Tuesday, April 9, 2024

ನಿಶ್ಯಬ್ದದಲ್ಲೂ ಸಂಗೀತವನ್ನು ಗ್ರಹಿಸಿ : ಸಹಮತ

ಪುತ್ತೂರು : ಸಂಗೀತ ಇಲ್ಲದ ಸ್ಥಳವಿಲ್ಲ, ನಿಶ್ಯಬ್ಧದಲ್ಲೂ ಸಂಗೀತವನ್ನು ಹುಡುಕುವ, ಗ್ರಹಿಸುವ, ಪ್ರೀತಿಸುವ ಕೆಲಸ ಆಗಬೇಕು ಎಂದು ಕು.ಸಹಮತ ಹೇಳಿದರು.
ದರ್ಬೆ‌ ವಿದ್ಯಾನಗರದಲ್ಲಿ ಬಹುವಚನಂ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ರಾಜಸ್ಥಾನದ ಕಬೀರ್ ಯಾತ್ರೆಯ ಅನುಭವಗಳನ್ನು ತೆರೆದಿಟ್ಟರು.
ಫಿಲಾಸಫಿ‌ ಹೇಳುವುದು ಸುಲಭ, ಅದನ್ನು ಸ್ವತಃ ಅನುಸರಿಸುವುದು ಕಷ್ಟ, ನುಡಿಯೂ ನಡೆಯಾಗಬೇಕು, ಕಬೀರರ ದೋಹೆಗಳನ್ನು ಕೇಳುಗರಿಗೆ ತಲುಪಿಸಿದ ಸಂಗೀತಗಾರ ಕುಮಾರಗಂಧರ್ವರು ಈ ಪರಿಯಲ್ಲಿ ಬದುಕಿದವರು ಎಂದರು.


ಹಾಡು ಕೇವಲ ಹಾಡಾಗಿರದೆ, ಮತ್ತಷ್ಟು ಹಾಡುಗಳ ಸೃಷ್ಟಿಗೆ ಕಾರಣವಾಗಬೇಕು. ಕಬೀರ ರ ಹಾಡುಗಳಿಗೆ ಇಂತಹಾ ಶಕ್ತಿ ಇದೆ. ಕಬೀರರ ಹಾಡುಗಳಲ್ಲಿ ಸ್ವಂತಿಕೆಯ ಜೊತೆಗೆ ಹಾಡುಕಟ್ಟಿದ ಊರಿನ‌ ಆಶಯಗಳಿತ್ತು, ಅಲ್ಲಿನ‌ ಸ‌ಂಪ್ರದಾಯವಿತ್ತು, ಜನಗಳ ಆಚರಣೆಯಿತ್ತು.. ಹೀಗಾಗಿ ಕಬೀರರ ಹಾಡುಗಳ‌ ಸಾಲುಗಳು ಹೃದಯವನ್ನು ತಟ್ಟುತ್ತಿದೆ ಎಂದವರು ವ್ಯಾಖ್ಯಾನಿಸಿದರು.
ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಮಾತನಾಡಿ, ಎಳೆವಯಸ್ಸಿನಲ್ಲೇ ಸಂಗೀತದ ಅಭಿರುಚಿಯನ್ನು ಬೆಳೆಸಿಕೊಂಡು, ತನ್ನ ಅನುಭವಗಳನ್ನು ಸಹಮತ ಮನೋಜ್ಞವಾಗಿ ಬಿಚ್ಚಿಟ್ಟಿದ್ದಾರೆ ಎಂದರು.
ರಂಗಕರ್ಮಿ ಐಕೆ ಬೊಳುವಾರು ಸ್ವಾಗತಿಸಿದರು.‌ ಬಹುವಚನಂ ನ ಡಾ.ಶ್ರೀಶ ಕುಮಾರ್ ಕಾರ್ಯಕ್ರಮ‌ ನಿರ್ವಹಿಸಿ, ವಂದಿಸಿದರು.

More from the blog

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...