Thursday, April 25, 2024

ಇರ್ವತ್ತೂರು: ಮದರಸ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಬಂಟ್ವಾಳ : ಬಂಟ್ವಾಳ ತಾ. ಇರ್ವತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಬಿಜೆಎಂಐ ಗಲ್ಫ್ ಪ್ರವಾಸಿ ಗ್ರೂಪ್ ಇದರ ವತಿಯಿಂದ ಇಲ್ಲಿನ ಮದರಸತ್ತು ದಿನಿಯ ಮದರಸದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣ ಕಾರ್ಯಕ್ರಮ ಮದರಸದಲ್ಲಿ ಜರಗಿತು.
ಜುಮ್ಮಾ ಮಸೀದಿಯ ಧರ್ಮಗುರು ಉಮ್ಮರ್ ಮದನಿ ಅವರು ಅಧ್ಯಕ್ಷತೆ ವಹಿಸಿದ್ದರು. ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಟಿ.ಎಸ್.ಎನ್. ಅವರು ಪುಸ್ತಕ ವಿತರಿಸಿದರು.

ಜುಮ್ಮಾ ಮಸೀದಿ ಸಮಿತಿ ಪ್ರ. ಕಾರ್ಯದರ್ಶಿ ಎಸ್. ಅಬ್ದುಲ್ ರಹಿಮಾನ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಸಹಕರಿಸುವ ಸಂಘ ಸಂಸ್ಥೆಗಳ ಕಾರ್ಯ ಅಭಿನಂದನೀಯ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಉದ್ಯಮಿ ಅಬ್ದುಲ್ ರಹಿಮಾನ್ ಸಾಹೇಬ್, ಧರ್ಮಗುರು ರಫೀಕ್ ಮದನಿ ಉಪಸ್ಥಿತರಿದ್ದರು.
ಬಿಜೆಎಂ ಐ ಗಲ್ ಪ್ರವಾಸಿ ಗ್ರೂಪ್ ಸಮಿತಿ ಪ್ರ. ಕಾರ್ಯದರ್ಶಿ ಅಬ್ದುಲ್ ಅಜೀಜ್ ಕಾರ್ಯಕ್ರಮ ನಿರೂಪಿಸಿದರು.

More from the blog

ಬಸ್ ನಲ್ಲಿ ಯುವತಿಗೆ ಕಿರುಕುಳ : ಸಂತ್ರಸ್ತ ಯುವತಿಯ ಮನೆಗೆ ಡಾ| ಪ್ರಭಾಕರ್ ಭಟ್ ಭೇಟಿ

ಬಂಟ್ವಾಳ:ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಗುಂಡ್ಯದಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯ ಮನೆಗೆ ಆರ್.ಎಸ್.ಎಸ್.ಪ್ರಮುಖರಾದ ಡಾ| ಪ್ರಭಾಕರ್ ಭಟ್ ಬೇಟಿ ನೀಡಿ ಪ್ರಕರಣವನ್ನು ದೈರ್ಯವಾಗಿ ಎದುರಿಸಿದ ಯುವತಿಯ ಕಾರ್ಯಕ್ಕೆ ಮೆಚ್ಚುಗೆ...

ಬಿಜೆಪಿ ಗ್ಯಾರಂಟಿ ಬಿಜೆಪಿಯವರ ಬಾಯಲ್ಲಿದೆ, ಕಾಂಗ್ರೆಸ್ ಗ್ಯಾರಂಟಿ ಜನರ ಕೈಯಲ್ಲಿದೆ- ಮಾಜಿ ಸಚಿವ ಬಿ.ರಮಾನಾಥ ರೈ

ಕಾಂಗ್ರೆಸ್ ಗ್ಯಾರಂಟಿ ಸರಿಯಾ? ಮೋದಿ ಗ್ಯಾರಂಟಿಯಾ? ಇದು ಚರ್ಚೆಯಾಗಬೇಕಿದೆ, ಕೇಂದ್ರದ ಬಿಜೆಪಿ ಸರಕಾರ ವಚನ ಭ್ರಷ್ಟ ಸರಕಾರವಾಗಿದೆ, ಬಿಜೆಪಿ ಗ್ಯಾರಂಟಿ ಬಿಜೆಪಿಯವರ ಬಾಯಲ್ಲಿದೆ,ಕಾಂಗ್ರೆಸ್ ಗ್ಯಾರಂಟಿ ಜನರ ಕೈಯಲ್ಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ...

ಕೆ.ಎಸ್.ಎಸ್.ಕಾಲೇಜ್: ಅಧ್ಯಯನ ವಿನಿಮಯ ಕಾರ್ಯಕ್ರಮ 

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ವಾಣಿಜ್ಯಶಾಸ್ತ್ರ ಮತ್ತು ಉದ್ಯಮಾಡಳಿತ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದೊಂದಿಗೆ ಮಾಡಿಕೊಂಡ ಎಂ.ಓ.ಯು .ಪ್ರಕಾರ ಅಧ್ಯಯನ ವಿನಿಮಯ ಕಾರ್ಯಕ್ರಮ...

ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ: ಮತಯಾಚನೆ 

ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ ವಿಟ್ಲ ಮುಖ್ಯ ಪೇಟೆಯಲ್ಲಿ ಸಂಚರಿಸಿ,...