ಬಂಟ್ವಾಳ:  ಒಂದು ಸಮಾಜವನ್ನುತಿದ್ದುವ ಸರ್ವರನ್ನೂ ಮಾರ್ಗದರ್ಶನ ಮಾಡುವ  ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಶಿಕ್ಷಕರು. ಓರ್ವ ಚಿಂತಕನಾಗಿ, ತತ್ವಜ್ಞಾನಿಯಾಗಿ, ಆದರ್ಶ ಶಿಕ್ಷಕರಾಗಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಸರ್ವಪಲ್ಲಿ ರಾಧಾಕೃಷ್ಣನ್  ಅವರು ಶಿಕ್ಷಕ ಸಮುದಾಯಕ್ಕೆ ಪ್ರಾತ: ಸ್ಮರಣೀಯರು ಎಂಬುದಾಗಿ ತುಂಬೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಅಬ್ದುಲ್ರಹಿಮಾನ್ಡಿ. ಬಿ. ಹೇಳಿದರು.

ಅವರು ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಮಾತನಾಡುತ್ತ, ಮಕ್ಕಳನ್ನು ಚಿಂತನೆಗೆ ಹಚ್ಚುವ ಬೋಧನಾ ವ್ಯವಸ್ಥೆಯು ಇಂದು ಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಕರು ನಡೆಯಬೇಕಾಗಿದೆ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಇನ್ನೋರ್ವ ಅತಿಥಿ ತುಂಬೆ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ನಿಸಾರ್ ಅಹಮದ್ ಅವರು ಮಾತನಾಡಿ, ಒಬ್ಬ ವ್ಯಕ್ತಿಯು ಉತ್ತಮ ನಾಗರಿಕನಾಗಲು ಸಮಾಜದಲ್ಲಿ ಪ್ರತಿಷ್ಠೆ ಗೌರವಕ್ಕೆ ಪಾತ್ರನಾಗಲು ಶಿಕ್ಷಕರ ಪಾತ್ರವು ಅತೀ ಮುಖ್ಯ ಎಂದು ಹೇಳಿದರು. ಮತ್ತೋರ್ವ ಅತಿಥಿಗಳಾದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ತಂಡೇಲ್ ಅವರು ಮಾತನಾಡುತ್ತ, ನಾವೆಲ್ಲರೂ ಶಿಕ್ಷಕರ ಮಾರ್ಗದರ್ಶನದಿಂದಲೇ ಜೀವನದ ಯಶಸ್ಸನ್ನು ಗಳಿಸಲು ಸಾಧ್ಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಅಳ್ವ ಮಾತನಾಡುತ್ತ, ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪಿದರೆ ಅದು ಅವರ ತಂದೆ,ತಾಯಿ ಬಳಗದ ಜೊತೆಯಲ್ಲಿ ಶಿಕ್ಷಕ ವೃಂದದವರ ಮಾರ್ಗದರ್ಶನ, ಕಲಿಸುವಿಕೆಯ ಕೊರತೆಯೂ ಕಾರಣವಾಗಿರುತ್ತದೆ. ಶಿಕ್ಷಕರು ಒಳ್ಳೆಯ ‘ಉತ್ತರದಾಯಿತ್ವ’ ಪ್ರಭುತ್ವದಿಂದ ವಿದ್ಯಾರ್ಥಿಗಳ ಮೌಲ್ಯಮಾಪಕರಾದಾಗ ಅಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸುಸಜ್ಜಿತ ಸಾಮಾಜಿಕ ವ್ಯವಸ್ಥೆ ರೂಪಿತವಾಗುತ್ತದೆ ಎಂದರು. ಒಂದು ಸಮಾಜದ ವ್ಯವಸ್ಥಿತ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರವೇ ಹಿರಿದಾದದ್ದು ಎಂದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಕೆದಿಲ ಸ್ವಾಗತಿಸಿ, ಹಿಂದಿ ಉಪನ್ಯಾಸಕ ಡಾ|ವಿಶ್ವನಾಥ ಪೂಜಾರಿ ವಂದಿಸಿದರು.  ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here