Sunday, April 14, 2024

ಶಿವಾನಂದ ಕರ್ಕೇರಾ ಅವರ ನಿಧನ ನಾಟಕ , ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ : ಕಿಶೋರ್ ಶೆಟ್ಟಿ

ಮಂಗಳೂರು : ಹಿರಿಯ ನಾಟಕಕಾರ, ಸಾಹಿತಿ ಶಿವಾನಂದ ಕರ್ಕೇರಾ ಅವರ ಅಗಲುವಿಕೆ ನಾಟಕ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಉಂಟು ಮಾಡಿದೆ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದರು.
ನಗರದ ಮ್ಯಾಪ್ಸ್ ಕಾಲೇಜಿನಲ್ಲಿ ತುಳು ಪರಿಷತ್ ಹಾಗೂ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಗುರುವಾರ ನಡೆದ ಶಿವಾನಂದ ಕರ್ಕೇರಾ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಟಕ ಕಲಾವಿದರ ಯೋಗಕ್ಷೇಮದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಕರ್ಕೇರಾ ಅವರು ತನ್ನ ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಕಾರ್ಯನಿರ್ವಹಿಸುತ್ತಿದ್ದವರು ಕಿಶೋರ್ ಶೆಟ್ಟಿ ಹೇಳಿದರು.
ಸಮಾರಂಭದಲ್ಲಿ ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ್ ನೀರ್ ಮಾರ್ಗ ಅವರು ಮಾತನಾಡಿ, ಕರ್ಕೇರಾ ಅವರು ತುಳು ಅಕಾಡೆಮಿ ಸದಸ್ಯರಾಗಿ ತುಂಬಾ ಬದ್ಧತೆಯಿಂದ ಕಾರ್ಯನಿರ್ವಹಿಸಿ, ಅಕಾಡೆಮಿ ವತಿಯಿಂದ ತುಳು ನಾಟಕೋತ್ಸವ ನಡೆಸಲು ಮೂಲ ಪ್ರೇರಕರಾಗಿದ್ದರು, ಅವರು ತನ್ನ ಇಳಿ ವಯಸ್ಸಿನಲ್ಲೂ ತುಳು ಎಂ.ಎ ವಿದ್ಯಾರ್ಥಿಯಾಗಿ ಪರೀಕ್ಷೆ ಮುಗಿಸಿದ ಅವರ ಜೀವನೋತ್ಸವ ಮೆಚ್ಚುವಂತಹದು ಎಂದು ಹೇಳಿದರು.
ತುಳು ನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರು ಮಾತನಾಡಿ, ಕರ್ಕೇರಾ ಅವರು ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ಯಾಂಕ್ ಗೆ ಸ್ವಂತ ಕಟ್ಟಡ ನಿರ್ಮಿಸಲು ಕಾರಣಕರ್ತರಾಗಿದ್ದರು ಎಂದು ಸ್ಮರಿಸಿದರು .
ತುಳು ಪರಿಷತ್ ಇನ್ನೋರ್ವ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಅವರು ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ ಕರ್ಕೇರಾ ಅವರು ಅಚ್ಚಳಿಯದ ನೆನಪುಗಳನ್ನು ಉಳಿಸಿ ಹೋಗಿದ್ದಾರೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ ತಮ್ಮ ಲಕ್ಷ್ಮಣ್ ಅವರು ಮಾತನಾಡಿ, ಶಿವಾನಂದ ಕರ್ಕೇರಾ ಅವರ ಅಶಕ್ತರಿಗೆ ಸದಾ ನೆರವು ನೀಡುತ್ತಿದ್ದರು, ಉದಾರ ದಾನಿಯಾಗಿದ್ದರು ಮಾತ್ರವಲ್ಲದೆ ನಾಟಕ, ಸಂಘಟನೆಗಳಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯ ವ್ಯಕ್ತಿಯಾಗಿ, ಕೌಟುಂಬಿಕ ನೆಲೆಯಲ್ಲಿ ಶಿಸ್ತುಬದ್ಧ ಜೀವನ ಮೌಲ್ಯವನ್ನು ತೊಡಗಿಸಿಕೊಂಡವರಾಗಿದ್ದರು ಎಂದು ಬಣ್ಣಿಸಿದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಅವರು ಮಾತನಾಡಿ, ಕರ್ಕೇರಾ ಅವರ ಹಸ್ತಪ್ರತಿಗಳ ಸಂಗ್ರಹವಾಗಬೇಕು, ಸಾಧನೆಯ ದಾಖಲೀಕರಣವಾಗಬೇಕೆಂದು ಹೇಳಿದರು.
ತುಳು ಎಂ.ಎ. ವಿದ್ಯಾರ್ಥಿ ಹರೀಶ್ ಅವರು ಮಾತನಾಡಿ, ತುಳು ಎಂ.ಎ. ಪಠ್ಯದ ರಂಗಭೂಮಿ ಪಠ್ಯದಲ್ಲಿ ಶಿವಾನಂದ ಕರ್ಕೇರಾ ಅವರ ಹೆಸರು ಉಲ್ಲೇಖಗೊಂಡಿದ್ದನ್ನು ಓದುವಾಗ ವಿದ್ಯಾರ್ಥಿಗಳು ಅವರ ಬಗ್ಗೆ ಅಭಿಮಾನ ಪಡುತ್ತಿದ್ದರು. ಹಿರಿಯ ವಿದ್ಯಾರ್ಥಿಯಾಗಿ ಅವರು ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸ್ನೇಹಮಹಿಯಾಗಿದ್ದು , ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.
ಸಂಸ್ಕಾರ ಭಾರತಿ ಸಂಘಟನೆಯ ಸಂಚಾಲಕ ಚಂದ್ರಶೇಖರ್ ಶೆಟ್ಟಿ, ತುಳು ಪರಿಷತ್ ಉಪಾಧ್ಯಕ್ಷ ಡಾ.ವಾಸುದೇವ ಬೆಳ್ಳೆ, ಹಿರಿಯ ಸಂಘಟಕ ಎಂ.ಎಸ್. ರಾವ್ , ನಾಟಕ ಕಲಾವಿದರ ಒಕ್ಕೂಟದ ಕ್ಷೇಮನಿಧಿ ಸಂಚಾಲಕ ಪ್ರದೀಪ್ ಆಳ್ವಾ, ಪ್ರಧಾನ ಕೋಶಾಧಿಕಾರಿ ಮೋಹನ್ ಕೊಪ್ಪಳ, ಲೇಖಕ ರಘು ಇಡ್ಕಿದು, ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಅವರು ನುಡಿ ನಮನ ಸಲ್ಲಿಸಿದರು.
ಸಮಾರಂಭದಲ್ಲಿ ಸೇವಾದಳ ಅಧ್ಯಕ್ಷ ಸುರೇಶ್ ಶೆಟ್ಟಿ, ಪರಿಷತ್ ಖಜಾಂಚಿ ಸುಬೋಧಯ ಆಳ್ವಾ, ಲಯನ್ಸ್ ಕ್ಲಬ್ ನ ತಾರಾನಾಥ್ ಶೆಟ್ಟಿ ಬೋಳಾರ್, ಗೋಕುಲ್ ಕದ್ರಿ, ತುಳು ಅಕಾಡೆಮಿ ಮಾಜಿ ಸದಸ್ಯೆ ಸುಧಾ ನಾಗೇಶ್, ಕಲಾವಿದೆ ಶೋಭಾ ಶೆಟ್ಟಿ, ಲಲಿತಕಲಾ ಆರ್ಟ್ಸ್ ನ ಧನ್ ಪಾಲ್, ನಾಟಕ ಕಲಾವಿದರ ಒಕ್ಕೂಟದ ಕ್ಷೇಮ ನಿಧಿ ಸಹ ಸಂಚಾಲಕ ರಾಘವ ಭಟ್ ಶರವು, ದಿನೇಶ್ ಕುಂಪಲ, ನಾಗೇಶ್ ದೇವಾಡಿಗ, ಹರೀಶ್ ಶಕ್ತಿನಗರ, ಮಧು ಸುರತ್ಕಲ್, ಧನಪಾಲ್ ಶೆಟ್ಟಿಗಾರ್, ಕಿಶೋರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ಹಿಸಿದರು. ತುಳು ನಾಟಕ ಕಲಾವಿದರ ಒಕ್ಕೂಟದ ಖಜಾಂಚಿ ಮೋಹನ್ ಕೊಪ್ಪಳ ವಂದಿಸಿದರು.

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...