Saturday, April 6, 2024

ರಾಷ್ಟ್ರೀಯ ಚಿಂತನೆಯ ಸಾಮಾಜಿಕ ಸೇವಾ ಮನೋಭಾವನೆಯುಳ್ಳ ಸಂಘಟನೆ ರಿಕ್ಷಾ ಚಾಲಕ ಮಾಲಕ ಸಂಘ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಬಿ.ಸಿ. ರೋಡ್ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ (ಬಿ.ಯಂ.ಎಸ್. ಬಂಟ್ವಾಳ ತಾಲೂಕು ಮೋಟಾರ್ & ಜನರಲ್ ಮಜ್ದೂರ್ ಸಂಘ ದ.ಕ. ಇದರ ಘಟಕ)ದ 32ನೇ ವಾರ್ಷಿಕ ಮಹಾ ಸಭೆಯು ನ.21ರ ಶನಿವಾರ ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ರಾಷ್ಟ್ರೀಯ ಚಿಂತನೆಯ ಮೂಲಕ ಸಮಾಜ ಕೈಕಂರ್ಯದ ಕೆಲಸದಲ್ಲಿ ತೊಡಗಿದ ಸಂಘಟನೆಯ ಉದ್ದೇಶ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಜೀವನ ಸಾಗಿಸುವುದರ ಜೊತೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆ ಎಂಬ ಭಾವನೆಯಿಂದ ರಿಕ್ಷಾ ಚಾಲಕರು ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು. ಕಳೆದ 32 ವರ್ಷಗಳಿಂದ ದೇಶದ ಹಿತಚಿಂತನೆಯ ದೂರದೃಷ್ಟಿಯಿಂದ ಸಂಘಟನೆಯನ್ನು ಸ್ಥಾಪಿಸಿ ಆ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರುವುದು ಮಾದರಿ ಮತ್ತು ಉತ್ತಮ ಕಾರ್ಯ ಎಂದು ಹೇಳಿದರು. ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ರಿಕ್ಷಾ ಚಾಲಕರ ಸಹಕಾರ ಕೂಡ ಅಗತ್ಯವಿದ್ದು, ಕಾನೂನಿನ ಚೌಕಟ್ಟಿನ ಇತಿಮಿತಿಗಳನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.

ಬಿ.ಯಂ.ಎಸ್. ನ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಿಕ್ಷಾ ಚಾಲಕರು ಇನ್ನು ಸುಧಾರಣೆ ಆಗಬೇಕಾಗಿದೆ. ಕಾನೂನಿಗೆ ತೊಡಕಾಗದ ರೀತಿಯಲ್ಲಿ ಶಿಸ್ತುಬದ್ಧವಾದ ನಡವಳಿಕೆ ಸಮಾಜದಲ್ಲಿ ಗುರುತಿಸಲ್ಪಡುವ ವಿಚಾರವಾಗಿದ್ದು,  ಗಮನಾರ್ಹ ಸಂಗತಿಯಾಗಿದೆ ಎಂದು ಹೇಳಿದರು. ರಿಕ್ಷಾ ಚಾಲಕರ ಮಂಡಳಿ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ರಿಕ್ಷಾ ಚಾಲಕರಿಗೆ ವಿಶೇಷವಾಗಿ ಮಂಡಳಿ ರಚನೆ ಮಾಡಬೇಕು ಎಂಬುದರ ಬಗ್ಗೆ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ ಎಂದ ಅವರು ಜೊತೆಗೆ ಸರಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಹೇಳಿದರು.

ಸಂಘದ ಕಾನೂನು ಸಲಹೆಗಾರ, ವಕೀಲ ಜಯರಾಮ ರೈ ಮಾತನಾಡಿ, ರಿಕ್ಷಾ ಚಾಲಕ ಮಾಲಕರ ಸಂಘಟನೆ ಸತ್ಯದ ದ್ಯೋತಕವಾಗಿದೆ ಎಂದರು. ಸಂಘಟನೆಯಲ್ಲಿರುವ ಸದಸ್ಯರಿಗೆ ಶಕ್ತಿ ಜಾಸ್ತಿ, ಸಂಘಟನೆಯ ಮೂಲಕ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ರಿಕ್ಷಾ ಚಾಲಕರು ಸಂಘನೆಗೆ ಸದಸ್ಯರಾಗಿ ಸಂಘಟನಾತ್ಮಕ ಅಭಿವೃದ್ಧಿಗಾಗಿ ಪಣತೊಡಬೇಕು ಎಂದು ಹೇಳಿದರು.

