Wednesday, April 24, 2024

ತುಂಬೆ-ಸಜೀಪ ಸಂಪರ್ಕದ ಸೇತುವೆ ನಿರ್ಮಾಣದ ಪ್ರಸ್ತಾಪ ಸರಕಾರದ ಮುಂದಿದೆ: ಯು.ಟಿ.ಖಾದರ್

ಬಂಟ್ವಾಳ: ತುಂಬೆ -ಸಜೀಪ ಸಂಪರ್ಕದ ಸೇತುವೆ ನಿರ್ಮಾಣದ ಪ್ರಸ್ತಾವನೆ ಸರಕಾರದ ಮುಂದಿದ್ದು ಬಂಟ್ವಾಳ ತಾಲೂಕಿನ ಪುದು, ಮೇರೆಮಜಲು, ತುಂಬೆ ಮೂರು ಗ್ರಾಮಗಳನ್ನು ಉಳ್ಳಾಲಕ್ಕೆ ಸೇರಿಸಲು ಬಹಳ ಉಪಯುಕ್ತವಾಗುತ್ತದೆ.

ಮಂಗಳೂರಿನಿಂದ ಅಡ್ಯಾರು ಸಂಪರ್ಕ ಮಾಡುವ ಹರೇಕಳ ಸೇತುವೆ ಕಾಮಗಾರಿ ನಡೆಯುತ್ತಿದ್ದು ಶೀಘ್ರವಾಗಿ ಜನರ ಉಪಯೋಗಕ್ಕೆ ಮುಕ್ತವಾಗುವುದು, ಬಹುಗ್ರಾಮಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಮುಖ್ಯ ರಸ್ತೆ ಹಾಗೂ ಒಳರಸ್ತೆಗಳ ಕೆಲಸ ಪ್ರಗತಿ ಯಲ್ಲಿದೆ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳ 16 ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಕೃತಿವಿಕೋಪದಡಿ ಉಂಟಾದ ನಷ್ಟದ 12 ಫಲಾನುಭವಿಗಳಿಗೆ 352000 ರೂ ಚೆಕ್ ವಿತರಿಸಿ ಮಾತನಾಡಿದರು.

ಹಕ್ಕು ಪತ್ರ ಇಲ್ಲದ ಪ್ರತಿ ಕುಟುಂಬಕ್ಕೂ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಹಂಚಲು ನಾವು ಸಿದ್ದರಿದ್ದೇವೆ. ಉಳ್ಳಾಲ ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ 3500 ಅರ್ಜಿಗಳು ಸ್ವಿಕೃತವಾಗಿದ್ದು ಅದರಲ್ಲಿ 2500 ಕ್ಕೂ ಅಧಿಕ ಕುಟುಂಬಕ್ಕೆ ಹಕ್ಕು ಪತ್ರ ನೀಡಿದ ಸಂತೋಷ ಇದೆ. ಈ ತಿಂಗಳೊಳಗೆ ಎಲ್ಲಾ ಹಕ್ಕು ಪತ್ರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು.
ಹಕ್ಕು ಪತ್ರ ಸಿಗದೆ ಇರುವ ಕೆಲವೊಂದು ಕುಟುಂಬ ಗಳ ಬಗ್ಗೆ ಮಾಹಿತಿ ಪಡೆದು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅವರಿಗೂ ಸಿಗುವ ಕೆಲಸ ಮಾಡುತ್ತೇನೆ.
ಪ್ರಸ್ತುತ ಸಿಕ್ಕಿರುವ ಹಕ್ಕು ಪತ್ರಗಳ ರಕ್ಷಣೆ ಮಾಡಿ ಅದರ ಸದುಪಯೋಗ ಪಡೆದು ಕೊಳ್ಳುವಂತೆ ಅವರು ತಿಳಿಸಿದರು.

ತಾ.ಪಂ.ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ , ಪ್ರಮುಖರಾದ ರಮ್ಲಾನ್ ಮಾತಿಪಳ್ಳ, ಫಾರೂಕ್ ಪರಂಗಿಪೇಟೆ, ಅಬ್ದುಲ್ ರಜಾಕ್, ಮುರಳಿ, ರಹಿಮಾನ್ , ಇಕ್ಬಾಲ್, ಮಜೀದ್ ಪೇರಿಮಾರ್, ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ, ಗ್ರಾಮ ಕರಣೀಕರಾದ ನವ್ಯ, ಪ್ರಕಾಶ್ ಮತ್ತಿಹಳ್ಳಿ, ಗ್ರಾಮ ಸಹಾಯಕ ಶೀತಲ್

More from the blog

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ನ ಹಿಂದುಳಿದ ವರ್ಗಗಳ ಘಟಕದ ಸಭೆ

ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಂಟ್ವಾಳ ಮತ್ಗು ಪಾಣೆಮಂಗಳೂರು ಬ್ಲಾಕ್ ನ ಹಿಂದುಳಿದ ವರ್ಗಗಳ ಘಟಕದ ಸಭೆ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಹಿಂದುಳಿದ...

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವ ಶ್ರೀಮದ್ರಾಮಾಯಣ ಮಹಾಯಜ್ಞ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಂಗಳವಾರ ಶ್ರೀ ಹನುಮೋತ್ಸವದ ಅಂಗವಾಗಿ ಭಗವನ್ನಾಮಸಂಕೀರ್ತನೆ ಮಂಗಲ, ಶ್ರೀಮದ್ರಾಮಾಯಣ ಮಹಾಯಜ್ಞದ ಸಂದರ್ಭದಲ್ಲಿ ದತ್ತಪ್ರಕಾಶ ಪತ್ರಿಕೆಯ 25ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀ ಸಂಸ್ಥಾನದ...

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ: 690 ಕೋಟಿ ರೂ.ಗಳ ವ್ಯವಹಾರ 2.97 ಕೋ. ರೂ. ನಿವ್ವಳ ಲಾಭ

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2023-24ನೇ ಸಾಲಿನಲ್ಲಿ 690 ಕೋಟಿ ರೂ.ಗಳ ವ್ಯವಹಾರ ನಡೆಸಿ, ಹೊಸ ದಾಖಲೆ ನಿರ್ಮಿಸಿದೆ. ಬ್ಯಾಂಕ್ 2.97 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ...

ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಪುತ್ತೂರು: ಪುತ್ತೂರು-ಮಂಗಳೂರು ರೈಲು ಮಾರ್ಗದ ಮುರ ಎಂಬಲ್ಲಿ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಏ.23ರ ಬೆಳಿಗ್ಗಿನ ಜಾವ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಕಾಸರಗೋಡು ಚಂದ್ರಗಿರಿಯ ಮೇಲ್ಪರಂಬ ಕಲನಾಡಿನ ಜಿ ಎನ್ ರ್ಕ್ವಾಟ್ರಸ್ ನಿವಾಸಿ...