Friday, April 12, 2024

ಹೆಣ್ಮಕ್ಕಳಿಗೆ ಪೂಜನೀಯ ಸ್ಥಾನ ನೀಡಿ ಗೌರವಯುತವಾಗಿ ನೋಡಿಕೊಳ್ಳಿ: ಜಿ.ಪಂ. ಸದಸ್ಯೆ ಮಂಜುಳಾ ಮಾದವ ಮಾವೆ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ, ಗ್ರಾ.ಪಂ. ಕೆದಿಲ ಇವರ ಸಂಯುಕ್ತ ಆಶ್ರಯದಲ್ಲಿ “ಮಗಳನ್ನು ಉಳಿಸಿ, ಮಗಳನ್ನು ಓದಿಸಿ” ಯೋಜನೆಯಡಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಜಾಗೃತಿ ಜಾಥ ಕಾರ್ಯಕ್ರಮ ಕೆದಿಲ ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ಅ.11 ಆದಿತ್ಯವಾರ ಬೆಳಿಗ್ಗೆ ನಡೆಯಿತು.

ಕಾರ್ಯಕ್ರಮ ವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಜಿ.ಪಂ.ಸದಸ್ಯೆ ಮಂಜುಳಾಮಾದವ ಮಾವೆ ಅವರು ಹೆಣ್ಣು ಮಕ್ಕಳನ್ನು ಪೂಜನೀಯ ಭಾವದಿಂದ ನೋಡಿಕೊಂಡಾಗ ಖಂಡಿತ ಅಂತಹ ಗ್ರಾಮ ಜಿಲ್ಲೆ, ರಾಜ್ಯ ದೇಶ ಸಂಪತ್ಬರಿತವಾಗುತ್ತದೆ,ಜೊತೆಗೆ ಈ ದೇಶದ ಭವ್ಯ ವಾದ ಸಂಸ್ಕ್ರತಿ ಯನ್ನು ಭದ್ರವಾಗಿ ಉಳಿಸಿ ಬೆಳೆಸಲು ಸಾಧ್ಯ ವಾಗುತ್ತದೆ ಎಂದು ಅವರು ಹೇಳಿದರು.
ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಿತರನ್ನಾಗಿ ಮಾಡುವ ಜವಾಬ್ಧಾರಿ ಈ ಸಮಾಜದ ಪ್ರತಿಯೊಬ್ಬರಲ್ಲಿ ಇದೆ.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ , ಕ್ರೀಡೆ ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆಯನ್ನು ಬೆಂಬಲಿಸುವ ಮನಸ್ಸು ಮಾಡಿದರೆ ಸಮಾಜಿಕ ಬದಲಾವಣೆಗೆ ನಾಂದಿಯಾಗುತ್ತದೆ, ಸಾಮಾಜಿಕ ಜೀವನದಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸಿನತ್ತ ನಡೆಯಬೇಕು ಎಂದು ಅವರು ಹೇಳಿದರು.
ಪ್ರತಿಭೆಗಳಿಗೆ ಅವಕಾಶ ಸಿಕ್ಕಾಗ ಹೆಣ್ಣು ಮಕ್ಕಳ ಕ್ರಿಯಾಶೀಲತೆ ಯ ಅನಾವರಣಗೊಳ್ಳಲು ಸಹಾಯಾವಾಗುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ತಂದೆ ತಾಯಿ ಮಕ್ಕಳಿಗೆ ಶಿಕ್ಷಣವೆಂಬ ಆಸ್ತಿಯನ್ನು ನೀಡಿದಾಗ ದೇಶದಲ್ಲಿ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ.

ಮಾಜಿ ಗ್ರಾ.ಪಂ.ಅಧ್ಯಕ್ಷ ಅಣ್ಣಪ್ಪ ಕುಲಾಲ್ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳ ರಕ್ಷಣೆಗೆ ಪೂರಕವಾದ ಅಂಶಗಳನ್ನೊಳಗೊಂಡ ಕಾನೂನುಗಳನ್ನು ಸರಕಾರ ಜಾರಿ ಮಾಡಿದ್ದು ಇದರ ಮಾಹಿತಿ ಯನ್ನು ಪ್ರತಿಯೊಬ್ಬರೂ ಪಡೆದುಕೊಂಡು ಭಯಮುಕ್ತ ಸಮಾಜ ನಿರ್ಮಿಸಿ ಎಂದು ಅವರು ಹೇಳಿದರು.

