Sunday, April 7, 2024

14ನೇ ಹಣಕಾಸು ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು 15 ದಿನಗಳೊಳಗೆ ಮುಗಿಸಿ : ಪಿ.ಡಿ.ಒ. ಹಾಗೂ ಆಡಳಿತ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ

ಬಂಟ್ವಾಳ: 14 ಹಣಕಾಸು ಯೋಜನೆ ಯಡಿ ಬಾಕಿ ಉಳಿದಿರುವ ಕಾಮಗಾರಿಯನ್ನು ಮುಂದಿನ 15 ದಿನಗಳೊಳಗೆ ಮುಗಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಿ.ಡಿ.ಒ.ಹಾಗೂ ಆಡಳಿತ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಮಧ್ಯಾಹ್ನ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳ ವಿಶೇಷ ಸಭೆಯಲ್ಲಿ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತ್ ಗಳ ಪಿ.ಡಿ.ಒ.ಗಳಿಂದ 2014 -15 ನೇ ಸಾಲಿನಿಂದ ಆರಂಭಗೊಂಡ 14 ನೇ ಹಣಕಾಸು ಯೋಜನೆಯ ಕಾಮಗಾರಿ ಗಳು ಹಾಗೂ ಅನುದಾನ ಬಳಕೆಯ ವಿವರ ಪಡೆದರು.
ಬಾಕಿ ಉಳಿದಿರುವ ಕಾಮಗಾರಿ ಗಳ ಕುರಿತು ಪಿ.ಡಿ.ಒ.ಗಳು ಹಾಗೂ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮುಂದಿನ 15 ದಿನಗಳಲ್ಲಿ ಅಂದರೆ ಸೆ.22 ರೊಳಗೆ ಇ.ಒ.ಅವರಿಗೆ ವರದಿ ನೀಡುವಂತೆ ಸೂಚಿಸಿದರು.
ಬಳಿಕ ಸೆ.25 ರಂದು ಇ.ಒ.ರವರಿಂದ ತಾನು ವರದಿ ಪಡೆದು ಪರಿಶೀಲನೆ ನಡೆಸುವುದಾಗಿ ಸೂಚಿಸಿದರು.
ಆಡಳಿತ ಅಧಿಕಾರಿಗಳ ಬೆರಳಚ್ಚು ನ ತಾಂತ್ರಿಕ ಸಮಸ್ಯೆ ಯ ಕುರಿತು ಪಿ.ಡಿ.ಒ ಗಳು ಶಾಸಕ ರ ಗಮನಕ್ಕೆ ತಂದಾಗ ಶೀಘ್ರದಲ್ಲಿ ಅದನ್ನು ಸರಿಪಡಿಸಲು ಇ.ಒ.ಅವರಲ್ಲಿ ಸೂಚಿಸಿದರು.
ಇಂಜಿನಿಯರಗಳ ಕಾರ್ಯ ದಕ್ಷತೆಯನ್ನು ವೇಗಗೊಳಿಸುವಂತೆ ಶಾಸಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎ.ಇ.ಇ.ತಾರಾನಾಥ ಸಾಲಿಯಾನ್ ಗೆ ಸೂಚಿಸಿದರು.
ಸಭೆಯಲ್ಲಿ ಪ್ರತಿ ಗ್ರಾ.ಪಂಗಳ ಉದ್ಯೋಗ ಖಾತರಿ ಯೋಜನೆ ಗಳ ಪ್ರಗತಿ ಸಾಧನೆ ಕುರಿತು ಮಾಹಿತಿ ಪಡೆದರು.
ಪ್ರತಿ ಆಡಳಿ ಅಧಿಕಾರಿಗಳು ಗ್ರಾ.ಪಂ.ಗಳಿಗೆ ಬೇಟಿ ನೀಡಿ ಗ್ರಾ.ಪಂ.ಗಳ ಕೆಲಸವನ್ನು ವೇಗಗೊಳಿಸುವಂತೆ ಸೂಚಿಸಿದರು.
ಹಿಂದೆ ಕಾಮಗಾರಿ ಆಗದೆ ಇದ್ದಾಗ ಅಧಿಕಾರಿಗಳು ಅಧ್ಯಕ್ಷ ಹಾಗೂ ಸದಸ್ಯ ರಿಗೆ ದೂರು ಹಾಕಿ ಜವಬ್ದಾರಿ ಯಿಂದ ನುಣುಚಿಕೊಳ್ಳುತ್ತಿದ್ದರು ಆದರೆ ಈಗ ಇನ್ನೊಬ್ಬರಿಗೆ ದೂರು ಹಾಕುವಂತಿಲ್ಲ.ಹೀಗಾಗಿ ನಿಮಗೆ ಅವಕಾಶ ವಿದೆ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸಾರ್ವಜನಿಕರಿಂದ ಗ್ರಾ.ಪಂಗಳ ದೂರುಗಳು ಕೇಳಿಬರುತ್ತಿದೆ
ಕಳ್ಳಿಗೆ ಮತ್ತು ಬೋಳಂತರು ಗ್ರಾಮ ಪಂಚಾಯತ್ ನಲ್ಲಿ ಫಲಾನುಭವಿಗಳಿಗೆ 9*11 ನೀಡದೆ ಸತಾಯಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ ಯಾಕೆ ಎಂದು ಪಿ.ಡಿ.ಒ.ಅವರನ್ನು ಕೇಳಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಬರದ ರೀತಿಯಲ್ಲಿ ಕೆಲಸ ಮಾಡಿ ಎಂದರು.
ಸಜೀಪಮುನ್ನೂರು ಗ್ರಾಮ ಪಂಚಾಯತ್ ನ ಆಲಾಡಿ ಪರಿಸರದಲ್ಲಿ ಜನರಿಗೆ ನೀರಿನ ಸಮಸ್ಯೆ ಯ ಬಗ್ಗೆ ಸಾರ್ವಜನಿಕರ ದೂರುಗಳು ಕೇಳಿ ಬಂದ ಬಗ್ಗೆ ಕಾರಣವೇನು ಎಂದು ಪಿ.ಡಿ.ಒ.ಅವರಲ್ಲಿ ಕೇಳಿ ಸಮಸ್ಯೆ ಪರಿಹಾರ ನೀಡಿ ನೀರು ಒದಗಿಸಿ ಎಂದು ಸೂಚಿಸಿದರು.
ಸರಕಾರಿ ಶಾಲೆಗಳ ದುರಸ್ತಿ ಗೆ ಮಳೆಹಾನಿಯಲ್ಲಿವ 2ಕೋಟಿ 40 ಲಕ್ಷ ಅನುದಾನ ಬಿಡುಗಡೆ ಅಗಿದೆ ಆದರೆ ಕಾಮಗಾರಿ ನಡೆಯದೆ ಇರುವುದರ ಕುರಿತು ಬಿ.ಒ.ಅವರು ಶಾಸಕರ ಗಮನಕ್ಕೆ ತಂದರು.
ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಎ.ಇ.ಇ.ಗೆ ಶಾಸಕರು ಸೂಚಿಸಿದರು.
ಪ್ರತಿ ಗ್ರಾಮ ಪಂಚಾಯತ್ ನಲ್ಲಿ 20 ಜನ ಅರ್ಹ ನಿವೇಶನ ರಹಿತರ ಪಟ್ಟಿ ಮಾಡಿ ಕಳುಹಿಸುವಂತೆ ಶಾಸಕರು ಪಿ.ಡಿ.ಒಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎ.ಇ.ಇ.ತಾರಾನಾಥ ಸಾಲಿಯಾನ್ ಉಪಸ್ಥಿತರಿದ್ದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...