Thursday, April 18, 2024

ಕುಟುಂಬ ಮಿಲನ ಕಾರ್ಯಕ್ರಮ

ಬಂಟ್ವಾಳ: ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಣಿ ಮಹಾಶಕ್ತಿ ಕೇಂದ್ರದ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಬದಿಗುಡ್ಡೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಾತನಾಡಿ, ಪಂಚಾಯತ್ ಗೆ ಕೇಂದ್ರದ ಮೋದಿ ಸರಕಾರ 14 ಮತ್ತು 15 ಹಣಕಾಸು ಯೋಜನೆಯಡಿ ನೇರ ಅನುದಾನ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಮಾಣಿ ಗ್ರಾಮಕ್ಕೆ ಶಾಸಕನಾಗಿ 2 ವರ್ಷದಲ್ಲಿ 2 ಕೋಟಿ ಅನುದಾನ ಒದಗಿಸಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಿತ್ತಿದ್ದು, ಮಾಣಿ ಗ್ರಾಮದಲ್ಲಿ ಕೇಂದ್ರ ಸರಕಾರದ ಕೃಷಿ ಸಮ್ಮಾನ್ ಯೋಜನೆಯಡಿ 416 ಫಲಾನುಭವಿಗಳಿದ್ದು, ವಾರ್ಷಿಕವಾಗಿ ತಲಾ 10000ದಂತೆ ಸಹಾಯಧನ ಪಡೆಯುತ್ತಿದ್ದಾರೆ.

ಇತ್ತೀಚೆಗೆ ನಡೆದ ಆಯುಷ್ಮಾನ್ ಕಾರ್ಡ್ ಅಭಿಯಾನದಲ್ಲಿ 1200 ಜನರಿಗೆ ಉಚಿತ ಕಾರ್ಡ್ ನ್ನು ಮಾಣಿ ಬಿಜೆಪಿ ಮಾಡಿದ್ದು, ಪ್ರಶಂಸನೀಯವಾಗಿದ್ದು, ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಮಾಣಿಯಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣವನ್ನು ಜನತೆ ಬೆಂಬಲಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ನಿರ್ದೇಶಕಿ ಸುಲೋಚನ ಜಿ.ಕೆ. ಭಟ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ವಿಟ್ಲಪಡ್ನೂರು, ಡೊಂಬಯ ಅರಳ, ಪ್ರಮುಖರಾದ ಗಣೇಶ್ ರೈ ಮಾಣಿ, ಪುಷ್ಪರಾಜ್ ಚೌಟ, ನಾರಾಯಣ ಶೆಟ್ಟಿ, ಹರೀಶ್ ಕುಲಾಲ್, ನಾರಾಯಣ ಭಟ್, ಮಹಾಬಲ ಚೌಟ ಮತ್ತು ಪ್ರಮುಖ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

More from the blog

ಬಿಸಿರೋಡಿನ ವಾಣಿಜ್ಯ ಕಟ್ಟಡದ ಜಗುಲಿಯಲ್ಲಿ ಚೆಲ್ಲಿರುವ ರಕ್ತ : ಹಲವು ಅನುಮಾನ

ಬಂಟ್ವಾಳ: ಬಿಸಿರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ. ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...