Friday, April 19, 2024

ತಜ್ಞರ ಸಲಹೆ ಪಡೆದು ಕುಸಿದ ಕಾರಿಂಜ ತಡೆಗೋಡೆ ಪುನರ್‌ನಿರ್ಮಾಣ : ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ : ಕಳೆದ ಎರಡು ದಿನಗಳ ಹಿಂದೆ ಕುಸಿದು ಬಿದ್ದಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆಯ ಪುನರ್ ನಿರ್ಮಾಣ  ಕಾಮಗಾರಿಯನ್ನು ತಜ್ಞರ ಮಾರ್ಗದರ್ಶನ ಪಡೆದು ಶೀಘ್ರ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು   ಅವರು ಹೇಳಿದರು.
ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪತ್ರಕರ್ತರ ಜೊತೆ ಮಾತನಾಡಿದರು.


ತನ್ನ ಶಿಫಾರಸ್ಸಿನಂತೆ ತಾಲೂಕಿನಲ್ಲಿ ಕಾರಿಂಜ ದೇವಸ್ಥಾನ ಸಹಿತ ಈಗಾಲೇ ನಾಲ್ಕು ಕ್ಷೇತ್ರಗಳನ್ನು  ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದ್ದು, ಕಾರಿಂಜ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ ಸರಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರ‌ಮ ಗಣಿಗಾರಿಕೆಯಿಂದ ದೇವಸ್ಥಾನದ ತಡೆಗೋಡೆಗೆ ಹಾನಿಯುಂಟಾಗಿದೆ ಎಂದು ಸ್ಥಳೀಯರು ಶಾಸಕರಲ್ಲಿ ದೂರಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕರು,  ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಹದಿನೈದು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ ಎಂದವರು ಭರವಸೆ ನೀಡಿದರು.

ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ,  ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಆಡಳಿತಾಧಿಕಾರಿ ನೋಣಯ್ಯ ನಾಯ್ಕ್,  ಗ್ರಾಮಣಿಯರಾದ ಗಣಪತಿ ಮುಚ್ಚಿನ್ನಾಯ,  ವೆಂಕಟರಮಣ ಮುಚ್ಚಿನ್ನಾಯ,  ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು,   ಅರ್ಚಕರಾದ ಜಯಶಂಕರ ಉಪಾಧ್ಯಾಯ,  ಮಿಥುನ್ ರಾಜ್ ನಾವಡ, ಪ್ರಮುಖರಾದ ಮೋಹನ ಆಚಾರ್ಯ, ಚಿದಾನಂದ ರೈ, ಕೆ.ರಾಜಗೋಪಾಲ ನಾಯಕ್,  ಸದಾಶಿವ ಪ್ರಭು,  ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರವೀಣ ಪೂಜಾರಿ,  ಸೂರ್ಯಹಾಸ ಆಚಾರ್ಯ,  ರಾಮಕೃಷ್ಣ ಮಯ್ಯ, ರಾಧಾಕೃಷ್ಣ ಮಯ್ಯ, ಚಂದ್ರಶೇಖರ ಶೆಟ್ಟಿ ಕ್ಷೇತ್ರ ಮಂಡಲ ಪ್ರ. ಕಾರ್ಯದರ್ಶಿಗಳಾದ  ರವೀಶ ಶೆಟ್ಟಿ,  ಡೊಂಬಯ್ಯ ಅರಳ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.   –

More from the blog

ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಏ.25ರ ಸಂಜೆ 6ರಿಂದ 26ರ ರಾತ್ರಿ 8ರ...

ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ : ಮಹಿಳೆ ಗಂಭೀರ

ಬೆಳ್ತಂಗಡಿ: ತನ್ನ ಮನೆಯ ಸಾಕು ನಾಯಿ ಜತೆ ಮನೆ ಮಾಲಕಿ ಮುದ್ದಾಡುವಾಗ ಏಕಾಏಕಿ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೆ ಗಂಭೀರ ಗಾಯ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ...

ಬಿಸಿರೋಡಿನ ವಾಣಿಜ್ಯ ಕಟ್ಟಡದ ಜಗುಲಿಯಲ್ಲಿ ಚೆಲ್ಲಿರುವ ರಕ್ತ : ಹಲವು ಅನುಮಾನ

ಬಂಟ್ವಾಳ: ಬಿಸಿರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ. ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...