Sunday, October 22, 2023

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣದಲ್ಲಿ ಒಂಬತ್ತು ಮಂದಿ ಆರೋಪಿಗಳ ಬಂಧನ, ಇನ್ನೂ ಕೆಲವರ ಬಂಧನ ಸಾಧ್ಯತೆ: ಎಸ್.ಪಿ. ಲಕ್ಮೀಪ್ರಸಾದ್

Must read

ಬಂಟ್ವಾಳ: ಸುರೇಂದ್ರ ಬಂಟ್ವಾಳ ಹತ್ಯೆಯ ಪ್ರಮುಖ 9 ಮಂದಿ ಆರೋಪಿಗಳ ಬಂಧನವಾಗಿದ್ದು, ಇನ್ನೂ ಮೂವರು ಬಂಧನವಾಗುವ ಸಾಧ್ಯತೆ ಇವೆ ಎಂದು ಎಸ್.ಪಿ. ಲಕ್ಮೀಪ್ರಸಾದ್ ತಿಳಿಸಿದ್ದಾರೆ.
ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿಗಳಾದ ಸತೀಶ್ ಕುಲಾಲ್, ಗಿರೀಶ್ ಕಿನ್ನಿಗೋಳಿ, ಆಕಾಶ್ ಭವನ್ ಶರಣ್, ವೆಂಕಟೇಶ ಪೂಜಾರಿ, ಪ್ರದೀಪ್, ಶರೀಫ್, ದಿವ್ಯರಾಜ್, ರಾಜೇಶ್, ಅನಿಲ್ ಪಂಪ್ ವೆಲ್  ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.
ಹಣದ ವಿಚಾರ ಹಾಗೂ ವೈಯಕ್ತಿಕ ದ್ವೇಷಕ್ಕಾಗಿ ಕೊಲೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಆಕಾಶ್ ಭವನ್ ಶರಣ್ ನನ್ನು ಪೋಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಿಸಿದಾಗ ಆತನಿಗೆ ಸುರೇಂದ್ರನ ಜೊತೆ ವೈಯಕ್ತಿಕ ದ್ವೇಷವಿದ್ದು,  ಹಳೆಯ ಕೇಸಿನಲ್ಲಿ  ಸುರೇಂದ್ರ ಹೇಳಿ ಮಾಡಿಸಿದ್ದ ಎಂಬ ದ್ವೇಷ ಇತ್ತು.
ಸುರೇಂದ್ರನ ಕೈಯಿಂದ ಪ್ರದೀಪ್ ಸಾಲ ಪಡೆದುಕೊಂಡಿದ್ದ ಅದನ್ನು ತೀರಿಸಲು ಸಾಧ್ಯವಾಗಿಲ್ಲ, ಜೊತೆಗೆ ವೆಂಕಟೇಶ್ ಕೂಡಾ 30 ಲಕ್ಷಕ್ಕೂ ಅಧಿಕ ಸಾಲ ಪಡೆದುಕೊಂಡಿದ್ದ, ತೀರಿಸಲು ಸಾಧ್ಯವಾಗಿರಲಿಲ್ಲ. ಅ ಕಾರಣಕ್ಕಾಗಿ ಅವರವರ ಸ್ವಂತ ಕಾರಣಕ್ಕಾಗಿ ಕೊಲೆ ಮಾಡಿಸಿದ್ದಾರೆ.
 ಸುರೇಂದ್ರ ಬಂಟ್ವಾಳನನ್ನು ಕೊಲೆ ಮಾಡಿ  ಫ್ಲಾಟ್ ನಿಂದ ಸ್ವಲ್ಪ ಹಣವನ್ನು ಕೊಂಡುಹೋಗಿದ್ದಾರೆ ಅದನ್ನು ವಾಪಾಸು ಪಡೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಕರಣದಲ್ಲಿ ಸತೀಶ್ ಕುಲಾಲ್ ಮತ್ತು ಗಿರೀಶ್ ಎಂಬವರು ಕೊಲೆ ಮಾಡಿದ್ದು, ಉಳಿದವರು ಕೊಲೆಗೆ ಒಳಸಂಚು ನಡೆಸಿ ಕೃತ್ಯ ಮಾಡಲು ಸೂಚನೆ ನೀಡಿರುತ್ತಾರೆ.
ಎಸ್.ಪಿ.ಲಕ್ಮೀಪ್ರಸಾದ್, ಡಿ.ವೈಎಸ್.ಪಿ.ವೆಲೆಂಟೈನ್ ಡಿ.ಸೋಜ, ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನಡೆಸಿದ್ದು, ಬಂಟ್ವಾಳ ಎಸ್.ಐ.ಅವಿನಾಶ್, ಗ್ರಾಮಾಂತರ ಎಸ್.ಐ.ಪ್ರಸನ್ನ, ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ.ಸಂಜೀವ, ಬೆಳ್ತಂಗಡಿ ಠಾಣಾ ಎಸ್.ಐ.ನಂದಕುಮಾರ್, ವಿಟ್ಲ ಎಸ್.ಐ.ವಿನೋದ್ ರೆಡ್ಡಿ, ಟ್ರಾಫಿಕ್ ಎಸ್.ಐ.ರಾಜೇಶ್, ನಗರ ಠಾಣಾ ಅಪರಾಧ ವಿಭಾಗದ ಎಸ್.ಐ. ಕಲೈಮಾರ್, ಬೆಳ್ತಂಗಡಿ ಎಸ್.ಐ.ಪವನ್ ಕುಮಾರ್, ಬೆಳ್ತಂಗಡಿ ಟ್ರಾಫಿಕ್ ಎಸ್.ಐ.ಕುಮಾರ್ ಕಾಂಬ್ಲೆ, ಡಿ.ಸಿ.ಐ.ಬಿ.ಪಿ.ಐ.ರವಿ.ಬಿ.ಎಸ್. ಡಿ.ಸಿ.ಐ.ಬಿ.ಪಿ.ಐ.ಚೆಲುವರಾಜ್, ಹಾಗೂ ಡಿ.ಸಿ.ಐ.ಬಿ ಸಿಬ್ಬಂದಿ ಗಳು ಜಿಲ್ಲೆಯ ವಿವಿಧ ಠಾಣೆಯ ಸಿಬ್ಬಂದಿ ಗಳನ್ನೊಳಗೊಂಡ ಐದು ವಿಶೇಷ ತಂಡ ರಚನೆ ಮಾಡಲಾಗಿತ್ತು.

More articles

Latest article