Thursday, April 25, 2024

ಅ.10 ರಂದು ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಆಯುರ್ವೇದಿಕ್ ತಜ್ಞರಿಂದ ಆರೋಗ್ಯ ಶಿಬಿರ

ಬಿ.ಸಿ.ರೋಡ್ : ಲಯನ್ಸ್ ಕ್ಲಬ್ ಬಂಟ್ವಾಳ ಇದರ ವತಿಯಿಂದ ಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 10ರಂದು ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬೃಹತ್ ಉಚಿತ ಆಯುರ್ವೇದಿಕ್ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಶ್ಯಾಂ ತಿಳಿಸಿದರು.

ಅವರು ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ಡಾ. ಗೀತ್‌ಪ್ರಕಾಶ್ ಶಿಬಿರವನ್ನು ಉದ್ಘಾಟಿಸಿದ್ದಾರೆ. ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲಯನ್ ಕೃಷ್ಣಶ್ಯಾಮ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲಯನ್ಸ್‌ನ ಪ್ರಥಮ ಜಿಲ್ಲಾ ಉಪರಾಜ್ಯಪಾಲ ಲಯನ್ ವಸಂತ ಕುಮಾರ್ ಶೆಟ್ಟಿ ಮತ್ತು ಯೇನಪೋಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್ ಎಚ್. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಶಿಬಿರ ಸಂಚಾಲಕ ರಝಾಕ್ ಮಾತನಾಡಿ ಬಿ.ಸಿ.ರೋಡಿನಲ್ಲಿ ಪ್ರಪ್ರಥಮ ಬಾರಿಗೆ ಯೇನಪೋಯ ಆಯುರ್ವೇದಿಕ್ ಕಾಲೇಜಿನ ಆಯುರ್ವೇದಿಕ್ ನುರಿತ ತಜ್ಞರಿಂದ ಉಚಿತ ಶಿಬಿರ ನಡೆಯಲಿರುವುದರಿಂದ ತಪಾಸಣೆಯಾದ ಶಿಬಿರಾರ್ಥಿಗಳಿಗೆ ಉಚಿತ ಔಷಧಿ ವಿತರಿಸಲಿದ್ದಾರೆ. ಇದೇ ಸಂದರ್ಭ ಆಯುಷ್ ಮಂತ್ರಾಲಯ ನವದೆಹಲಿ ಇವರಿಂದ ನಿರ್ದೇಶಿಸಲ್ಪಟ್ಟ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಯುಷ್ ಕ್ವಾಥ ಚೂರ್ಣವನ್ನು ರಿಯಾಯಿತಿ ದರದಲ್ಲಿ ದೊರೆಯಲಿದೆ.
ಲಯನ್ಸ್ ಕ್ಲಬ್‌ನ ಪೂರ್ವಾಧ್ಯಕ್ಷ ಜಯಂತ್ ಶೆಟ್ಟಿ ಈ ಸಂದರ್ಭ ಮಾತನಾಡಿ, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಂತ್ಯಾದ್ಯಕ್ಷ ಲಯನ್ ಸಂಜೀವ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜಕ್ಕೆ ಅತೀ ಅವಶ್ಯಕವಾಗುವ ಶೈತ್ಯಾಗಾರವನ್ನು ನಮ್ಮ ಲಯನ್ಸ್ ಕ್ಲಬ್‌ನ ವತಿಯಿಂದ ನವೆಂಬರ್‌ನಲ್ಲಿ ಕೊಡುಗೆಯಾಗಿ ನೀಡಲಿದ್ದೇವೆ. ಬಂಟ್ವಾಳ ಲಯನ್ಸ್ ಕ್ಲಬ್‌ನ ವತಿಯಿಂದ ಪ್ರತೀ ಸೋಮವಾರ ಮತ್ತು ಬುಧವಾರ ಲಯನ್ಸ್ ನಿರ್ಮಲ ಹೃದಯ ಫಿಸಿಯೋಧೆರಿ ಕೇಂದ್ರ, ಪ್ರತೀ ಬುಧವಾರ ಲಯನ್ಸ್ ನಿರ್ಮಲ ಹೃದಯ ವಾಕ್ ಮತ್ತು ಶ್ರವಣ ಚಿಕಿತ್ಸಾ ಕೇಂದ್ರ, ಪ್ರತೀ ಸೋಮವಾರದಿಂದ ಶನಿವಾರ (ಎರಡನೇ ಶನಿವಾರ ಹೊರತು ಪಡಿಸಿ) ಲಯನ್ಸ್ ವಿಶೇಷ ಮಕ್ಕಳ ಶಾಲೆ, ತಿಂಗಳ ಪ್ರಥಮ ಆದಿತ್ಯವಾರ ಲಯನ್ಸ್ ಮಾನಸಿಕ ರೋಗಿಗಳ ತಪಾಸಣೆ, ತಿಂಗಳ ಎರಡನೇ ಮಂಗಳವಾರ ಲಯನ್ಸ್ ಮಹಿಳಾ ಸಬಲೀಕರಣ ಕಾರ್ಯಾಗಾರ, ಪ್ರತೀ ಸೋಮವಾರದಿಂದ ಶುಕ್ರವಾರ ಮಧ್ಯಾಹ್ನ ನಂತರ ಲಯನ್ಸ್ ಮಹಿಳಾ ಹೊಲಿಗೆ ಮತ್ತು ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರ, ಪ್ರತೀ ಗುರುವಾರ ಬೆಳಿಗ್ಗೆ ಸ್ವಚ್ಛ ಭಾರತ – ಸ್ವಚ್ಛ ಬಂಟ್ವಾಳ, ಸಾರ್ವಜನಿಕ ಉಪಯೋಗಕ್ಕಾಗಿ ಲಯನ್ಸ್ ಪಾರ್ಕ್ ಮತ್ತು ಲಯನ್ಸ್ ಅವೆನ್ಯೂ, ವೈದ್ಯಕೀಯ ಶಿಬಿರಗಳು, ಕಣ್ಣು ತಪಾಸಣೆ ಹಾಗೂ ಚಿಕಿತಸಾ ಶಿಬಿರ, ರಕ್ತದಾನ ಶಿಬಿರಗಳು, ಮಧುಮೇಹ ಮತ್ತು ಹೃದಯ ತಪಾಸಣೆ ಶಿಬಿರ, ಕಾನೂನು ಮಾಹಿತಿ ಕಾರ್ಯಾಗಾರ, ಸ್ವಉದ್ಯೋಗ ತರಬೇತಿ, ಯುವ ಸಬಲೀಕರಣ, ಹಸಿವು ನಿರ್ಮೂಲನೆ ಶಾಶ್ವತ ಯೋಜನೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್‌ನ ನಿರ್ದೇಶಕ ಲಕ್ಷ್ಮಣ ಕುಲಾಲ್, ಕಾರ್ಯದರ್ಶಿ ವೈಕುಂಠ ಕುಡ್ವಾ, ಕೋಶಾಧಿಕಾರಿ ದಿಶಾ ಆಶೀರ್ವಾದ್ ಉಪಸ್ಥಿತರಿದ್ದರು.

