Tuesday, April 23, 2024

ದ.ಕ. ಜಿಲ್ಲೆಯ ವಲೇರಿಯನ್ ಡಿಸೋಜ, ಕೆ. ಲಿಂಗಪ್ಪ ಶೇರಿಗಾರ್ ಕಟೀಲು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರಕಾರವು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ದ.ಕ. ಜಿಲ್ಲೆಯ ಮೂವರು ಹಾಗು ಉಡುಪಿಯ ಮೂವರು ಸೇರಿ ಒಟ್ಟು 65 ಮಂದಿಗೆ ಪ್ರಶಸ್ತಿ ಪ್ರಕಟಿಸಿದೆ.

ನವೆಂಬರ್ 7ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ದ.ಕ. ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಲೇರಿಯನ್ ಡಿಸೋಜ (ವಲ್ಲಿವಗ್ಗ), ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ. ಲಿಂಗಪ್ಪ ಶೇರಿಗಾರ್ ಕಟೀಲು, ಸಂಘ-ಸಂಸ್ಥೆಗಳಲ್ಲಿ ಸಾಧನೆ ಮಾಡಿದ ಧರ್ಮೋತ್ತಾನ ಟ್ರಸ್ಟ್ ಧರ್ಮಸ್ಥಳ, ಉಡುಪಿ ಜಿಲ್ಲೆಯ ನ್ಯಾಯಾಂಗದ ಕ್ಷೇತ್ರದಲ್ಲಿ ಎಂ.ಕೆ. ವಿಜಯ ಕುಮಾರ್ , ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಮಣೆಗಾರ್ ಮೀರಾನ್ ಸಾಹೇಬ್ ಉಡುಪಿ, ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ. ಉಡುಪಿ ಶ್ರೀನಿವಾಸ ಸೇರಿ 65 ಮಂದಿಗೆ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

More from the blog

ನೌಕಾಪಡೆಯ 2 ಹೆಲಿಕಾಪ್ಟರ್ ಪತನ; ಛಿದ್ರ, ಛಿದ್ರವಾದ ನೌಕಾಪಡೆಯ 10 ಮಂದಿ

ಕೌಲಾಲಂಪುರ: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾನೆಲೆಯಲ್ಲಿ ಹೆಲಿಕಾಪ್ಟರ್​ಗಳು ಪರೇಡ್‌ ನಡೆಸುತ್ತಿರುವಾಗ ಈ ಅವಘಡ ಸಂಭವಿಸಿದೆ. ಅತ್ಯಂತ ಸಮೀಪದಲ್ಲಿ ಹಾರಾಟ...

ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ವಿವಿಧೆಡೆ ಪ್ರಚಾರ ಕಾರ್ಯ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ವಿವಿಧೆಡೆ ಚುನಾವಣಾ ಪ್ರಚಾರ ಕಾರ್ಯ ನಡೆಯಿತು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಪ್ರಮುಖರು ಅಲ್ಲಿಪಾದೆ, ನಾವೂರು,...

ಅನಂತಾಡಿಯಲ್ಲಿ ಕ್ಯಾ‌.ಬ್ರಿಜೇಶ್ ಚೌಟ ಅವರ ಚುನಾವಣಾ ಪ್ರಚಾರ ಸಭೆ

ಗ್ರಾಮಗಳ ಅಭಿವೃದ್ಧಿ, ಮಹಿಳೆಯರಿಗೆ ಗೌರವ ಸಿಗುವಂತೆ ಮಾಡುತ್ತೇನೆ, ಯುವ ಸಮುದಾಯಕ್ಕೆ ಉದ್ಯೋಗ, ಹಳ್ಳಿಗಳಲ್ಲಿ ಸ್ವಾಭಿಮಾನದ ಬದುಕು ನೀಡುವ ರೀತಿಯಲ್ಲಿ ಜಿಲ್ಲೆಯನ್ನು ಅಭೂತಪೂರ್ವವಾಗಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ‌.ಬ್ರಿಜೇಶ್ ಚೌಟ...

ಸಾಲೆತ್ತೂರಿನಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಚುನಾವಣಾ ಬಹಿರಂಗ ಪ್ರಚಾರ ಸಭೆ

ಚುನಾವಣೆ ದಿನ‌ ಹತ್ತಿರ ಬರುತ್ತಿದ್ದಂತೆ ಹಿಂದೂಗಳನ್ನು ಯಾವ ರೀತಿ ತುಚ್ಚವಾಗಿ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೇಸ್ ನೋಡುತ್ತಿದೆ ಎಂಬುದು ಎಲ್ಲರಿಗೆ ಕಾಣುತ್ತಿದೆ,ಇಂತಹ ಕಾಂಗ್ರೇಸ್ ನಿಂದ ಹಿಂದೂಗಳ ರಕ್ಷಣೆ ಸಾಧ್ಯವೇ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್...