Wednesday, April 10, 2024

ಯುವಕೇಸರಿ ಅಬೀರಿ ಅಧ್ಯಕ್ಷರಾಗಿ ಗಂಗಾಧರ ಪೂಜಾರಿ ಪರನೀರು ಆಯ್ಕೆ

ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು (ರಿ ) ಚಂದಳಿಕೆ ಇದರ ವಾರ್ಷಿಕ ಮಹಾಸಭೆಯು ಚಂದಳಿಕೆಯ ಕಾರ್ಯಾಲಯದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ವಿಟ್ಲದ ಉದ್ಯಮಿಯಾಗಿರುವ ಸಂಜೀವ ಪೂಜಾರಿ ವಿಟ್ಲ ಭಾಗವಹಿಸಿದ್ದರು.
ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಗಂಗಾಧರ ಪೂಜಾರಿ ಪರನೀರು ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾಗಿ ದಿವಾಕರ ಶೆಟ್ಟಿ ಅಬೀರಿ, ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು, ತಿರುಮಲೇಶ್ ಕುರುಂಬಳ, ಪ್ರಶಾಂತ್ ಪೂಜಾರಿ ನೀರ್ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಕೇಪುಳಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ವನೀತ್ ಅಬೀರಿ, ಜತೆ ಕಾರ್ಯದರ್ಶಿಯಾಗಿ ಪುಷ್ಪರಾಜ್ ಡೆಪ್ಪಿನಿ ಸುರೇಶ್ ಓಟೆ, ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜತೆ ಕೋಶಾಧಿಕಾರಿ ಯಾಗಿ ರಾಜೇಶ್ ಅಬೀರಿ ಮತ್ತು ಪ್ರವೀಣ್ ಕಟ್ಟತ್ತಿಲ ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಅಬೀರಿ, ಪ್ರಧಾನ ಸಂಚಾಲಕರಾಗಿ ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಮತ್ತು ಚಿದಾನಂದ ಶೆಟ್ಟಿ ಉಜಿರೆಮಾರು, ದತ್ತಿನಿಧಿ ಪ್ರಮುಖ್ ರಾಗಿ ಶಶಿಧರ ಕೇಪುಳಗುಡ್ಡೆ, ಕಾರ್ಯಾಲಯ ಕಾರ್ಯದರ್ಶಿಯಾಗಿ ಅರುಣ್ ಚಂದಳಿಕೆ ಮತ್ತು ಪ್ರಮೋದ್ ಉಜಿರೆಮಾರು ,ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ್ ಪಡೀಲ್, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ ಎಸ್ಟೇಟ್, ಸಂಜೀವ ಪೂಜಾರಿ ವಿಟ್ಲ, ಈಶ್ವರ ಬಂಗೇರ ಅಬೀರಿ, ವಿಠಲ ಪೂಜಾರಿ ಅತಿಕಾರಬೈಲು,ಲೋಕನಾಥ ಕುರುಂಬಳ, ಚಂದ್ರಹಾಸ ಅಬೀರಿ, ಗಣೇಶ್ ಪೂಜಾರಿ ಪಟ್ಲ, ಗೋವಿಂದ ರಾಜ್ ಪೆರುವಾಜೆ ಇವರು ಆಯ್ಕೆಯಾದರು.
ಸುಶಾಂತ್ ಸಾಲಿಯಾನ್ ಸ್ವಾಗತಿಸಿದರು. ಪದ್ಮನಾಭ ಶೆಟ್ಟಿ ವಂದಿಸಿದರು. ವಿಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಅಬೀರಿ ಸಹಕರಿಸಿದರು.

More from the blog

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...