Sunday, October 22, 2023

ಕೊಯಿಲ ಸರ್ಕಾರಿ ಪ್ರೌಢಶಾಲೆ: ಎಸ್.ಎಸ್.ಎಲ್.ಸಿ. ಮರು ಮೌಲ್ಯಮಾಪನ: ಇಬ್ಬರು ಸಹೋದರಿಯರಿಗೆ ಹೆಚ್ಚುವರಿ ಅಂಕ

Must read

ಬಂಟ್ವಾಳ: ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಇಬ್ಬರು ಸಹೋದರಿಯರಿಗೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮರು ಮೌಲ್ಯಮಾಪನದಿಂದ ಹೆಚ್ಚುವರಿ ಅಂಕ ದೊರೆತಿದ್ದು, ಇತರ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣದಿಂದ ಉತ್ತೀರ್ಣಗೊಂಡಿದ್ದಾರೆ.
ಈ ಹಿಂದೆ ಒಟ್ಟು 609 ಅಂಕ ಗಳಿಸಿದ್ದ ವಿದ್ಯಾರ್ಥಿನಿ ಗೀತಾ ಎಚ್. ಈಕೆಗೆ ಮರು ಮೌಲ್ಯಮಾಪನದಿಂದ ಒಟ್ಟು 615 (ಶೇ. 98.40)  ಅಂಕ ದೊರೆತು ಜಿಲ್ಲೆಯಲ್ಲೇ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕನ್ನಡ ವಿಷಯದಲ್ಲಿ-124 ರ ಬದಲಿಗೆ 125, ಗಣಿತ-97ರ ಬದಲಿಗೆ 98, ಇಂಗ್ಲೀಷ್-94ರ ಬದಲಿಗೆ 95, ಹಿಂದಿ-95ರ ಬದಲಿಗೆ 98 ಅಂಕ ಸಿಕ್ಕಿದೆ.
ಇನ್ನೊಂದೆಡೆ ಈ ಹಿಂದೆ ಒಟ್ಟು ೫೯೬ ಅಂಕ ಗಳಿಸಿದ್ದ ವಿದ್ಯಾರ್ಥಿನಿ ಲತಾ ಎಚ್. ಈಕೆಗೆ ಮರು ಮೌಲ್ಯಮಾಪನದಿಂದ ಒಟ್ಟು 603 ಅಂಕ ದೊರೆತಿದೆ.
ಕನ್ನಡ -124 ರಬದಲಿಗೆ 125, ಗಣಿತ-94 ರ ಬದಲಿಗೆ 96, ವಿಜ್ಞಾನ-91 ರ ಬದಲಿಗೆ 93, ಇಂಗ್ಲೀಷ್ -88 ರ ಬದಲಿಗೆ 90 ಅಂಕ ಗಳಿಸಿದೆ.

ಲತಾ ಎಚ್.                                 ಗೀತಾ ಎಚ್.

ಇವರಿಬ್ಬರೂ ಅವಳಿ-ಜವಳಿ ವಿದ್ಯಾರ್ಥಿಗಳಾಗಿದ್ದು, ಇತರ ಇಬ್ಬರು ವಿದ್ಯಾರ್ಥಿಗಳು ಕೂಡಾ ಮರು ಮೌಲ್ಯ ಮಾಪನದಿಂದ ಉತ್ತೀರ್ಣಗೊಳ್ಳುವ ಮೂಲಕ ಶಾಲೆಗೆ ಒಟ್ಟು ಶೇ.78.48 ಫಲಿತಾಂಶ ದೊರೆತಿದೆ ಎಂದು ಮುಖ್ಯಶಿಕ್ಷಕ ಸುಧೀರ್ ಜಿ. ತಿಳಿಸಿದ್ದಾರೆ.

More articles

Latest article