾಟಿಸಿ, ಮಾತನಾಡಿ, ಜಾತಿ ಸಂಘಟನೆಗಳು ಕೇವಲ ಜಾತಿಗೆ ಸೀಮಿತವಾಗದೆ ಇಂತಹ ಸಾಮಾಜಿಕ ಕಾರ್ಯಕ್ರಮಗನ್ನು ನಡೆಸುವುದರ ಮೂಲಕ ತುಂಬೆ ಕುಲಾಲ ಸೇವಾ ಸಂಘ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಗೌರವಾಧ್ಯಕ್ಷರಾದ ನೀಲಪ್ಪ ಸಾಲಿಯಾನ್, ಲಿಂಗಪ್ಪ ಕುಲಾಲ್, ಸಂಚಾಲಕ ಶೇಷಪ್ಪ ಮಾಸ್ಟರ್, ಮಹಿಳಾ ಘಟಕದ ಅಧ್ಯಕ್ಷೆ  ಉಮಾವತಿ ಲಿಂಗಪ್ಪ, ಗೌರವಾಧ್ಯಕ್ಷೆ ಭಾರತಿ ಶೇಷಪ್ಪ, ಪದಾಧಿಕಾರಿಗಳಾದ ಸಂದೀಪ್ ಕುಲಾಲ್, ಭಾಸ್ಕರ್ ಕುಲಾಲ್, ಹರೀಶ್ ಪೆರ್ಲಬೈಲ್, ದಿನೇಶ್ ಕುಲಾಲ್, ಗೋಪಾಲ್ ಬೆದ್ರಾಡಿ, ಸದಾನಂದ ಕುಲಾಲ್,ಗೌರೀಶ್ ಕುಲಾಲ್, ಕೃಷ್ಣ ಕುಲಾಲ್, ಮೋನಪ್ಪ ಮಜಿ, ಚಿದಾನಂದ ಮಜಿ, ಸೀತಾರಾಮ,ಕೀರ್ತಿಶ್, ಪುನೀತ್, ಪವನ್, ಭಾಸ್ಕರ್, ಚಿಂತನ್ ಚಂದ್ರ ರಾಜ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಾದ ಶೋಭಾ ಸದಾನಂದ್, ಶೋಭಾ ಭಾಸ್ಕರ್, ವಸಂತಿ ಕೃಷ್ಣ, ಸಾವಿತ್ರಿ ಶಿವಕುಮಾರ್ ಹಾಗೂ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು.

ಅಧ್ಯಕ್ಷ ಲಘುಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಭಾಗವಸಿದ ಎಲ್ಲರಿಗೂ ಶಾಲಾ ಮುಖ್ಯ ಶಿಕ್ಷಕಿ ಯಮುನಾ ಧನ್ಯವಾದ ಅರ್ಪಿಸಿದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...