Friday, April 12, 2024

ನವೆಂಬರ್ ನಿಂದ ಬದಲಾಗಲಿದೆ ಎಲ್.ಪಿ.ಜಿ. ಸಿಲಿಂಡರ್ ಡೆಲಿವರಿ ನಿಯಮ

ಬೆಂಗಳೂರು: ನವೆಂಬರ್ ತಿಂಗಳಿನಿಂದ ಸಿಲಿಂಡರ್ ಡಿಲೆವರಿ ನಿಯಮದಲ್ಲಿ ಬದಲಾವಣೆಯಾಗಲಿದೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಗಟ್ಟಲು ಹಾಗೂ ಗ್ರಾಹಕರಿಗೆ ಸಿಲಿಂಡರನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ. ಈ ಹೊಸ ವ್ಯವಸ್ಥೆಯನ್ನು ಡಿಎಸಿ ಅಂದರೆ ಡೆಲಿವರಿ ದೃಢೀಕರಣ ಕೋಡ್ ಎಂದು ಕರೆಯಲಾಗುತ್ತಿದೆ.
ಸಿಲಿಂಡರ್ ಬುಕ್ ಆದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೋಡ್ ಕಳುಹಿಸಲಾಗುತ್ತದೆ. ಡೆಲಿವರಿ ಬಾಯ್ ಮನೆಗೆ ಬಂದಾಗ ಆ ಕೋಡ್ ತೋರಿಸಬೇಕು. ಕೋಡ್ ನೀಡಿದ ಬಳಿಕ ಡೆಲಿವರಿ ಬಾಯ್ ಸಿಲಿಂಡರ್ ನೀಡಲಿದ್ದಾನೆ.
ಮೊಬೈಲ್ ಸಂಖ್ಯೆ ನವೀಕರಿಸದ ಗ್ರಾಹಕರಿದ್ದರೆ, ಡೆಲಿವರಿ ಬಾಯ್ ಬಳಿ ಅಪ್ಲಿಕೇಷನ್ ಇರುತ್ತದೆ. ಅದರಲ್ಲಿ ಅಪ್ಡೇಟ್ ಮಾಡುವ ಮೂಲಕ ಕೋಡ್ ಪಡೆಯಬೇಕಾಗುತ್ತದೆ. ವಿಳಾಸ ತಪ್ಪಾಗಿರುವ ಅಥವಾ ಮೊಬೈಲ್ ನಂಬರ್ ತಪ್ಪಾಗಿರುವ ಸಂದರ್ಭದಲ್ಲಿ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ತೈಲ ಕಂಪನಿಗಳು ಸದ್ಯ 100 ಸ್ಮಾರ್ಟ್ ಸಿಟಿಗಳಲ್ಲಿ ಈ ಯೋಜನೆ ಜಾರಿಗೆ ತರಲಿವೆ. ಆ ನಂತರ ಬೇರೆ ನಗರಗಳಿಗೆ ಇದನ್ನು ವಿತರಿಸುವ ಬಗ್ಗೆ ಸೂಚನೆ ಇದೆ.

More from the blog

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...