


ಬಂಟ್ವಾಳ: ಪುರಸಭಾದ ನೂತನ ಅಧ್ಯಕ್ಷ ಮಹಮ್ಮದ್ ಶರೀಫ್ ಶಾಂತಿ ಅಂಗಡಿ ಮತ್ತು ನೂತನ ಉಪಾಧ್ಯಕ್ಷೆ ಜೇಸಿಂತಾ ಡಿಸೋಜ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಎಮ್.ಎಸ್. ಮೊಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಹಾಗೂ ಬೇಬಿ ಕುಂದರ್, ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಝಕ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ನಂದಾವರ, ಪುರಸಭಾ ಸದಸ್ಯರಾದ ಲೋಲಕ್ಷ, ಮಸ್ಜಿದ್-ಎ- ಮಸೀದಿಯ ಮುತ್ತಲಿಬ್ ಗೂಡಿನಬಳಿ ಅಧ್ಯಕ್ಷರು, ಸಲಾಮ್ ಮಸೀದಿಯ ಮುತ್ತಲಿಬ್ ಪ್ರಧಾನ ಕಾರ್ಯದರ್ಶಿ, ಗೂಡಿನಬಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಕೆರೀಂ, ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ಖಾಧರ್, ಪರ್ವೀಜ್ ಜಿ.ಕೆ., ಕಾಸಿಮ್, ಯುವ ಕಾಂಗ್ರೆಸ್ ಘಟಕ ರಿಜ್ವಾನ್ ಗೂಡಿನಬಳಿ, ಅಮೀನ್, ಸಂಶೀರ್ ಮೊದಲಾದವರು ಉಪಸ್ಥಿತರಿದ್ದರು.


