ಬಂಟ್ವಾಳ: ಅಮ್ಟೂರು ಗ್ರಾಮದ ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಲೋಕಾರ್ಪಣೆಗೊಂಡ ಶಾಂತಿ ಪಾಲಿಕೆ ಪರಿಶಿಷ್ಟ ಜಾತಿ ಕಾಲೊನಿಯ ಕಾಂಕ್ರಿಟೀಕರಣ ರಸ್ತೆ, ಅಮ್ಟೂರು ಗ್ರಾಮದ ಪೊಯ್ಯೆಕಂಡ ಕೃಷ್ಣಾಪುರ ಹೋಗುವ ರಸ್ತೆ, ಅಮ್ಟೂರು ಗ್ರಾಮದ ಜಂಕ್ಷನ್ನಲ್ಲಿ ಹೈಮಾಸ್ಟ್ ದೀಪವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರು ಸುಮಾರು ಮೂವತ್ತು ಲಕ್ಷ ರೂಪಾಯಿ ಅನುದಾನವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.

ಅದಲ್ಲದೆ ಮುಂದಿನ ದಿನಗಳಲ್ಲಿ ಕೃಷ್ಣಾಪುರ ಪರಿಶಿಷ್ಟ ಜಾತಿ ಕಾಲೊನಿಯ ಕಿಂಡಿ ಅಣೆಕಟ್ಟನ್ನು ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವೆಂಟೆಡ್ ಡ್ಯಾಂ ಮುಂದಿನ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ. ಸದಸ್ಯ ಮಹಾಬಲ ಆಳ್ವ ಗೋಳ್ತಮಜಲು, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮುಹಮ್ಮದ್ ಮುಸ್ತಪಾ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಮಾಣಿ ಗಣೇಶ್ ರೈ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮಾನಾಥ ರಾಯಿ, ಪ್ರಧಾನ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಮಹಿಳಾ ಮೋರ್ಚಾ ಮೋರ್ಚಾದ ಉಪಾಧ್ಯಕ್ಷ ಲಕ್ಷ್ಮೀ ಪ್ರಭು, ಗೋಳ್ತಮಜಲು ಗ್ರಾ.ಪಂ. ಮಾಜಿ ಸದಸ್ಯರಾದ ಗೋಪಾಲ್ ಕೃಷ್ಣ ಪೂವಳ ಗೋಪಾಲ್ ಪೂಜಾರಿ ಜಯಂತ ಗೌಡ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲಿಯಾನ್, ಹಿರಿಯರಾದ ವಿಠಲ ಪ್ರಭು, ಅಮ್ಟೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶರತ್ ಅಮ್ಟೂರು, ಭಾರತೀಯ ಜನತಾ ಪಾರ್ಟಿಯ ಅಮ್ಟೂರು ಗ್ರಾಮದ 182 ಬೂತ್ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿಗಾರ್, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಶಾಂತಿ ಪಳಿಕೆ ಪಕ್ಷದ ಪ್ರಮುಖರಾದ ವಿಶಾಲ ಡಿ. ಶೆಟ್ಟಿ ಬಾಳಿಕೆ ಕಾಂತಪ್ಪ ಶೆಟ್ಟಿ ಬಾಳಿಕೆ ರಾಜೇಶ್ ಶಾಂತಿ ಪಾಲಿಕೆ ಪುರುಷೋತ್ತಮ್ ಟೈಲರ್ ಹಿರಿಯರಾದ ವಿಠಲ್ ಪ್ರಭು ದೇವಕಿ ಪೂಜಾರಿ ದಿವಾಕರ ಪೂಜಾರಿ ವಿಖ್ಯಾತ್ ಶೆಟ್ಟಿ ಬಾಳಿಕೆ ಹರೀಶ್ ಬಟ್ಟೆ ಹಿತ್ಲು ವಸಂತ ಬಟ್ಟೆ ಹಿತ್ಲು ರತಿನ್ ಪೂಜಾರಿ ಹಾಗೂ ಪಕ್ಷದ ಪ್ರಮುಖರು ಬೂತ್ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು ದರು. ಬೂತ್ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here