Wednesday, April 10, 2024

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಸರಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ , ಅ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿ ಗಾಗಿ ಅನುದಾನದ ಜೊತೆ ಉತ್ತಮ ಯೋಜನೆ ಗಳನ್ನು ಜಾರಿಮಾಡುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಮಂಗಳವಾರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 27 ಕೋಟಿಗೂ ಮಿಕ್ಕಿದ ಕಾಮಗಾರಿ ಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ಕಾಮಗಾರಿಗಳ ವೀಕ್ಷಣೆ ನಡೆಸಿ ಬಳಿಕ ಮಾತನಾಡಿದರು.


ಗ್ರಾಮದ ಅಭಿವೃದ್ಧಿ ಯೇ ಮುಖ್ಯಮಂತ್ರಿ ಯವರ ಮೂಲ ಧ್ಯೇಯ ವಾಕ್ಯ ವಾಗಿದ್ದು ನಾವು ಅವರ ಯೋಜನೆಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಸರಕಾರದ ಯೋಜನೆಗಳು ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಸಿಗುವ ರೀತಿಯಲ್ಲಿಯೂ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಗ್ರಾ.ಪಂ.ವ್ಯಾಪ್ತಿಯಲ್ಲಿ ಇರುವ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.

ಈ‌ ಸಂದರ್ಭದಲ್ಲಿ ಮಾಡಿದ ಕಾಮಗಾರಿಗಳ ವಿವರ

1. ಬೊಳ್ಳೆಚ್ಚಾರು ರಸ್ತೆ ಅಭಿವೃದ್ಧಿ – 5ಲಕ್ಷ
2. ಮಂಕುಡೆ – ಪರ್ತಿಪ್ಪಾಡಿ -ಕೆಮರಡ್ಕ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ – 7ಲಕ್ಷ
3. ಮಂಕುಡೆ ವಿಷ್ಣುಮೂರ್ತಿ
ದೇವಸ್ಥಾನ ರಸ್ತೆ ಅಭಿವೃದ್ಧಿ – 5ಲಕ್ಷ
4. ಕುಂಟ್ರಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ -10.52ಲಕ್ಷ
5. ಕುಂಟ್ರಕಲ ವಿದ್ಯುತ್ ಪರಿವರ್ತಕ
6. ಸೆರ್ಕಳ – ಪೀಲ್ಯಡ್ಕ ರಸ್ತೆ ಅಭಿವೃದ್ಧಿ – 5ಲಕ್ಷ
7. ಸಾಲೆತ್ತೂರು -ಪೀಲ್ಯಡ್ಕ – ಮಂಚಿ ರಸ್ತೆ ಅಭಿವೃದ್ಧಿ – 5ಲಕ್ಷ
8. ಕಾಡುಮಠ – ಕಡೆಪಿಕೇರಿ ರಸ್ತೆ ಅಭಿವೃದ್ಧಿ -10ಲಕ್ಷ
9. ಪೆರ್ಲದಬೈಲು – ಬರ್ಕಳ ಮಾರಿಗುಡಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ – 15ಲಕ್ಷ
10. ಸಾಲೆತ್ತೂರು – ತಾಮರಾಜೆ ದೈವಸ್ಥಾನ ರಸ್ತೆ ಅಭಿವೃದ್ಧಿ – 5ಲಕ್ಷ
11. ಸಾಲೆತ್ತೂರು ಸದಾಶಿವ ದೇವಸ್ಥಾನ ರಸ್ತೆ ಅಭಿವೃದ್ಧಿ – 20 ಲಕ್ಷ
12. ಕಟ್ಟತ್ತಿಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ – 5ಲಕ್ಷ
13. ಕಟ್ಟತ್ತಿಲ ಮಠ ರಸ್ತೆ ಅಭಿವೃದ್ಧಿ – 25ಲಕ್ಷ
14. ಕಟ್ಟತ್ತಿಲಕೋಡಿ – ನಂದ್ರಬೈಲು ರಸ್ತೆ ಅಭಿವೃದ್ಧಿ – 20ಲಕ್ಷ
15. ಕೋಕಳ – ಭಂಡಾರದಮನೆ ರಸ್ತೆ ಅಭಿವೃದ್ಧಿ – 5ಲಕ್ಷ
16. ಕುಡ್ತಮುಗೇರು -ಪಾದೇರಪಡ್ಪು -ಕುದ್ರಿಯ ರಸ್ತೆ ಅಭಿವೃದ್ಧಿ – 10ಲಕ್ಷ
20.ಕೊಡಂಗೆ – ಕುದ್ರಿಯ ರಸ್ತೆ ಅಭಿವೃದ್ದಿ -5ಲಕ್ಷ
21. ಚೌಕ ಮಲರಾಯ ದೈವಸ್ಥಾನ ರಸ್ತೆ ಅಭಿವೃದ್ಧಿ -10ಲಕ್ಷ

22.ಸೆರ್ಕಳ -ಪೀಲ್ಯಡ್ಕ -ಸಾಗು ರಸ್ತೆ ಅಭಿವೃದ್ಧಿ -10ಲಕ್ಷ.

23. ಕೋಡಪದವು ದಿವಾಣ ಮಜಿ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ.

24. ಎರ್ಮನಿಲೆ ಎಂಬಲ್ಲಿ ಕಿಂಡಿ ಅಣೆಕಟ್ಟು ಶಿಲಾನ್ಯಾಸ – 2 ಕೋಟಿ ಸೇರಿದಂತೆ ವಿಟ್ಲ ಪಡ್ನೂರು ಗ್ರಾಮದಲ್ಲಿ ಒಟ್ಟು 6.25 ಕೋಟಿ ಅನುದಾನಗಳ ಶಿಲಾನ್ಯಾಸ ಶಂಕುಸ್ಥಾಪನೆ ಮತ್ತು ಕಾಮಗಾರಿಗಳ ವೀಕ್ಷಣೆ ನಡೆಸಿದರು.

More from the blog

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...