Thursday, April 18, 2024

ಪಂಚಾಯತ್ ರಾಜ್ ವ್ಯವಸ್ಥೆಯ ಬೆಳವಣಿಗೆಗಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ಅನನ್ಯ: ಮಾಜಿ ಶಾಸಕ ಯು.ಟಿ.ಖಾದರ್

ಬಂಟ್ವಾಳ: ಮಹಾತ್ಮಾ ಗಾಂಧೀಜಿಯವರ ಕನಸಿನ ಭಾರತದ ತಳಹದಿಯಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಗಾಗಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಸಮಾಜದ ಎಲ್ಲಾ ವಿಭಾಗದ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಹಾಗೂ ಯೋಜನೆಗಳನ್ನು ತಲುಪಿಸುವಲ್ಲಿ ವಿಶೇಷ ಪಾತ್ರ ವಹಿಸಿದೆ ಎಂದು ಮಾಜಿ ಶಾಸಕ ಯು.ಟಿ.ಖಾದರ್‍ ಹೇಳಿದರು.

ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕಾಂಗ್ರೆಸ್ಸಿನ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದೆ ನಡೆಯಲಿರುವ ಚಿನಾವಣೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ-ವರ್ಗದವರಿಗೆ ಮೀಸಲಾತಿಯ ಮೂಲಕ ನ್ಯಾಯ ಒದಗಿಸಿದ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸುವ ಮೂಲಕ ಗ್ರಾಮಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಅವಕಾಶ ಮಾಡಬೇಕು ಎಂದರು.

ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 
ಬಳಿಕ ನಡೆದ ವಿಶೇಷ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ನದ್ ಬಡಗನ್ನೂರು, ಪುತ್ತೂರಿನ ಖ್ಯಾತ ನ್ಯಾಯವಾದಿ ದುರ್ಗಾಪ್ರಸಾದ್, ಪಂಚಾಯತ್ ರಾಜ್ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷದ ಕೊಡುಗೆಯ ಬಗ್ಗೆ ವಿಷಯ ಮಂಡಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಡಿಪು ಬ್ಲಾಕ್ ಸಂಯೋಜಕ ಹೈದರ್ ಕೈರಂಗಳ ಪ್ರಸ್ತಾವನೆಯ ಮಾತನ್ನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಉಮ್ಮರ್ ಪಜೀರ್, ಫಾರೂಕ್ ಫರಂಗಿಪೇಟೆ, ಪ್ರಕಾಶ್ ಶೆಟ್ಟಿ ತುಂಬೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ನಾಸಿರ್ ನಡುಪದವು, ಪದ್ಮನಾಭ ನರಿಂಗಾನ, ಇಮ್ತಿಯಾಝ್ ತುಂಬೆ, ಅರುಣ್ ಡಿಸೋಜ, ಸಮೀರ್ ಪಜೀರ್, ಸತ್ತಾರ್ ಕೈರಂಗಳ, ಜಗದೀಶ್ ಪಲಾಯಿ, ಜಗದೀಶ್ ಗಟ್ಟಿ ತುಂಬೆ, ಸೀತಾರಾಮ ಶೆಟ್ಟಿ, ಹನೀಫ್ ಚಂದಹಿತ್ಲು ಭಾಗವಸಿದ್ದರು.

ಬಶೀರ್ ಮುಡಿಪು ಕಾರ್ಯಕ್ರಮ ನಿರೂಪಿಸಿ, ರಝಾಕ್ ಕುಕ್ಕಾಜೆ ವಂದಿಸಿದರು.

More from the blog

ನರಿಕೊಂಬು: ನವಜೀವನ ವ್ಯಾಯಾಮ ಶಾಲೆ: 21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ...

ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿದ ಪ್ರಕರಣ : ಆರೋಪಿ ಅರೆಸ್ಟ್

ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ. ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಆದಿತ್ಯವಾರ...

ಬಂಟ್ವಾಳ: ಕರ್ಪೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಕಾರ್ಯಕ್ರಮದ ಮೂಲಕ ಬಂಟ್ವಾಳದ...

ವೈದ್ಯರ ಎಡವಟ್ಟು : ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ

ಮಂಗಳೂರಿನ ಹೆಸರಾಂತ ಮನೋರೋಗ ತಜ್ಞರೊಬ್ಬರು ಕುಡಿದ ಮತ್ತಿನಲ್ಲಿ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದು ಆವಾಂತರ ಸೃಷ್ಟಿಸಿದ ಘಟನೆ ನಗರ ಹೊರ ವಲಯದ ಪರಂಗಿಪೇಟೆ ಬಳಿಯ ಅರ್ಕುಳ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕುಡಿದ...