Saturday, April 6, 2024

ಅಳಕೆಮಜಲಿನಲ್ಲೊಂದು ಬಯೋಡೀಸೆಲ್ ಬಂಕ್ : ಜೈವಿಕ ಇಂಧನ ತಯಾರಿಕೆಯಲ್ಲೊಂದು ಯಶಸ್ವಿ ಪ್ರಯೋಗ ದ.ಭಾರತದಲ್ಲೇ ಚೊಚ್ಚಲ ಜೈವಿಕ ಇಂಧನ ಬಂಕ್..!

 

ವಿಟ್ಲ: ಪ್ರಕೃತಿದತ್ತವಾಗಿ ಸಿಗುತ್ತಿರುವ ತೈಲ ಇಂಧನ ಮುಂದೊಂದು ದಿನ ಮುಗಿದು ಹೋಗಲಿದೆ ಎಂಬ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೈಲ ಇಂಧನದ ಕೊರತೆ ಪ್ರಕೃತಕಾಲ ಸನ್ನಿವೇಶದಲ್ಲಿ ಜಗತ್ತಿನ ಎಲ್ಲಾ ದೇಶಗಳಿಗೂ ಆತಂಕ ತರುತ್ತಿರುವ ಹೊತ್ತಲ್ಲಿ ಮೂಲತಃ ಸುಳ್ಯ ತಾಲೂಕಿನ ಚೊಕ್ಕಾಡಿಯ ಕೇಶವ ಮೂರ್ತಿ ಎಂಬ ಗ್ರಾಮೀಣ ವಿದ್ಯಾವಂತರೊಬ್ಬರು ಸೋಯ, ಜೋಳದಿಂದ ಬಯೋ ಡೀಸೆಲ್ ತಯಾರಿಸಿ ತನಗೆ ಮಾತ್ರವಲ್ಲದೇ ದೇಶದ ಭವಿಷ್ಯಕ್ಕೆ ಪೂರಕವಾಗುವ ಕಾಯಕ ಆರಂಭಿಸಿ ಸಫಲರಾಗಿದ್ದಾರೆ. ಇದೀಗ ಬಹುಃ ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ವಿಟ್ಲ ಸಮೀಪದ ಅಳಕೆಮಜಲು ಎಂಬಲ್ಲಿ ಬಯೋ ಡೀಸೆಲ್ ಬಂಕ್ ನಿರ್ಮಿಸಿ ಸ್ವ-ಉದ್ಯೋಗಾಕಾಂಕ್ಷಿಗಳಿಗೂ ಪ್ರೇರಣೆಯಾಗಿದ್ದಾರೆ. ಕೇಶವಮೂರ್ತಿಯವರು ಇಂಗ್ಲೆಂಡಲ್ಲಿ 16 ವರ್ಷಗಳ ಕಾಲ ಐಟಿ ಕನ್ಸಲ್ಟೆಂಟ್ ಆಗಿ ಅನುಭವ ಹೊಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತೆ ಸ್ವದೇಶಕ್ಕೆ ಹಿಂದುರುಗಿದ ಬಳಿಕ ಇಂತಹ ಯೋಜನೆಗೆ ಮುಂದಡಿಯಿಟ್ಟರು. ಈ ಮಧ್ಯೆ ಸಮಾಜದ ಮಧ್ಯೆ ಹತ್ತಾರು ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆದರು. ಒಂದು ಹಂತದ ಅವರ ಯೋಜನೆ ಯಶಸ್ವಿಯಾಗಿದೆ.

