Friday, April 5, 2024

ಗಾಂಜ ಮಾರಾಟಕ್ಕೆ ಯತ್ನ: ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

ಬಂಟ್ವಾಳ: ಗಾಂಜಾ ಮಾರಟ ಮಾಡಲು ಯತ್ನ ನಡೆಸುತ್ತಿದ್ದ ನೇಪಾಳದ ಯುವಕನ ಸಹಿತ ಇಬ್ಬರು ಆರೋಪಿಗಳನ್ನು
ಡಿ.ಸಿ.ಐ.ಬಿ. ಪೊಲೀಸ್‌ ನಿರೀಕ್ಷಕ ಚೆಲುವರಾಜು ಬಿ. ನೇತೃತ್ವದಲ್ಲಿ ಬಂಧಿಸಲಾಗಿದೆ.

ಅನ್ಸಾರಿ ಕ್ರಾಸ್ ರೋಡ್‌, ಬಂದರು ಮಂಗಳೂರು ನಿವಾಸಿ ಟಿ.ಪಿ. ಅಜೀಜ್‌ ಅವರ ಮಗ ಟಿ.ಪಿ. ಫಾರೂಕ್‌(50) ಹಾಗೂ ರಾಜ್‌ಪುರ್‌ ಗಬೀಸಾ ವಿಡಿಸಿ, ಜಿಲ್ಲೆ; ದಾಂಗ್‌, ಜೋನ್‌; ರಪ್ತಿ, ನೇಪಾಳ ನಿವಾಸಿ ಪ್ರೇಮ್‌ ಸಿಂಗ್‌ ಅವರ ಮಗ ಸಾಗರ್‌ ಸಿಂಗ್‌(22) ಬಂಧಿತ ಆರೋಪಿಗಳು. ಬಂಧಿತರಿಂದ 10,32,900/- ಮೌಲ್ಯದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬಿಳಿ ಬಣ್ಣದ ಬ್ರೀಝಾ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸ್‍ ನಿರೀಕ್ಷಕ ಚೆಲುವರಾಜು ಸಿಬ್ಬಂದಿಯೊಂದಿಗೆ ಮೆಲ್ಕಾರ್‍ ಬಸ್ ನಿಲ್ದಾಣದ ಬಳಿ ಕಾದು ಬ್ರೀಜಾ ಕಾರನ್ನು ತಡೆದು ಅದರಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದು ವಿಚಾರಿಸಿದಾಗ ಮಂಗಳೂರು ನಿವಾಸಿ
ಟಿ.ಪಿ ಫಾರೂಕ್‌(50), ಹಾಗೂ ನೇಪಾಳ ಮೂಲದ ಪ್ರಸ್ತುತ ಪಿವಿಸ್‌ ಸರ್ಕಲ್, ಮಾನಸ ಟವರ್‌ ಎದುರುಗಡೆ, ಮಂಗಳೂರು ಪಿಜಿಯಲ್ಲಿ ವಾಸ ಮಾಡುವ ಸಾಗರ್‌ ಸಿಂಗ್‌(22) ಎಂದು ತಿಳಿಸಿದ್ದು, ಇವರಿಬ್ಬರು ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ದಸ್ತಗಿರಿ ಮಾಡಿದ ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಡಿ.ಸಿ.ಐ.ಬಿ ಪೊಲೀಸ್‍ ನಿರೀಕ್ಷಕ ಚೆಲುವರಾಜು ಬಿ. ರವರ ನೇತೃತ್ವದಲ್ಲಿ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ., ಉದಯ ರೈ, ಪ್ರವೀಣ್‍ ಎಂ., ತಾರಾನಾಥ್‍, ಪ್ರವೀಣ್‍ ರೈ, ಶೋನ್‍ಶಾ, ಸುರೇಶ್‍ ರವರು ನಡೆಸಿರುತ್ತಾರೆ ಹಾಗೂ ತಾಂತ್ರಿಕ ವಿಭಾಗದ ಸಂಪತ್‍ ಮತ್ತು ದಿವಾಕರ್ ಸಹಕರಿಸಿರುತ್ತಾರೆ.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ...