ಬಂಟ್ವಾಳ: ತಾಲೂಕಿನ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯಿಂದ ಜನ ಪರ ಮರಳು ನೀತಿ ರೂಪಿಸಲು ಆಗ್ರಹಿಸಿ ಸೆ.22 ರ ಮಂಗಳವಾರದಂದು ಸಂಜೆ 3 ಕ್ಕೆ ಬಿ.ಸಿ. ರೋಡ್ ಮಿನಿ ವಿಧಾನಸೌಧದ ಎದುರುಗಡೆ ಪ್ರತಿಭಟನೆ ನಡೆಯಲಿದೆ.
ಲಾರಿ ಮಾಲಕರು, ಲಾರಿ ಚಾಲಕರು, ಕಾರ್ಮಿಕರು, ಬಿಲ್ಡಿಂಗ್ ಕೊಂಟ್ರಕ್ಟರ್ಸ್, ಇಂಜಿನಿಯರ್ಸ್ ಹಾಗು ಅನೇಕ ದುಡಿಯುವ ವರ್ಗಕ್ಕೆ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತಿರುವುದು ಮರಳು. ಮರಳು ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಆದರೆ ಪ್ರಸ್ತುತ ಸರಕಾರವಂತೂ ಇತ್ತೀಚಿನ ದಿನಗಳಲ್ಲಿ ಇದನ್ನು ಕಡೆಗಣಿಸುತ್ತಿದೆ. ನೊನ್ ಸಿ ಅರ್ ಝಡ್ ವಿಭಾಗವನ್ನು ಈಗಾಗಲೇ ಪ್ರತಿಯೊಂದನ್ನು ತೆರೆಯಲಾಗಿದೆ. ಆದರೆ ‘ಸಿ ಅರ್ ಝಡ್ ತೆರೆಯಲು ಅವಕಾಶ ಕೊಡದಿರುವುದೇ ಬಹುದೊಡ್ಡ ಸಮಸ್ಯೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೊನೆಗೊಂಡ ‘ಸಿ ಅರ್ ಝಡ್’ ಇನ್ನೂ ತೆರೆಯಲಿಲ್ಲ. ಆದರೆ ಲಾಕ್ಡೌನ್ ಆದ ದಿನಗಳಿಂದ ಲಾರಿ ಚಾಲಕರು ಹಾಗೂ ಮಾಲಕರು ಕಷ್ಟ ಅನುಭವಿಸುತ್ತಿದ್ದಾರೆ.
ಆದ್ದರಿಂದ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here