ಏನಿದು ಬಯೋ ಡೀಸೆಲ್: ಬಯೋ ಡೀಸೆಲ್ ಅಂದರೆ ಜೈವಿಕ ಉತ್ಪನ್ನಗಳಿಂದ ತಯಾರಿಸಿದ ಡೀಸೆಲ್. ಬಯೋ ಡೀಸೆಲ್‌ನ ಬಗ್ಗೆ ಕೇಂದ್ರ ಸರಕಾರ 2017 ರಿಂದಲೇ ಚಿಂತನೆ ನಡೆಸಿತ್ತಾದರೂ, ಅದು ಭಾರತದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಲೇ ಇಲ್ಲ ಎಂದೇ ಹೇಳಬೇಕು. ಬಿ-100 ಎಂಬ ಪಾಮ್‌ಬೇಸ್‌ಡ್ ಬಯೋಡೀಸೆಲ್, ಹೊಂಗೆ, ಹೊನ್ನೆ ಇನ್ನಿತರ ಸಸ್ಯ ಮೂಲಗಳಿಂದ, ಬಳಸಲ್ಪಟ್ಟ ಎಣ್ಣೆ ಪದಾರ್ಥಗಳಿಂದ ಉತ್ಪಾದಿಸಲು ಸಾಧ್ಯವಿದೆಯಾದರೂ ಅದು ವಾಹನಗಳಿಗೆ ನೇರವಾಗಿ ಬಳಸಲ್ಪಡುವ ಹಂತಕ್ಕೆ ಬಂದಿಲ್ಲ. ಆದರೆ ಕೇಶವಮೂರ್ತಿಯವರು ಸಾಕಾಷ್ಟು ಅಧ್ಯಯನ, ಲ್ಯಾಬ್ ಪ್ರಯೋಗಗಳ ಮೂಲಕ ಸೋಯ, ಜೋಳ ಕಚ್ಚಾ, ಜತ್ರೋಪಾದಂತಹ ವಸ್ತುವನ್ನು ಉಪಯೋಗಿಸಿ, ಅದಕ್ಕೆ ಪೂರಕ ಅಂಶಗಳನ್ನು ಬೆರೆಸಿ ನೇರವಾಗಿ ವಾಹನಗಳಿಗೆ ಬಳಸಲ್ಪಡುವಂತೆ ಮಾಡಿದ್ದಾರೆ.
ಪರಿಸರಸ್ನೇಹಿ, ಪವರಫುಲ್ ಇಂಧನ: ದ್ವಿಚಕ್ರ ಹೊರತಾಗಿ ಎಲ್ಲಾ ರೀತಿಯ ವಾಹನಗಳು ಈ ಬಯೋಡೀಸೆಲನ್ನು ಬಳಸಿದ್ದು, ಹತ್ತಾರು ರೀತಿಯ ಪ್ರಯೋಜನಗಳನ್ನು ಪಡೆದಿದ್ದಾರೆ. ಶೇ.25 ರಷ್ಟು ಮೈಲೇಜ್ ಸಿಗುತ್ತಿದ್ದು, ಗಂಧಕ ರಹಿತ ಡೀಸೆಲ್ ಆದ ಕಾರಣ ಹೊಗೆ ರಹಿತವಾಗಿದೆ. ವಿಸ್ಕೋಸಿಟಿ (ದಪ್ಪನೆಯ ಅಂಶ) ಹೆಚ್ಚಾಗಿರುವುದರಿಂದ ವಾಹನಗಳ ಇಂಜಿನ್ ಶಬ್ದ ಹಿತಮಿತವಾಗಿರುವುದು, ಇಂಜಿನ್ ನಯವಾಗಿರಲು ಸಹಕಾರಿಯಾಗಿದೆ. ಇಂಧನ ಬಳಸಿದ ಕಾರು ಇನ್ನಿತರ ವಾಹನಗಳಿಗೆ ಪ್ರತೀ ಲೀಟರ್ ಮೇಲೆ 2-4 ಕಿ.ಮೀ ಹೆಚ್ಚುವರಿ ಲಾಭ ಸಿಕ್ಕಿದೆ. ಮಾಮೂಲಿ ಡೀಸೆಲ್‌ಗಿಂತ ಪ್ರತೀ ಲೀ.ಗೆ 1 ರೂ. ಕಡಿಮೆ ದರದಲ್ಲಿ ಇದು ಸಿಗುವ ಕಾರಣ ಒಮ್ಮೆ ಹಾಕಿ ಕೊಂಡು ಹೋದ ಗ್ರಾಹಕರು ಮತ್ತೆಮತ್ತೆ ಇಲ್ಲಿಗೆ ಬಂದು ಹಾಕಿಸಿಕೊಂಡು ಹೋಗುತ್ತಿರುವುದು ಬಯೋ ಡೀಸೆಲ್‌ನ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂಜಿನ್ ಫರ್ಮಾರ್‍ಮೆನ್ಸ್ ಉತ್ತಮವಾಗಿದೆ. ಅದಲ್ಲದೇ ಗ್ರಾಹಕರಿಗೆ ಶೇ.೧೨ ಜಿಎಸ್‌ಟಿ ಲಾಭವಿದೆ. ಈ ಬಯೋ ಡೀಸೆಲ್ ಬಳಸಿದ ಪ್ರತಿಯೊಬ್ಬರು ಗ್ರಾಹಕರು ಹತ್ತಾರು ಅನುಕೂಲಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಪ್ರತೀ ದಿನ 2000-3000 ಲೀ ಬಯೋ ಡೀಸೆಲ್ ಇಲ್ಲಿ ಮಾರಾಟವಾಗುತ್ತಿದೆ. ಬಯೋ ಡೀಸೆಲ್‌ನ ಮತ್ತೊಂದು ಉತ್ಕಷ್ಟತೆ ಎಂದರೆ ಇದು ಬಗ್ಗನೇ ಬೆಂಕಿ ಹತ್ತಿಕೊಳ್ಳುವುದಿಲ್ಲ. ಯಾಕೆಂದರೆ ಇದರಲ್ಲಿ ಸಲ್ಫರ್ ಅಂಶ ಇರದ ಕಾರಣ ಅದರಷ್ಟಕ್ಕೆ ಬೆಂಕಿ ಹತ್ತುವುದಿಲ್ಲ. ಅಂದರೆ ಅಪಾಯರಹಿತ ಇಂಧನವೆನಿಸಿದೆ.

