Saturday, April 6, 2024

ಯು.ಪಿ ಪೋಲೀಸರ ಅಮಾನವೀಯ ಕೃತ್ಯ ಖಂಡಿಸಿ ಮಹಿಳಾ ಮತ್ತು ಯುವಜನ ಸಂಘಟನೆಗಳಿಂದ ಪ್ರತಿಭಟನೆ

ಬಂಟ್ವಾಳ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದಲಿತ ಯುವತಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಭಾರತೀಯ ಮಹಿಳಾ ಒಕ್ಕೂಟ(N.F.I.W) ಹಾಗೂ ಅಖಿಲ ಭಾರತ ಯುವಜನ ಫೆಡರೇಶನ್ (A.I.Y.F) ನ ಜಂಟಿ ಆಶ್ರಯದಲ್ಲಿ ಇಂದು ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್‍ಯದರ್ಶಿ ಭಾರತಿ ಪ್ರಶಾಂತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಮೋದಿ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಈ ದೇಶದ ದಲಿತ, ವಿದ್ಯಾರ್ಥಿ, ಯುವಜನ, ಮಹಿಳೆಯರಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರುವ ಆಶ್ವಾಸನೆಯೊಂದಿಗೆ ಪ್ರತಿ ಹೆಣ್ಣು ಮಗಳ ರಕ್ಷಣೆ ಮತ್ತು ಶಿಕ್ಷಣ ಪಡೆಯುವಂತಾಗಬೇಕು ಎಂಬ ಇರಾದೆಯೊಂದಿಗೆ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷಣೆ ನೀಡಿತ್ತು. ಆದರೆ ಅಧಿಕಾರ ಚುಕ್ಕಾಣಿ ಹಿಡಿದು 6 ವರ್ಷ ಕಳೆದಿದೆ. ಅದರೆ ಸರಕಾರದ ಘೋಷಣೆ ಈಡೇರುವ ಬದಲಾಗಿ ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಹೆಣ್ಣು ನಡುರಾತ್ರಿ ಯಾವತ್ತು ನಿರ್ಭೀತಳಾಗಿ ಒಡಾಡುತ್ತಾಳೋ, ಆವತ್ತು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ ಎಂಬುದು ರಾಷ್ಟ್ರಪಿತ ಮಹಾತ್ಮಾಗಾಂಧಿಯವರು ಪರಿಕಲ್ಪನೆ. ಆದರೆ ಇಂದು ರಾತ್ರಿ ಹೊತ್ತು ಬಿಡಿ ಹಗಲು ಕೂಡಾ ಒಂಟಿ ಹೆಣ್ಣು ನಡೆದಾಡಿಕೊಂಡು ಹೋಗಲು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರಕಾರದ ವೈಫಲ್ಯವೇ ಸರಿ ಎಂದು ಛೇಡಿಸಿದರು.
