Tuesday, October 24, 2023

ಸಹಶಿಕ್ಷಕರ ಸಹಕಾರದಿಂದ ಮಾತ್ರವೇ ಓವ೯ ಮುಖ್ಯ ಶಿಕ್ಷಕನಿಗೆ ಒಳ್ಳೆಯ ರೀತಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ: ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ

Must read

ಕಲ್ಲಡ್ಕ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯ ಹಿಂದೆ ಕೇವಲ ಮುಖ್ಯ ಶಿಕ್ಷಕರು ಪೋಷಕರು, ಶಾಲಾಭಿವೃದ್ಧಿ  ಸಮಿತಿ ಮಾತ್ರವಲ್ಲದೇ ಜೊತೆಗೆ ಸಹಶಿಕ್ಷಕರೂ- ಕಾರಣರಾಗುತ್ತಾರೆ. ಸಹಶಿಕ್ಷಕರ ಸಹಕಾರದಿಂದ ಮಾತ್ರವೇ ಓವ೯ ಮುಖ್ಯ ಶಿಕ್ಷಕನಿಗೆ ಒಳ್ಳೆಯ ರೀತಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಹತ್ತು ಕೈಗಳು ಸೇರಿ ಮಾಡಿದ ಕೆಲಸ ಉತ್ತಮ ಫಲಿತಾಂಶ ನೀಡುತ್ತದೆ. ಶಾಲೆಯ ಏಳಿಗೆಯಲ್ಲಿ ಸಹಶಿಕ್ಷಕರ ಪಾತ್ರ ಮಹತ್ವದ್ದು ಅವರನ್ನು ಗುರುತಿಸಿ ಉತ್ತಮ ಶಿಕ್ಷಕ  ಪ್ರಶಸ್ತಿ ನೀಡಿದಾಗ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಹೇಳಿದರು.

ಅವರು ದ.ಕ.ಜಿ.ಪ.ಹಿ.ಪ್ರಾ.ಶಾಲೆ ಮಜಿ ವೀರಕಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಾಲಾ ಸಹಶಿಕ್ಷಕಿ ಸಂಗೀತ ಶಮ೯ ಪಿ.ಜಿ. ಇವರನ್ನು ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದ ಪರವಾಗಿ ಅಭಿನಂದಿಸಿ ಮಾತನಾಡಿದರು.

ಸಹ ಶಿಕ್ಷಕಿ ಶಕುಂತಳಾ ಮಾತನಾಡಿ, ಶಿಕ್ಷಕರ ನಡುವೆ ಒಗ್ಗಟ್ಟು ಮತ್ತು ಹಂಚಿ ಕೆಲಸ ಮಾಡುವ ಗುಣಗಳಿದ್ದಾಗ ಮಾತ್ರ ಶಾಲೆಯ ಸವ೯ತೋಮುಖ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಶಿಕ್ಷಕಿ ಅನುಷ ಶೆಟ್ಟಿ, ಮಾತನಾಡಿ, ತಮ್ಮ ಈ ಹಿಂದಿನ ಶಾಲೆಯಲ್ಲೂ ಶಿಕ್ಷಕಿ ಸಂಗೀತ ಶರ್ಮಾ ಜೊತೆಯಲ್ಲಿ ಕತ೯ವ್ಯ ನಿವ೯ಹಿಸಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಅಭಿನಂದನೆ ಸ್ವೀಕರಿಸಿದ ಶಾಲಾ ಸಹಶಿಕ್ಷಕಿ ಸಂಗೀತ ಶಮ೯ ಪಿ.ಜಿ. ಮಾತನಾಡಿ, ಯಾವುದೇ ಸಾಧನೆಗಳು ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧಿಸಲು ಸಾಧ್ಯವಿಲ್ಲ. ಅದರ ಹಿಂದೆ ಹಲವರ ಶ್ರಮ, ಬೆಂಬಲಗಳು ಇರಬೇಕಾಗುತ್ತದೆ. ಈ ಪ್ರಶಸ್ತಿಯು ನನ್ನ ಹೆಸರಿಗಷ್ಟೇ ಬಂದಿರಬಹುದು ಆದರೆ ನಿಮ್ಮೆಲ್ಲರ ಸಹಕಾರ ಮಾಗ೯ದಶ೯ನದಿಂದಷ್ಟೇ ಇದು ಸಾಧ್ಯವಾಗಿದೆ. ಹಾಗಾಗಿ ಇದು ನಿಮ್ಮೆಲ್ಲರಿಗೂ ಸಂದುತ್ತದೆ ಎಂದು ಹೇಳಿ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾಯ೯ಕ್ರಮದಲ್ಲಿ ಶಿಕ್ಷಕರು, ಗೌರವ ಶಿಕ್ಷಕಿಯರು, ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಗೌರವ ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.

More articles

Latest article