More from the blog

ಲೋಕಸಭಾ ಚುನಾವಣೆ : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಈ ದಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಐವರು ಮಾಸ್ಟರ್ ಟ್ರೈನರ್ ಗಳ ನೇತೃತ್ವದಲ್ಲಿ...

ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸುಮಾರು 2,88,19,342 ಮತದಾರರು...

ಬಂಟ ಬ್ರಿಗೇಡ್ ಹೆಸರಿನಲ್ಲಿ ಕರಪತ್ರ ತಯಾರಿಸಿ ಅಪಪ್ರಚಾರ : ಪಣೋಲಿಬೈಲಿನಲ್ಲಿ ಸಜೀಪಮೂಡ ಬಿಜೆಪಿ ಕಾರ್ಯಕರ್ತರಿಂದ ಪ್ರಾರ್ಥನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದು ಹಿಂದುತ್ವದ ಭದ್ರಕೋಟೆಯನ್ನು ಚಿದ್ರಮಾಡುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಅಸ್ತಿತ್ವವೇ ಇಲ್ಲದೇ ಇರುವ ಬಂಟ ಬ್ರಿಗೇಡ್ ಎಂಬ ನಾಮದ ಅಡಿಯಲ್ಲಿ ಕರಪತ್ರ ತಯಾರಿಸಿ ಜಾತಿ ಜಾತಿಗಳ...

ಬಾಲಕಿ ಜೊತೆ ಅಸಭ್ಯ ವರ್ತನೆ : ಪ್ರಕರಣ ದಾಖಲು

ಬಂಟ್ವಾಳ: ಪೊಳಲಿಯಲ್ಲಿ ಬಾಲಕಿಯನ್ನು ಅಪ್ಪಿ ಹಿಡಿದು ಅನುಚಿತವಾಗಿ ವರ್ತಿಸಿದ ಘಟನೆಯು ಎ. ೨೪ರಂದು ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್...