Sunday, April 7, 2024

ಪೂವಳರಿಗೊಂದು ಡೊಡ್ಡ ಸಲಾಂ

ನನಗೀಗಲೂ ನೆನಪಿದೆ, ಈಗಿನಂತೆ ಆಗ ವೆಬ್ ಪತ್ರಿಕೆಗಳಿರಲಿಲ್ಲ, ಏನಿದ್ದರೂ ಫಾಸ್ಟ್ ಫುಡ್ನಂತೆ ಖರ್ಚಾಗುತ್ತಿದ್ದ ಸಂಜೆ ಪತ್ರಿಕೆಗಳು. ನಾನಾಗ ಬಂಟ್ವಾಳ ತಾಲೂಕು ಪರಿಸರಾಸಕ್ತ ಒಕ್ಕೂಟದ ಅಧ್ಯಕ್ಷನಾಗಿದ್ದೆ. ತಾಲೂಕಿನಾದ್ಯಂತ ಕೃಷಿಕರ ಘಟಕಗಳು, ಪ್ಲಾಸ್ಟಿಕ್ ವಿರುದ್ಧದ ಆಂದೋಲನ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪರಿಸರ ಶಿಬಿರಗಳು, ಪರಿಸರದ ಮೇಲಿನ ದಬ್ಬಾಳಿಕೆಯ ವಿರುದ್ಧ ಹೋರಾಟದ ಸಂದರ್ಭ. ಇವಕ್ಕೆಲ್ಲ ಸಂಜೆ ಪತ್ರಿಕೆಗಳ ಮೂಲಕ ಭರ್ಜರಿ ಪ್ರಚಾರ ಕೊಡುತ್ತಿದ್ದವರು ನನ್ನ ನಿಡುಗಾಲದ ಮಿತ್ರ ಸೂರ್ಯನಾರಾಯಣ ಪೂವಳ. ಅವರಾಗಿಯೇ ನನ್ನನ್ನು ಸಂಪರ್ಕಿಸಿ ಸ್ಟೋರಿ ಬಿಲ್ಡಪ್ ಮಾಡಿದ್ದೂ ಇದೆ.
ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಪೆನ್ನು ಮಸೆಯುವ ಲೇಖಕನೊಬ್ಬ ಅವರೊಳಗಿದ್ದ, ಇದು ಪತ್ರಕರ್ತನೊಬ್ಬನಿಗಿರಬೇಕಾದ ಸ್ವಂತಿಕೆಗೆ ಸಾಕ್ಷಿ ಅನ್ನುವುದೇ ನನ್ನ ಭಾವನೆ.
ಅಸೋಸಿಯೇಶನ್ ಅಂದಾಗ ಒಳಗೆಲ್ಲಾ ಅತೃಪ್ತಿಗಳ ಅಲೆ, ಇಗೊ ಮೊದಲಾದವುಗಳು ಸಾಮಾನ್ಯವಾಗಿ ಇದ್ದದ್ದೆ, ನಮ್ಮ ಒಕ್ಕೂಟವೂ ಅದಕ್ಕೆ ಹೊರತಾಗಿರಲಿಲ್ಲ, ಗೋಮುಖ ವ್ಯಾಘ್ರಗಳ ತಂಟೆಕೋರತನ, ಗೆದ್ದಲು ಹುಳುವಿನಂತಹ ಒಳಗೊಳಗೇ ಕೊರೆಯುವ…..ಒಂದು ಸಲ ಇದು ಅಪಾಯ ಮಟ್ಟಕ್ಕೆ ಏರಿ ಇನ್ನೇನು…….ಆದಾಗ ಇದನ್ನು ಹೇಗೋ ತಿಳಿದಿದ್ದ ಪೂವಳ ನನ್ನನ್ನು ಎಚ್ಚರಿಸಿದ್ದಿದೆ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಪ್ರಚೋದಿಸಿದ್ದಿದೆ. ಆ ನಂತರದ ಅವಧಿಯಲ್ಲಿ ಸಮಯ ಸಾಧಕರಿಂದಾಗಿ ಒಕ್ಕೂಟ ಹೇಳ ಹೆಸರಿಲ್ಲದಂತೆ ಬಾಗಿಲು ಮುಚ್ಚಿದ್ದು ಅದೊಂದು ಇತಿಹಾಸ. ಪೂವಳರಿಗೊಂದು ದೊಡ್ಡ ಸಲಾಂ.
ಅವರು ಸಮಯ ದೊರಕಿದಾಗಲೆಲ್ಲ ಕವನಗಳ ಹೊಸೆಯುವುದನ್ನೂ ರೂಢಿಸಿಕೊಂಡಿದ್ದರು. ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದೂ ಇದೆ. ಎಷ್ಟೋ ಸಂದರ್ಭಗಳಲ್ಲಿ ಅವರು ಬರೆದ ಲೇಖನಗಳು ಕವನಗಳನ್ನು ನನ್ನಲ್ಲಿ ತೋರಿಸಿ ನನ್ನ ಅಭಿಪ್ರಾಯಗಳನ್ನು ಪಡೆದದ್ದೂ ಇದೆ.
ಓರ್ವ ಸಜ್ಜನ, ಸಾತ್ವಿಕ ಹಿರಿಯ ಪತ್ರಕರ್ತ ಇನ್ನಿಲ್ಲವಾದುದು ಆಕಸ್ಮಿಕವೇ. ಪೂವಳರ ಆತ್ಮಕ್ಕೆ ಚಿರಶಾಂತಿಯನ್ನು ಬಯಸುತ್ತೇನೆ.

ಬರಹ: ರಾಜಮಣಿ ರಾಮಕುಂಜ

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....