Wednesday, April 17, 2024

ಬುರೂಜ್ ಶಾಲೆಯಲ್ಲಿ ಗಾಂಧಿ ಜಯಂತಿ

ಬಿ.ಸಿ.ರೋಡ್ : ಕಲಾಬಾಗಿಲು ರಝಾನಗರ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಗಾಂಧಿ ಜಯಂತಿ ಆಚರಿಸಲಾಯಿತು.
ಶಾಲಾ ಸಂಚಾಲಕ ಶೇಕ್  ರಹ್ಮತ್ತುಲ್ಲಾಹ್ ಮಹಾತ್ಮಾ ಗಾಂಧಿಜಿಯ ಭಾವ ಚಿತ್ರಕ್ಕೆ ಮೂಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಶೇಕ್ ಸಾದಿಯ ಖುರಾನ್,ಸುಪ್ರೀತಾ ಭಗವತ್ ಗೀತೆ, ಎಲ್ಸಿ ಬೈಬಲ್ ಪಠಿಸಿದರು.
ಶಿಕ್ಷಕಿಯರಾದ ಚೇತನಾ, ಪ್ರಿನ್ಸಿ ಬ್ರಿಟ್ಟೊ, ಹರಿಣಾಕ್ಷಿ, ಶೇಕ್ ಅಸ್ಮಾ, ನೂರ್ ಜಹಾನ್, ಚಂದ್ರಾವತಿ, ಅನ್ನ ಪೂರ್ಣೇಷ್ವರಿ ಮಮತಾ ಸರ್ವ ಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸ್ಥಳೀಯರಾದ ಅಬ್ದುಲ್ ಶುಕೂರ್ ಉಮ್ಮೆ ಅಯ್ಮನ್, ಲೀಶಾ ಶೆಟ್ಟಿ, ವಿಶಾಲ್ ಕುಲಾಲ್ ಪ್ರಥ್ವೀನ್, ಆಫ್ ನಾನ್  ಮೊದಲಾದವರು ಉಪಸ್ಥಿತರಿದ್ದರು.
ಚೇತನ ಸ್ವಾಗತಿಸಿ, ಮಮತಾ ವಂದಿಸಿದರು. ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.

More from the blog

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇವರು1942 ಆಗಸ್ಟ್ 19ರಂದು ಮೈಸೂರು...