Wednesday, April 10, 2024

ಕರಾವಳಿ ಚರ್ಚ್‌ಗಳಲ್ಲಿ ಸರಳ ತೆನೆಹಬ್ಬ ಆಚರಣೆ

ಬಂಟ್ವಾಳ: ಕರಾವಳಿಯಾದ್ಯಂತ ಚರ್ಚ್‌ಗಳಲ್ಲಿ ಇಂದು ಮೊಂತಿ ಫೆಸ್ಟ್‌ (ತೆನೆಹಬ್ಬ)ವನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ, ಕೊರೊನಾ ಕಾರಣದಿಂದ ಈ ಬಾರಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಮೇರಿ ಮಾತೆಯ ಜಯಂತಿಯನ್ನು ಸೂಚಿಸುವ ಈ ಹಬ್ಬ ಒಂಭತ್ತು ದಿನಗಳ ನೋವೆನಾ ಪ್ರಾರ್ಥನೆಯ ಬಳಿಕ ಆಚರಿಸಲಾಗುತ್ತದೆ.
ಕೊರೊನಾ ತಡೆಗಟ್ಟುವ ಹಿನ್ನೆಲೆ, ಚರ್ಚ್‌ಗಳಲ್ಲಿ ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಚರ್ಚ್‌ನ ಒಳಗಡೆ ಕೆಲವು ಮಂದಿಗಷ್ಟೆ ಅವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ ಮಾಸ್ಕ್‌‌ ಧರಿಸುವುದು ಕಡ್ಡಾಯವಾಗಿತ್ತು. ಪಾಲ್ಗೊಂಡ ಎಲ್ಲರನ್ನು ಥರ್ಮಲ್‌‌ ಸ್ಕ್ಯಾನರ್‌ನಿಂದ ತಪಾಸಣೆ ಮಾಡಲಾಯಿತು. ಚರ್ಚ್ ಒಳಗಡೆ ಪ್ರವೇಶ ಮಾಡುವ ಮುನ್ನ ಸ್ಯಾನಿಟೈಸರ್‌‌ ನೀಡಲಾಗಿದ್ದು, 10 ವರ್ಷದೊಳಗಿನ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನುಮತಿ ನೀಡಿರಲಿಲ್ಲ.

ಈ ಹಬ್ಬವು ದ.ಕ ಹಾಗೂ ಉಡುಪಿ ಜಿಲ್ಲೆಗಳ ಕೊಂಕಣಿ ಕ್ಯಾಥೋಲಿಕರ ಧಾರ್ಮಿಕ ಹಬ್ಬವಾಗಿದ್ದು, ಸಾಂಸ್ಕೃತಿಕವಾಗಿ ಆಚರಣೆ ಆಚರಿಸುತ್ತಾರೆ. ಹಬ್ಬದ ದಿನದಂದು ಸ್ಥಳೀಯವಾಗಿ ಬೆಳೆದ ತರಕಾರಿಗಳಿಂದ ವಿವಿಧ ರೀತಿಯ ಅಡುಗೆ ಮಾಡಲಾಗುತ್ತದೆ. ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತೀ ಕುಟುಂಬಕ್ಕೆ ಆಶೀರ್ವದಿಸಿ ಹೊಸ ಭತ್ತದ ತೆನೆಗಳನ್ನು ನೀಡುತ್ತಾರೆ. ಈ ಬಾರಿಯ ತೆನೆ ಹಬ್ಬದಲ್ಲಿ ಮೆರವಣಿಗೆ ಹಾಗೂ ಮಕ್ಕಳಿಂದ ಹೂಗಳನ್ನು ಅರ್ಪಿಸುವಂತಹ ಕೆಲವು ಆಚರಣೆಗಳು ರದ್ದುಗೊಳಿಸಲಾಗಿತ್ತು. ಕೆಲವು ಮಂದಿಗಷ್ಟೆ ಮೇರಿ ಮಾತೆಗೆ ಹೂ ಅರ್ಪಿಸಲು ಅವಕಾಶ ನೀಡಲಾಯಿತು. ಚರ್ಚ್‌ನ ಒಳಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.

ಕರಾವಳಿ ಜಿಲ್ಲೆಗಳ ಚರ್ಚ್‌ಗಳಲ್ಲಿ ಐದು ತಿಂಗಳ ಬಳಿಕ ಈ ಹಬ್ಬದ ಆಚರಣೆಗಾಗಿ ಚರ್ಚ್‌ಗಳನ್ನು ತೆರೆಯಲಾಗಿದ್ದು, ಇನ್ನು ಮಾರ್ಗಸೂಚಿಗಳ ಪ್ರಕಾರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಾನುವಾರದಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...