Friday, October 27, 2023

ನಿಲ್ಲಿಸಿದ್ದ ಲಾರಿಗೆ ರಿಕ್ಷಾ ಡಿಕ್ಕಿಯಾಗಿ ಚಾಲಕ ಸಾವು, ಮೂವರಿಗೆ ಗಾಯ

Must read

ಮಂಗಳೂರು : ನಿಲ್ಲಿಸಿದ್ದ ಲಾರಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸಾವನ್ನಪ್ಪಿ, ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಮರೋಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಸಲೀಮ್(40) ಮೃತಪಟ್ಟ ರಿಕ್ಷಾ ಚಾಲಕ. ನಿಜಾಮುದ್ದೀನ್ ಮತ್ತು ಸಿಯಾಬ್ ಗಾಯಗೊಂಡವರು ಎಂದು ಗುರುತಿಸಲಾಗಿದೆ.


ಆಟೋದಲ್ಲಿ ರಾತ್ರಿ ಮಲ್ಪೆ ದಕ್ಕೆಗೆ ಹೋಗಿ ವಾಪಾಸ್‌ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಇದೆ.
ಈ ಲಾರಿಯೂ ಹಲವಾರು ವರ್ಷಗಳಿಂದ ಇದೇ ಸ್ಥಳದಲ್ಲೇ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

More articles

Latest article