ಪುರಸಭಾ ಸದಸ್ಯ, ಸಂಘದ ಗೌರವಾಧ್ಯಕ್ಷ ಗೋವಿಂದ ಪ್ರಭು ಮಾತನಾಡಿ, ರಿಕ್ಷಾ ಚಾಲಕ ಸಂಘಟನೆಯ ಮೂಲಕ ರಿಕ್ಷಾ ಚಾಲಕರ ಒಳಿತಿಗಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಸಮಾಜ ಸೇವೆ ಮಾಡಿದ ಹೆಗ್ಗಳಿಕೆ ರಿಕ್ಷಾ ಚಾಲಕರಿಗೆ ಇದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಮಾಜಿ ಆಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಸಂಘದ ಅಧ್ಯಕ್ಷ ಸತೀಶ್ ಭಂಡಾರಿಬೆಟ್ಟು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಉತ್ತಮ ಸಂಘಟಕನಾಗಿ ಕೆಲಸ ಮಾಡಿರುವ ಮಾಜಿ ಅಧ್ಯಕ್ಷ ಜಿಲ್ಲಾ ಉಪಾಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಅವರನ್ನು ವೇದಿಕೆಯಲ್ಲಿ ಶಾಸಕರು ಸನ್ಮಾನಿಸಿದರು.
ಸಂಘದ ಗೌರವ ಸಲಹೆಗಾರ ಸದಾನಂದ ನಾವೂರ ಸ್ವಾಗತಿಸಿ, ಸಂಘದ ಮಾಜಿ ಕಾರ್ಯದರ್ಶಿ ನಾರಾಯಣ ವಂದಿಸಿದರು. ಸಂಘದ ಜೊತೆ ಕಾರ್ಯದರ್ಶಿ ಉಮಾಶಂಖರ್ ದಡ್ಡಲಕಾಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣ ಗೌಡ ಮಣಿಹಳ್ಳ ಲೆಕ್ಕ ಪತ್ರ ಮಂಡನೆ ಮಾಡಿದರು.

ಪ್ರತಿ ವರ್ಷ ಸರಕಾರ ಅಸಂಘಟಿತ ಕಾರ್ಮಿಕರಿಗೆ “ಶ್ರಮ ಸನ್ಮಾನ” ಮಾಡುತ್ತಿದ್ದು, ಬಂಟ್ವಾಳದ 4 ಮಂದಿ ರಿಕ್ಷಾ ಚಾಲಕರು “ಶ್ರಮ ಸನ್ಮಾನ” ಕ್ಕೆ ಆಯ್ಕೆಯಾಗಿದ್ದರು. ಸಭೆಯಲ್ಲಿ ಆಯ್ಕೆಯಾದ ರಾಜೇಶ್, ಚಂದಪ್ಪ, ಕೃಷ್ಣ ಗೌಡ, ವಿಠಲ ಅವರನ್ನು ಗುರುತಿಸಲಾಯಿತು.

ಸಭೆಯಲ್ಲಿ ರಿಕ್ಷಾ ಚಾಲಕರ ಐ.ಡಿ.ಕಾರ್ಡ್ ವಿತರಣೆಯನ್ನು ಸಾಂಕೇತಿಕವಾಗಿ ಮಾಡಲಾಯಿತು. ರಿಕ್ಷಾ ಚಾಲಕರಿಗಾಗಿ ಲಕ್ಕಿ ಕೂಪನ್ ನ ಡ್ರಾ ಇದೇ ಸಂದರ್ಭದಲ್ಲಿ ನಡೆಯಿತು. ಲಕ್ಕಿ ಕೂಪನ್ ಡ್ರಾ ದ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...