ಇತ್ತೀಚಿಗಿನ ಬೆಳವಣಿಗೆಯಲ್ಲಿ ದೇಶದಾದ್ಯಂತ ಬಿ.ಜೆ.ಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಹೇಳಿದ ಅವರು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಉದಾಹರಿಸಿ ಮಾತನಾಡುತ್ತಾ, ಮೊನ್ನೆ ತಾನೆ ಎಳೆಯ ಪ್ರಾಯದ ದಲಿತ ಯುವತಿ ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ಮೃಗೀಯ ರೀತಿಯ ಸಾಮೂಹಿಕ ಅತ್ಯಾಚಾರ ನಡೆದು ಸಂತ್ರಸ್ಥೆ ಸಾವೀಗೀಡಾದಾಗ ಅವಳ ಮೃತ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸದೇ ಪೋಲೀಸರೇ ಸದ್ದಿಲ್ಲದೇ ಅಮಾನವೀಯವಾಗಿ ಅಂತ್ಯಕ್ರಿಯೆ ನಡೆಸಿರುವ ಹಿಂದೆ ರಾಜ್ಯದ ಮುಖ್ಯಮಂತ್ರಿಯ ಕೈವಾಡವಿದೆ ಎಂದು ಆರೋಪಿಸಿದರು. ಇಡೀ ದೇಶದ ಮಾಧ್ಯಮಗಳು ಬರೇ ಢ್ರಗ್ಸ್ ಮಾಫಿಯಾದ ವಿಚಾರದಲ್ಲೇ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲೇ ಘಟನೆ ನಡೆದ ರಾತ್ರಿ ಒಬ್ಬ ದಿಟ್ಟ ಹೃದಯವಂತೆ ಇಂಡಿಯಾ ಟುಡೆ(ಆಜ್ ತಕ್) ವರದಿಗಾರ್ತಿ ತನುಶ್ರೀ ಪಾಂಡೆ ತನ್ನ ಜೀವದ ಹಂಗು ತೊರೆದು ಆ ಘಟನೆಯನ್ನು ಚಿತ್ರೀಕರಿಸಿದ್ದರಿಂದ ಈ ಹೀನ ಕೃತ್ಯ ಜಗಜ್ಜಾಹೀರವಾಗಿರುವಂತದ್ದು. ಈ ಘಟನೆಯಲ್ಲಿ ಕಾನೂನು ಕಾಪಾಡಬೇಕಾದ ಪೋಲೀಸರೇ ಕಾನೂನು ಬಾಹಿರವಾಗಿ ವರ್ತಿಸಿರುವುದು ಸಂವಿಂದಾನದ ಆಶಯಗಳನ್ನು ಗಾಳಿಗೆ ತೂರಿ ರಕ್ಷಕರೇ ಭಕ್ಷರೆನ್ನುವಂತಾಗಿದೆ ಎಂದರು. ಮಾತ್ರವಲ್ಲ ಜನರಿಗೆ ಕಾನೂನಿನ ಮೇಲೆ ನಂಬಿಕೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.


