Wednesday, October 18, 2023

ವಿಶಾಲ್ ಪಿಂಟೋ ಗೆ ಪಿಎಚ್ ಡಿ ಪದವಿ

Must read

 

ಬಂಟ್ವಾಳ: ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿಶಾಲ್ ಪಿಂಟೋ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ.
ಅವರು ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಮಂಡಿಸಿದ Evaluation of Micro Enterprises Promoted by Self Help Groups-a study with reference to Coastal Karnataka ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಉಜಿರೆ ಎಸ್‌ಡಿಎಂ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಪ್ರಾಧ್ಯಾಪಕ ಡಾ. ಉದಯಚಂದ್ರ ಪಿ.ಎನ್. ಅವರು ವಿಶಾಲ್ ಪಿಂಟೊ ಅವರಿಗೆ ಮಾರ್ಗದರ್ಶನ ನೀಡಿದ್ದರು. ಅವರು ಉಜಿರೆಯ ದಿ. ಜೋನ್ ಪಿಂಟೋ ಹಾಗೂ ಸಿಸಿಲಿಯಾ ಪಿಂಟೋ ಅವರ ಪುತ್ರರಾಗಿದ್ದಾರೆ.

More articles

Latest article