Saturday, April 6, 2024

ನವೆಂಬರ್‌ ಮೊದಲ ವಾರದಿಂದ ಮಂಗಳೂರು ವಿವಿಯಲ್ಲಿ ಪದವಿ, ಸ್ನಾತಕೋತ್ತರ ತರಗತಿಗಳು ಪ್ರಾರಂಭ..?

ಮಂಗಳೂರು: ಮಂಗಳೂರು ವಿವಿಯ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ ಅವರು, ಯುಜಿಸಿ ನೀಡಿದ ನಿರ್ದೇಶನದ ಪ್ರಕಾರ, ನವೆಂಬರ್ 1 ರಿಂದ ತರಗತಿಗಳನ್ನು ಪ್ರಾರಂಭಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಪ್ರಸ್ತುತ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿದ್ದು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತವೆ. ಅಕ್ಟೋಬರ್ 20 ರ ಮೊದಲು ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ನವೆಂಬರ್ 1 ರಿಂದಲೇ ಸ್ನಾತಕೋತ್ತರ ಕೋರ್ಸ್‌ಗಳ ತರಗತಿಗಳನ್ನು ಪ್ರಾರಂಭಿಸಲು ಯೋಜಿಸಿದ್ದೇವೆ ಎಂದರು.
ಈ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ನಡೆಯಲಿದೆ. ಆದರೆ ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಕೊರೊನಾ ಪರಿಸ್ಥಿತಿಯನ್ನು ಪರಿಶೀಲಿಸಿ, ಆಯಾ ಜಿಲ್ಲಾಡಳಿತಗಳು ಅನುಮತಿ ನೀಡಿದ ಬಳಿಕ ತರಗತಿಗಳ ಆರಂಭಕ್ಕೆ ಅನುಮತಿ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು. ಉತ್ತರ ಪತ್ರಿಕೆಗಳ ಡಿಜಿಟಲೀಕರಣ ಮತ್ತು ಡಿ-ಕೇಂದ್ರೀಕೃತ ಮೌಲ್ಯಮಾಪನವನ್ನು ಮಾಡಲು ವಿಶ್ವವಿದ್ಯಾಲಯವು ಸಜ್ಜಾಗಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನವನ್ನು ನಾವು ಮಾಡುತ್ತೇವೆ ಎಂದರು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...