Thursday, April 11, 2024

ನೀ ಬೇಕು, ಮತ್ತೆ ಬರಬೇಕು!

ರಾಮರಾಜ್ಯದ ನೇತಾರನೆ
ಗ್ರಾಮಸ್ವರಾಜ್ಯದ ಕನಸುಗಾರನೆ

ಸತ್ಯ ಶಾಂತಿ ಅಹಿಂಸೆಯ
ಮೊಟ್ಟೆಗಳನೆಲ್ಲ ಗೀಜಗನ
ಗೂಡಿನಲಿಟ್ಟು
ವಿಷದ ಹಾವುಗಳನ್ನೂ
ಅಲ್ಲಿಯೇ ಬಿಟ್ಟು ನೀ
ಪಲಾಯನ ಮಾಡಿಬಿಟ್ಟೆಯಲ್ಲೋ
ಮಹಾತ್ಮ!

ನೊಂದು ಬೆಂದವರ
ಒಡಲ ಕಿಚ್ಚು ಆರುವ ಮುನ್ನವೇ
ನಾಯಿನರಿಗಳ ನಡುವೆ ಹಸಿದ
ಹೊಂಗನಸುಗಳ ನೆಟ್ಟು
ನಂಜುದುಂಬಿದ ಎದೆಗಳನೆಲ್ಲ
ಈ ಪುಣ್ಯ ನೆಲದಿ ಹಾಗೆ ಬಿಟ್ಟು
ನೀ ಹೋಗಿಯೇ ಬಿಟ್ಟೆಯಲ್ಲೋ
ಪುಣ್ಯಾತ್ಮ!

ಮದಿರೆ ಮೈಗೇರಿಸಿಕೊಂಡ
ಮಂಗಗಳ ಕೈಯಲ್ಲಿ ಸ್ವಾತಂತ್ರ್ಯದ
ಮಾಣಿಕ್ಯವ ಕೊಟ್ಟು
‘ಭಾರತ್ ಮಾತಾಕಿ ಜೈ’ ಎಂದು
ಗುಂಡಿಟ್ಟವರನೆಲ್ಲ ಇಲ್ಲಿಯೇ ಬಿಟ್ಟು
ನೀ ನಡೆದೇ ಬಿಟ್ಟೆಯಲ್ಲೋ
ದಿವ್ಯಾತ್ಮ!

ಆಗ ನಿನ್ನ ಕಿತ್ತುಕೊಂಡವರು
ಈಗ ನಿನ್ನ ಕೋಲು, ಕನ್ನಡಕ,
ಚಪ್ಪಲಿಗಳನೆಲ್ಲ ಎಗರಿಸಿ,ಪಂಚೆಗೂ
ಸಂಚಕಾರ ತಂದು ‘ಸತ್ಯಕ್ಕೇ ಜಯವಾಗಲಿ!
ಎಂದು ಬೊಬ್ಬೆ ಹಾಕಿದರೂ
ನೀ ಸುಮ್ಮನೆ ನಿಂತಿರುವೆಯಲ್ಲೋ
ಸತ್ಯಾತ್ಮ!

ಈ ಶಾಂತಿ,ಸಹನೆ,ಅಹಿಂಸೆ
ಸಾಕು ಬಿಡೋ ಮಹಾರಾಯ !
ಈಗಲಾದರೂ ಕೋಲು ಬಿಟ್ಟು
ಎ.ಕೆ.47 ತಗೋ,
ಬುಲೆಟ್ ಪ್ರೂಫ್ ಜಾಕೆಟ್ ತೊಟ್ಟು,
ಗಂಡಗಚ್ಚಿ ಹಾಕಿ,
ಕಂಡಲ್ಲಿ ಗುಂಡಿಟ್ಟು ಈ ದೇಶ ಉಳಿಸು,
ಮತ್ತೆ ಎಲ್ಲರ ಮನಸಲಿ ನೆಲೆಸು
ಓ ಅಂತರಾತ್ಮ!

ನೀ.ಶ್ರೀಶೈಲ ಹುಲ್ಲೂರು

More from the blog

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...