Saturday, April 6, 2024

ಮಿಥುನ್ ರೈ ತಾಕತ್ತಿದ್ದರೆ ಶ್ರೀ ಯೋಗಿ ಆದಿತ್ಯನಾಥ್ ರವರ ಮೈ ಮುಟ್ಟಿ ನೋಡಲಿ: ಪ್ರಭಾಕರ ಪ್ರಭು

ಉತ್ತರ ಪ್ರದೇಶ ಮುಖ್ಯ ಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ರವರು ದ.ಕ.ಜಿಲ್ಲೆಗೆ ಆಗಮಿಸಿದರೆ ಅವರ ಮುಖಕ್ಕೆ ಮಸಿ ಬಳಿಯುತ್ತೇನೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ಸ್ ನ ಕೇಳ ಸ್ತರದ ಕಾರ್ಯಕರ್ತ ಮಿಥುನ್ ರೈ ಯವರ ಮಾನಸಿಕ ಅಸ್ವಸ್ಥ ಹೇಳಿಕೆಯನ್ನು ಪ್ರಬಲವಾಗಿ ಖಂಡಿಸಿರುವ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ರವರು ಶ್ರೀ ಯೋಗಿ ಆದಿತ್ಯನಾಥ್ ರವರ ಮುಖಕ್ಕೆ ಮಸಿ ಬಳಿಯೋದು ಬಿಡಿ ತಾಕತ್ತಿದ್ದರೆ ಅವರ ಮೈ ಮುಟ್ಟಿ ನೋಡಲಿ ಪರಿಣಾಮ ಏನಾಗುತ್ತದೆ ಎಂದು ಪ್ರಭು ಅವರು ಮಿಥುನ್ ರೈ ಗೆ ಸವಾಲು ಹಾಕಿದ್ದಾರೆ.
ಅವರು ಇವತ್ತು ಪತ್ರಿಕಾ ಪ್ರಕಟಣೆ ಮೂಲಕ ಮಿಥುನ್ ಯವರ ಈ ಕೆಟ್ಟ ಮಾತಿಗೆ ಪ್ರತಿಕ್ರಿಯೆ ನೀಡಿ ಮಾತಾನಾಡಿ ಹಿಂದೂ ಸಾಧು,ಸಂತರಾದ ಕರ್ಮ ಯೋಗಿ ಯೋಗಿ ಆದಿತ್ಯನಾಥ್ ರವರ ಬಗ್ಗೆ ಈ ರೀತಿಯ ಮಾನಹಾನಿ ಟೀಕಪ್ರಹಾರ ಹೇಳಿಕೆ ಮಿಥುನ್ ರೈ ಗೆ ಶೋಭೆ ತರೊಲ್ಲ . ಈ ರೀತಿಯ ಟೀಕಪ್ರಹಾರ ಕರಾವಳಿ ತುಳುನಾಡು ಹಿಂದೂ ರಾಮ ಭಕ್ತರು ಸುತಾರಾಂ ಸಹಿಸೊಲ್ಲ.
ಯೋಗಿ ಆದಿತ್ಯನಾಥ್ ಅಂದರೆ ಏನೂ ಅಂದು ಕೊಂಡಿದ್ದಾರೆ ಈ ಮಿಥುನ್ ರೈ? ಭಾರತದ ಸಂತ ಶ್ರೇಷ್ಠ ಪರಂಪರೆಯಲ್ಲಿ ನಾಥ ಪರಂಪರೆಯು ಒಂದಾಗಿದ್ದು,ಇದರ ಸಾನಿದ್ಯ ಕರಾವಳಿ ಮಂಗಳೂರು ಕದ್ರಿ ಮಂಜುನಾಥೇಶ್ವರ ಸಾನಿದ್ಯವರೆಗಿದೆ.ಇದನ್ನು ಅರಿತುಕೊಂಡು ಯೋಗಿ ಬಗ್ಗೆ ಮಾತಾನಾಡಲಿ.
ಅಲ್ಪಸಂಖ್ಯಾತರ ವೋಟ್ ಬ್ಯಾಂಕಿನ ಉದ್ದೇಶಕ್ಕಾಗಿ ಹಾಗೂ ಇದನ್ನೆ ಮಾನದಂಡ ಹಿಡಿದು ಉನ್ನತ ಸ್ಥಾನ ಗಿಟ್ಟಿಸುವ ಹುನ್ನಾರ ದಿಂದಲೂ ಇರಬಹುದಾಗಿದೆ. ಈ ರೀತಿಯ ಹಿಂದೂ ವಿರೋಧಿ ಮತ್ತು ಸಾಧು,ಸಂತರ ಟೀಕಾಪ್ರಹಾರ ಮಾತಿನ ಹೇಳಿಕೆ ಇವತ್ತಿಗೆ ಬಿಟ್ಟು ಬಿಡಿ.
ನೀವೂ ಈ ಹೇಳಿಕೆಯಿಂದ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳಿಂದ ಗೆಲ್ಲಬಹುದು ಎಂಬ ನಂಬಿಕೆ ಇದ್ದರೆ ಇವತ್ತೆ ಬಿಟ್ಟು ಬಿಡಿ..
ಹಿಂದೊಮ್ಮೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಿಗೆ ಈ ರೀತಿಯಲ್ಲಿಯೇ ಟೀಕೆ ಮಾಡಿದ ಪರಿಣಾಮವಾಗಿ ಕರಾವಳಿ ತುಳುನಾಡು ಹಿಂದೂ ಭಕ್ತರು ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಹೀನಾಯ ಸೋಲಿಸಿ ಹಿಂದೂ ಕಾರ್ಯಕರ್ತರು ಏನೆಂಬುದನ್ನು ತೋರಿಸಿಕೊಟ್ಟ ದ್ದನ್ನು ಆತ್ಮಾವಲೋಕನ ಮಾಡಿಸಿಕೊಳ್ಳುವುದು ಒಲಿತು ಎಂದೂ ಕಿವಿ ಮಾತು ಹೇಳಿದ್ದಾರೆ.

ಇನ್ನೂ ಮುಂದೆ ಹಿಂದೂ ಕಾರ್ಯಕರ್ತರು ಇದನ್ನೆಲ್ಲ ಸಹಿಸೊಲ್ಲ ಗೊತ್ತಿರಲಿ. ಮುಂದಕ್ಕೆ ಶ್ರೀಯೋಗಿ ಆದಿತ್ಯನಾಥ್ ಸೇರಿದಂತೆ ಯಾವುದೇ ಸಾಧು ಸಂತರು ಹಾಗೂ ದೇಶ ಭಕ್ತರಿಗೆ ಟೀಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಎಂದೂ ಪ್ರಭಾಕರ ಪ್ರಭು ಎಚ್ಚರಿಸಿದ್ದಾರೆ.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...