Tuesday, October 17, 2023

ಮಿತ್ತೂರು: ಬೃಹತ್ ರಕ್ತದಾನ ಶಿಬಿರ

Must read

ವಿಟ್ಲ: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 10 ಆಸ್ಪತ್ರೆಗಳ ಸಹಯೋಗದಲ್ಲಿ 200ನೇ ರಕ್ತದಾನ ಶಿಬಿರ ಮಿತ್ತೂರಿನ ಕೆ.ಜಿ.ಎನ್. ಕ್ಯಾಂಪಸ್ ನಲ್ಲಿ ನಡೆಯಿತು.
ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತ್ಯಾಗಪೂರ್ಣ ಸೇವೆ ಭಗವಂತನಿಗೆ ಇಷ್ಟವಾಗುವುದು. ಬದುಕನ್ನು ಉತ್ತಮ ಕಾರ್ಯಗಳಿಗೆ ಸದ್ವಿನಿಯೋಗಪಡಿಸಬೇಕು. ರಕ್ತದಾನ ಶಿಬಿರಗಳು ಸಮಾಜದ ಅಭ್ಯುದಯಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರಿಂದ ಸಮಾಜ ಕಟ್ಟುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ದುವಾಃ ಆಶೀರ್ವಚನ ನೀಡಿದರು.
ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ ಖಾದರ್ ಶುಭ ಹಾರೈಸಿದರು. ದ.ಕ ಜಿಲ್ಲಾ ಸಮಿತಿ ವತಿಯಿಂದ ಕೆಸಿಎಫ್ ಒಮನ್ ಚಾರ್ಟಡ್ ವಿಮಾನ ಸ್ವಾಗತಿಸಿದ ಅಬ್ದುಲ್ ಹಮೀದ್ ಬಜ್ಪೆ, ಅಬ್ದುರ ಹಿಮಾನ್ ಮೊಗರ್ಪಣೆ, ಅಶ್ರಪ್ ಕಿನಾರ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಜಿಂ.ಎಂ. ಕಾಮಿಲ್ ಸಖಾಫಿ, ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿಟ್ಲ ಎಸ್‌ಐ ವಿನೋದ್ ಕುಮಾರ್ ರೆಡ್ಡಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಮಹಮ್ಮದ್ ಅಲಿ ಸಖಾಫಿ ಸುರಿಬೈಲು, ಇಸ್ಮಾಯಿಲ್ ಮಾಸ್ಟರ್, ಮೋಂಟೆಪದವು, ಪ್ರಭಾಕರ ರೈ ಸುಳ್ಯ, ಹಮೀದ್ ಹಾಜಿ ಕೊಡಂಗಾಯಿ, ಸಲೀಂ ಹಾಜಿ ಬೈರಿಕಟ್ಟೆ, ಕರೀಂ ಕದ್ಕಾರ್, ಜಬ್ಬಾರ್ ಬೋಳಿಯಾರ್, ಹಾಶಿರ್ ಪೆರಿಮಾರ್, ಕೆಸಿಎಫ್ ನಾಯಕರಾದ ಖಲಂದರ್ ಕಬಕ, ಅಶ್ರಪ್ ಕಟ್ಟದ ಪಡ್ಪು, ಖಲಂದರ್ ಬಾಳೆಹೊನ್ನೂರು, ಮೊಹಮ್ಮದ್ ಕುಂಬ್ರ, ನಾಸೀರ್ ಬೇಂಗಿಲ ಮೊದಲಾದವರು ಪಾಲ್ಗೊಂಡಿದ್ದರು.
ರಶೀದ್ ಹಾಜಿ ವಗ್ಗ ಸ್ವಾಗತಿಸಿದರು. ಮಹಮ್ಮದ್ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.

 

More articles

Latest article