Wednesday, October 18, 2023

ವಿಟ್ಲ ಯುವಕೇಸರಿ ಸಂಘದ ಮಹಾಸಭೆ

Must read

ವಿಟ್ಲ: ವಿಟ್ಲ ಚಂದಳಿಕೆ ಯುವಕೇಸರಿ ಅಬೀರಿ, ಅತಿಕಾರಬೈಲು ಇದರ ವಾರ್ಷಿಕ ಮಹಾಸಭೆಯು ಚಂದಳಿಕೆಯ ಕಾರ್ಯಾಲಯದಲ್ಲಿ ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ವಿಟ್ಲದ ಉದ್ಯಮಿ ಸಂಜೀವ ಪೂಜಾರಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾಗಿ ದಿವಾಕರ ಶೆಟ್ಟಿ ಅಬೀರಿ, ಅಧ್ಯಕ್ಷರಾಗಿ ಗಂಗಾಧರ ಪೂಜಾರಿ ಪರನೀರು, ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು, ತಿರುಮಲೇಶ್ ಕುರುಂಬಳ, ಪ್ರಶಾಂತ್ ಪೂಜಾರಿ ನೀರ್ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಕೇಪುಳಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ವನೀತ್ ಅಬೀರಿ, ಜತೆ ಕಾರ್ಯದರ್ಶಿಯಾಗಿ ಪುಷ್ಪರಾಜ್ ಡೆಪ್ಪಿನಿ, ಸುರೇಶ್ ಓಟೆ, ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜತೆ ಕೋಶಾಧಿಕಾರಿಯಾಗಿ ರಾಜೇಶ್ ಅಬೀರಿ ಮತ್ತು ಪ್ರವೀಣ್ ಕಟ್ಟತ್ತಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಅಬೀರಿ, ಪ್ರಧಾನ ಸಂಚಾಲಕರಾಗಿ ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಮತ್ತು ಚಿದಾನಂದ ಶೆಟ್ಟಿ ಉಜಿರೆಮಾರು, ದತ್ತಿನಿಧಿ ಪ್ರಮುಖ್‌ರಾಗಿ ಶಶಿಧರ ಕೇಪುಳಗುಡ್ಡೆ, ಕಾರ್ಯಾಲಯ ಕಾರ್ಯದರ್ಶಿಯಾಗಿ ಅರುಣ್ ಚಂದಳಿಕೆ ಮತ್ತು ಪ್ರಮೋದ್ ಉಜಿರೆಮಾರು, ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ್ ಪಡೀಲ್, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ, ರೈ ಎಸ್ಟೇಟ್, ಸಂಜೀವ ಪೂಜಾರಿ ವಿಟ್ಲ, ಈಶ್ವರ ಬಂಗೇರ ಅಬೀರಿ, ವಿಠಲ ಪೂಜಾರಿ ಅತಿಕಾರಬೈಲು, ಲೋಕನಾಥ ಕುರುಂಬಳ, ಚಂದ್ರಹಾಸ ಅಬೀರಿ, ಗಣೇಶ್ ಪೂಜಾರಿ ಪಟ್ಲ, ಗೋವಿಂದ ರಾಜ್ ಪೆರುವಾಜೆ ಇವರು ಆಯ್ಕೆಯಾದರು.
ಸುಶಾಂತ್ ಸಾಲಿಯಾನ್ ಸ್ವಾಗತಿಸಿದರು. ಪದ್ಮನಾಭ ಶೆಟ್ಟಿ ವಂದಿಸಿದರು. ವಿಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಅಬೀರಿ ಸಹಕರಿಸಿದರು.

More articles

Latest article