Friday, April 5, 2024

ಜಿಲ್ಲೆಯಲ್ಲಿ ಇಂದು 316 ಕೋವಿಡ್ ಕೇಸ್ ಪತ್ತೆ: 208 ಮಂದಿ ಗುಣಮುಖ

ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 316 ಕೋವಿಡ್ ಕೇಸ್ ಪತ್ತೆಯಾಗಿದ್ದು, 3 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದಿನ ಸೋಂಕಿತರ ಪೈಕಿ 54 ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದೆ. 120 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುವುದು.
ಇಂದು ಜಿಲ್ಲೆಯಲ್ಲಿ 208 ಮಂದಿ ಗುಣಮುಖರಾಗಿದ್ದು, ಒಟ್ಟು 10,706 ಮಂದಿ ಗುಣಮುಖರಾದ ಬಗ್ಗೆ ವರದಿಯಾಗಿದೆ. ಪ್ರಸ್ತುತ 2705 ಸಕ್ರೀಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,795 ಕ್ಕೆ ಏರಿಕೆಯಾಗಿದೆ. ಒಟ್ಟು 384 ಮಂದಿ ಮೃತಪಟ್ಟಿದ್ದಾರೆ.
ಇಂದಿನ ಸೋಂಕಿತರ ವಿವರ:
ಮಂಗಳೂರಿನ 190, ಬಂಟ್ವಾಳ 40, ಪುತ್ತೂರು 21, ಸುಳ್ಯ ಹಾಗೂ ಬೆಳ್ತಂಗಡಿ ತಲಾ 16 ಹಾಗೂ ಹೊರ ಜಿಲ್ಲೆಯಲ್ಲಿ 33 ಮಂದಿಗೆ ಸೋಂಕು ತಗಲಿರುವ ಬಗ್ಗೆ ಮಾಹಿತಿ ಇದೆ.

More from the blog

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...