Thursday, October 26, 2023

ಕೊವೀಡ್-19 ಜಾಗೃತಿ ಕಾರ್ಯಕ್ರಮ

Must read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆ ಇದರ ವತಿಯಿಂದ ನಗರದ ಪಡೀಲಿನಲ್ಲಿ ನಿರ್ಮಾಣದ ಹಂತದಲ್ಲಿರುವ ಹೊಸ ಜಿಲ್ಲಾಧಿಕಾರಿ ಕಟ್ಟಡ ಸಂಕೀರ್ಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡದ ಕೂಲಿ ಕಾರ್ಮಿಕರಿಗೆ ಮುಖಕವಚ, ಸ್ಯಾನಿಟೈಸರ್ ಹಾಗೂ ಕೋರೋನಾ ಮಾಹಿತಿ ಪತ್ರವನ್ನು ಹಂಚಲಾಯಿತು.

ದ.ಕ. ಜಿಲ್ಲಾ ಗೃಹರಕ್ಷಕ ದಳ ಇದರ ಸಮಾದೇಷ್ಟರು ಮತ್ತು ದ.ಕ.ಜಿಲ್ಲಾ ನಾಗರೀಕ ರಕ್ಷಣಾ ಪಡೆ ಇದರ ಚೀಫ್‌ವಾರ್ಡನ್ ಆದ ಡಾ|| ಮುರಲೀ ಮೋಹನ ಚೂಂತಾರು ಇವರು ಈ ಸಂದರ್ಭದಲ್ಲಿ ಮಾತನಾಡಿ, ಕೋರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ರೋಗ ಸಮುದಾಯದಲ್ಲಿ ತೀವ್ರವಾಗುತ್ತಿದ್ದು, ಎಚ್ಚರಿಕೆ ಅಗತ್ಯ ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಎನ್‌ಡಿಆರ್‌ಎಫ್‌ನ 10ನೇ ಬೆಟಾಲಿಯನ್ ಕಮಾಂಡರ್ ಆದ ಗೋಪಾಲ್‌ಲಾಲ್ ಮೀನ ಹಾಗೂ ಪೌರರಕ್ಷಣಾ ಪಡೆಯ ಕಾರ್ಯಕರ್ತ ನಿತಿನ್ ಹಾಗೂ ಸುಮಾರು 50 ಮಂದಿ ಕೆಲಸಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More articles

Latest article