ಸಂಸ್ಕೃತಿ, ಸಮಾನತೆಯ ಬಗ್ಗೆ ಮಾತನಾಡುವವರು ಉತ್ತರ ಪ್ರದೇಶದ ಆದಿತ್ಯನಾಥನ ರಾಜ್ಯದಲ್ಲಿ ಏನೆಲ್ಲಾ ಅನಾಚಾರಗಳು ನಡೆಯುತ್ತಿದೆ ಎಂಬುದನ್ನು ಸ್ವಲ್ಪ ವಿಮರ್ಶೆ ಮಾಡಬೇಕಿದೆ ಎಂದು ಉಲ್ಲೇಖಿಸದ ಅವರು ಅಲ್ಲಿನ ದೇವಸ್ಥಾನಗಳಿಗೆ ಪ್ರವೇಶ ನಿರ್ಭಂದದಂತಹ ಜಾತಿ ವ್ಯವಸ್ಥೆ, ಮೂಲ ಸೌಕರ್ಯಗಳಿಂದ ವಂಚಿತಾದ ಜನ, ನಿರುದ್ಯೋಗ ಸಮಸ್ಯೆಗಳಿಂದ ಬಳಲುತ್ತಿರುವ ಯುವಜನತೆ, ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿ ಸಮೂಹ, ದಲಿತರು ಮೇಲೆ ಬರದಂತೆ ತಡೆಯುವ ಮೇಲ್ವರ್ಗದ ಜನ ಇದನ್ನೆಲ್ಲಾ ಕೇಂದ್ರ ಸರಕಾರ ಸಮೀಕ್ಷೆ ನಡೆಸಿದೆಯಾ ಎಂಬುದನ್ನು ಪ್ರಶ್ನಿಸಿದರು. ಬರೇ ಕಾವಿ ತೊಟ್ಟು ತಾನೊಬ್ಬ ಎಲ್ಲವನ್ನೂ ಬಿಟ್ಟ ಸನ್ಯಾಸಿಯಂತೆ ವರ್ತಿಸಿದರೆ ಸಾಲದು. ಸಂವಿಂದಾನಾತ್ಮಕವಾಗಿ ಜನರಿಗೆ ಒದಗಿಸಬೇಕಾದ ಮೂಲಭೂತ ಹಕ್ಕುಗಳನ್ನು ಒದಗಿಸುವಂತಾಗಬೇಕು. ಆದರೆ ಯು.ಪಿ.ಯಲ್ಲಿ ಏನೆಲ್ಲಾ ಅನಾಚಾರಗಳು ನಡೆಯುತ್ತಿದೆ ಎಂಬುದು ಜನರು ಅರ್ಥೈಸಿಕೊಂಡು ಬೀದಿಗಿಳಿಯುವ ಕಾಲ ಸನ್ನಿಹಿತಾಗುತ್ತಿದೆ. ಇಂದು ನಾವು ಎಚ್ಚೆತ್ತುಕೊಳ್ಳದಿದ್ದರೆ ನಾಳೆ ನಮ್ಮ ರಾಜ್ಯದಲ್ಲೂ ನಮ್ಮ ನಮ್ಮ ಮನೆ ಆಂಗಳಕ್ಕೆ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ ಅವರು ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ದೌರ್ಜನ್ಯಕ್ಕೊಳಗಾಗಿ ಮೃತಳಾದ ದಲಿತ ಹೆಣ್ಣಿಗೆ ಸೂಕ್ತ ನ್ಯಾಯ ಸಿಗಬೇಕು ಹಾಗೂ ಅಮಾನವೀಯ ಕೃತ್ಯವೆಸಗಿದ ಪೋಲಿಸರಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರಸರಕಾರದಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಎಐವೈಎಫ್ ನ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ ಕೆ., ಸಿಪಿಐ ತಾಲೂಕು ಕಾರ್‍ಯದರ್ಶಿ ಬಿ.ಶೇಖರ್ ಮಾತನಾಡಿದರು.
ನೇತೃತ್ವವನ್ನು ಮಹಿಳಾ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷೆ ವನಜಾಕ್ಷಿ ಬಿ.ಎಸ್., ಕೋಶಾಧಿಕಾರಿ ಸರಸ್ವತಿ ಕಡೇಶಿವಾಲಯ, ಕೇಶವತಿ, ಮಮತಾ ಹಾಗೂ ಎಐವೈಎಫ್ ನ ತಾಲೂಕು ಕಾರ್‍ಯದರ್ಶಿ ಶ್ರೀನಿವಾಸ ಭಂಡಾರಿ, ತಾಲೂಕಿನ ನಾಯಕರಾದ ಸುಕೇಶ್ ಬಿಸಿರೋಡು, ಹರ್ಷಿತ್ ಸುವರ್ಣ ಬಂಟ್ವಾಳ, ಎಂ.ಬಿ. ಭಾಸ್ಕರ, ಕಮಲಾಕ್ಷ ಭಂಡಾರಿ, ವಿದ್ಯಾರ್ಥಿ ನಾಯಕ ಹರ್ಷಿತ್ ರಾಜ್, ಕಾರ್ಮಿಕ ಮುಖಂಡ ಬಾಬು ಭಂಡಾರಿ, ವಹಿಸಿದ್ದರು.
ಪ್ರಾರಂಭದಲ್ಲಿ ಎಐವೈಎಫ್ ನ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ, ವಂದಿಸಿದರು.

More from the blog

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...

ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ

ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಕಚೇರಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕತರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತಾಲೂಕು ಆಡಳಿತ ಸೌಧದಿಂದ ಹಮ್ಮಿಕೊಂಡ ಜಾಥಾ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣ...

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ

ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ಅವರು ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ದೇವಪ್ಪ ಪೂಜಾರಿ,ರವೀಶ್ ಶೆಟ್ಟಿ, ಡೊಂಬಯ...