ಉಪನಿರ್ದೇಶಕಿ ಶ್ಯಾಮಲಾ ಮಾತನಾಡಿ ಹೆಣ್ಷುಮಕ್ಕಳಿಲ್ಲದೆ ಮನೆಗೆ ಸ್ಫೂರ್ತಿಯಿಲ್ಲ. ಹಾಗಾಗಿ ನಾವೆಲ್ಲರೂ ಹೆಣ್ಣು ಮಕ್ಕಳ ರಕ್ಷಣೆಗೆ, ಪೋಷಣೆಗೆ ಧ್ವನಿಯಾಗಬೇಕು ಅದಕ್ಕೆ ಪೂರಕವಾದ ವಾತವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷೆ ಜೆಸಿಂತಾ, ಸಂಪನ್ಮೂಲ ವ್ಯಕ್ತಿ ಬಾಲನ್ಯಾಯಮಂಡಳಿ ಸದಸ್ಯ ಉಮೇಶ್ ನಿರ್ಮಲ್, ಗ್ರಾ.ಪಂ.ಸದಸ್ಯರುಗಳಾದ ಉಮೇಶ್ , ಬೇಬಿ, ಕುಶಲ, ಸುದರ್ಶನ , ವಿಟ್ಲ ಸಿ.ಡಿ.ಪಿ.ಒ ಸುಧಾಜೋಶಿ, ಗ್ರಾ.ಪಂ.ಪಿ.ಡಿ.ಒ ಹೊನ್ನಪ್ಪ ಗೌಡ , ವಿಟ್ಲ ಎಸಿಡಿಪಿಒ ಉಷಾ ಡಿ. ಅಂಗನವಾಡಿ ಕಾರ್ಯಕರ್ತೆಯರು , ಮೇಲ್ವಿಚಾರಕಿಯರು ಆರೋಗ್ಯ ಇಲಾಖಾ ಸಿಬ್ಬಂದಿ ಗಳು ಉಪಸ್ಥಿತಿ ರಿದ್ದರು.
ಹಿರಿಯ ಮೇಲ್ವಿಚಾರಕಿ ಶಾರದ ಮೇಲ್ವಿಚಾರಕಿಯರಾದ ಲೋಲಾಕ್ಷಿ, ಗುಣವತಿ, ಸೋಮಕ್ಕ, ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಪೆರಮೊಗರು ಜಂಕ್ಷನ್ನಲ್ಲಿ ಜಾಗೃತಿಯ ಜಾಥದ ಉದ್ಘಾಟನೆಯನ್ನು ಕೆದಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಲಯನ್ಸ್ ಅಧ್ಯಕ್ಷ ಅವರ ಕೈಗೆ ಕಾರ್ಯಕ್ರಮದ ಬ್ಯಾನರ್ ನೀಡುವ ಮೂಲಕ ನಡೆಸಲಾಯಿತು.
ಬಳಿಕ ಜಾಥ ಪೆರಮೊಗರುವಿನಿಂದ ರಸ್ತೆ ಮೂಲಕ ಕೆದಿಲ ಭಜನಾಮಂದಿರದವರಗೆ ಹೋಗಿ ವಾಪಸು ಪಂಚಾಯತ್ ಅವರಣದಲ್ಲಿವರೆಗೆ ಬಂದು ಸಮಾಪನಗೊಂಡಿತು.
ಅ ಬಳಿಕ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಹಾಗೂ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಏರ್ಪಡಿಸಿ ಬಹುಮಾನ ನೀಡಲಾಯಿತು.

ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿನಿಗಳಾದ ಹರ್ಷಿತಾ, ಸುದೀಕ್ಷಾ ಕೊಡಾಜೆ, ಆಶಿಕಾ, ಚೈತ್ರಾ ಎನ್ ಅವರಿಗೆ ಹಾಗೂ
ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ವಿಕಲಾಂಗ ವಿದ್ಯಾರ್ಥಿನಿ ಕು.ಯಶಸ್ವಿನಿ ಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹೆಣ್ಷು ಮಕ್ಕಳ ರಕ್ಷಣೆ, ಶಿಕ್ಷಣ, ಹಾಗೂ ಪೋಷಣೆಯ ಬಗ್ಗೆ ಪ್ರತಿಜ್ಞೆ ಸ್ವೀಕಾರ ಹಾಗೂ
ಕೋವಿಡ್ ೧೯ ಸಂಬಂಧಿಸಿದ ಕರ್ತವ್ಯ ಗಳನ್ನು ತಪ್ಪದೆ ಪಾಲಿಸುತ್ತೇನೆ ಎಂಬ ಪ್ರತಿಜ್ಞೆ ಸ್ವೀಕಾರ ನಡೆಯಿತು.
ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಸ್ವಾಗತಿಸಿ. ಮೇಲ್ವಿಚಾರಕಿ ರೂಪ ವಂದಿಸಿದರು.
ಮೇಲ್ವಿಚಾರಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...