Friday, October 27, 2023

ದ.ಕ. ಜಿಲ್ಲೆಯಲ್ಲಿ 350 ಕೊರೊನಾ ಸೋಂಕು ಪತ್ತೆ: 170 ಮಂದಿ ಗುಣಮುಖ

Must read

ಬಂಟ್ವಾಳ : ದ.ಕ. ಜಿಲ್ಲೆಯಲ್ಲಿ 350 ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ
16112 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕಿತರ ಪೈಕಿ 100 ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದೆ. 104 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಇಂದು ಜಿಲ್ಲೆಯಲ್ಲಿ 170 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 12,412 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3273 ಸಕ್ರೀಯ ಪ್ರಕರಣಗಳಿವೆ.
ಇಂದು 9 ಮಂದಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 427 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕಿತರ ತಾಲೂಕುವಾರು ವಿವರ:
ಮಂಗಳೂರಿನ 154 ಮಂದಿಗೆ, ಬಂಟ್ವಾಳ 56, ಪುತ್ತೂರು 26, ಸುಳ್ಯ 13, ಬೆಳ್ತಂಗಡಿ 48 ಹಾಗೂ ಹೊರ ಜಿಲ್ಲೆಯ 53 ಮಂದಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.

More articles

Latest article