Tuesday, October 17, 2023

ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ

Must read

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಅಸಾಧ್ಯವಾದರೂ ಕಳೆದ ಎರಡುವರೆ ವರ್ಷಗಳಿಂದ ಪ್ರತಿ ಮನೆಯಲ್ಲಿಯೂ ವಿದ್ಯುತ್ ಮೀಟರ್, ವಯರಿಂಗ್ ಮಾಡಲಾಗಿದೆ ಆದರೆ ವಿದ್ಯುತ್ ಸಂಪರ್ಕ ಮಾತ್ರ ಇಲ್ಲ ಇಂತಹ ಅತ್ಯಂತ ವಿಚಿತ್ರ ರೀತಿಯ ಸನ್ನಿವೇಶ ಎದುರಾಗಿರುವ ಪ್ರದೇಶಕ್ಕೆ ಇಂದು ಮಾಜಿ ಶಾಸಕ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ಕೆ. ವಸಂತ ಬಂಗೇರ ಭೇಟಿ ನೀಡಿದರು.

ಎರಡು ವರ್ಷಗಳ ಹಿಂದೆ ನಾವೂರು ಗ್ರಾಮ ಪಂಚಾಯತ್ ಅಡಳಿತ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುಲಿತ್ತಡಿ, ಮುತ್ತಾಜೆ, ಅಲ್ಯ, ಎರ್ಮೆಲೆ ಪ್ರದೇಶದ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳಿಗೆ ದೀನ್ ದಯಾಳ್ ವಿದ್ಯುತ್ತೀಕರಣ ಯೋಜನೆಯಡಿ ವಿದ್ಯುತ್ ಮೀಟರ್ ಅಳವಡಿಸಿ ವಯರಿಂಗ್ ಮಾಡಲಾಗಿದ್ದು, ಇಲ್ಲಿಯವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಈ ವಿಚಾರ ತಿಳಿದ ಮಾಜಿ ಶಾಸಕ ವಸಂತ ಬಂಗೇರರು ಇಂದು ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಿಂದಲೇ ವಿದ್ಯುತ್ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಇತ್ತೀಚೆಗೆ ಮಳೆಗೆ ಗುಡ್ಡ ಜರಿದು ಹಾನಿಗೊಳಗಾದ ಪದ್ಮನಾಭ ಮಲೆಕುಡಿಯ ಅಲ್ಯ ಮನೆಗೆ ಭೇಟಿ ನೀಡಿ, ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ ನೆರಿಯ, ಸಂಚಾಲಕ ಶೇಖರ್ ಎಲ್., ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಅಧ್ಯಕ್ಷ ಶೈಲೇಶ್ ಕುಮಾರ್‌,‌ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮನೋಹರ ಇಳಂತಿಲ, ಮಾಜಿ ತಾ.ಪಂ. ಸದಸ್ಯರಾದ ಗಣೇಶ್ ಕಣಾಲು, ತನುಜಾ ಶೇಖರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಭರತ್ ಕುಮಾರ್ ಇಂದಬೆಟ್ಟು, ಸಾಮಾಜಿಕ ಜಾಲತಾಣ ವಿಭಾಗದ ತಾಲೂಕು ಅಧ್ಯಕ್ಷ ಅನಿಲ್ ಪೈ ಬಂಗಾಡಿ ನಾವೂರು ಗ್ರಾ.ಪಂ. ಸದಸ್ಯರಾದ ಹಸೈನಾರ್, ಡೀಕಮ್ಮ, ಮಾಜಿ ಅಧ್ಯಕ್ಷ ಅ್ಯಂಟನಿ ಸೇರಿದಂತೆ ಸ್ಥಳೀಯ ಮಲೆಕುಡಿಯ ಮುಖಂಡರಾದ ಕೊರಗು ಮಲೆಕುಡಿಯ, ಸದಾಶಿವ ಎರ್ಮೆಲೆ, ಅವಿನಾಶ್ ಅಲ್ಯ, ಭರತ್ ಕುಮಾರ್ ಎರ್ಮೆಲೆ, ಅಣ್ಣು ಪುಲಿತ್ತಡಿ, ಚೇತನ್ ಎರ್ಮೆಲೆ, ಜಯಂತ್ ಮುತ್ತಾಜೆ, ದೇವಪ್ಪ ಎರ್ಮೆಲೆ, ಸಂಜೀವ ಎರ್ಮೆಲೆ ಉಪಸ್ಥಿತರಿದ್ದರು.

More articles

Latest article