ತುಮಕೂರಿನಲ್ಲಿ ಸ್ವಂತ ಪ್ಯಾಕ್ಟರಿ : ಸೋಯ, ಜೋಳ ಕರ್ನಾಟಕದ ಬಯಲುಸೀಮೆಗಳಲ್ಲಿ ಬೆಳೆಯುವ ಬೆಳೆಯಾಗಿರುವ ಕಾರಣ ಆ ಪ್ರದೇಶಗಳಲ್ಲಿ ಬಯೋ ಡೀಸೆಲನ್ನು ಸುಲಭವಾಗಿ ಉತ್ಪಾದಿಸಬಹುದು ಎಂದು ಅಭಿಪ್ರಾಯಪಡುವ ಕೇಶವಮೂರ್ತಿ ತುಮಕೂರಿನಲ್ಲಿ ಸದ್ಯದಲ್ಲೇ ಪ್ರತೀ ದಿನ 10 ಸಾವಿರ ಲೀ. ಸಾಮಾರ್ಥ್ಯದ ಬಯೋಡೀಸೆಲ್ ತಯಾರಿಕಾ ಘಟಕ ನಿರ್ಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಆಯ್ದ ಸ್ಥಳಗಳಲ್ಲಿ ಬಯೋ ಡೀಸೆಲ್ ಬಂಕ್ ಸ್ಥಾಪಿಸುವ ಉದ್ದೇಶವಿದೆ ಎನ್ನುತ್ತಾರೆ. ಅದಲ್ಲದೇ ಗೇರು ಹಣ್ಣು, ಕಬ್ಬು ಹಾಲು ಕಚ್ಚಾ ವಸ್ತು ಮೂಲದಲ್ಲಿ ಮುಂದಿನ ದಿನಗಳ್ಲಿ ಬಯೋ ಪೆಟ್ರೋಲ್ ತಯಾರಿಸುವ ಯೋಜನೆಯಿದೆ. ಇದಕ್ಕೆ ಸರಕಾರ, ಇಲಾಖಾ ಮಟ್ಟದಲ್ಲಿ ಅನುಮತಿ ಇನ್ನಿತರ ಪ್ರಕ್ರಿಯೆಗಳು ದೊರೆತ ತಕ್ಷಣ ಈ ಯೋಜನೆ ಹಮ್ಮಿಕೊಳ್ಳಲಾಗುವುದು ಎನ್ನುತ್ತಾರೆ.

ಕೇಶವಮೂರ್ತಿಯವರ ಪರಿಸರ ಸ್ನೇಹಿ ಉದ್ಯಮವೊಂದು ದೇಶದ ಭವಿಷ್ಯದ ಉಜ್ವಲತೆಗೂ ತನ್ನ ಕೊಡುಗೆಯನ್ನು ನೀಡಲಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಆಶಾಕಿರಣವಾಗಬಹುದು. ಇದೇ ಬಯೋ ಡೀಸೆಲ್, ಬಯೋ ಪೆಟ್ರೋಲ್ ತಯಾರಿಕೆ ಮುಂದೊಂದು ದಿನ ಬೃಹತ್ ಉದ್ಯಮದ ಸ್ವರೂಪವನ್ನೂ ಪಡೆಯಬಹುದು. ಇಂಧನ ಬಳಕೆದಾರರು ಈ ಪರಿಸರ ಸ್ನೇಹಿ ಇಂಧನವನ್ನು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಬೆಳೆ ಬೆಳೆಯುವ ರೈತರ ಪಾಲಿಗೆ ವರದಾನವಾಗಬಹುದು. ಆತ್ಮ ನಿರ್ಭರ ಯೋಜನೆಯ ಉದ್ದೇಶಗಳು ಇಂತಹ ಉದ್ಯಮಗಳ ಮೂಲಕ ಸಾಕಾರಗೊಳ್ಳಬಹುದು. ಇಂಧನಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನೇ ಅವಲಂಬಿಸಿಕೊಳ್ಳಬೇಕಾದ ಅನಿವಾರ್ಯತೆ ತಪ್ಪಬಹುದು.

 

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...