Friday, October 27, 2023

ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು ಡ್ರೋನ್ ಮೂಲಕ (ಸ್ವಾಮಿತ್ವ) ಸಮೀಕ್ಷೆ ಕಾರ್ಯಕ್ಕೆ ಪೆರಾಜೆ ಗ್ರಾ.ಪಂ. ನಲ್ಲಿ ಚಾಲನೆ

Must read

ಬಂಟ್ವಾಳ: ಸರಕಾರದ ನೂತನ ಕಾರ್ಯಕ್ರಮವಾದ “ಸ್ವಾಮಿತ್ವ” ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ಕಾರ್ಯಕ್ಕೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮ ಪಂಚಾಯತ್ ನಲ್ಲಿ ಪ್ರಪ್ರಥಮವಾಗಿ ಚಾಲನೆ ನೀಡಲಾಯಿತು.
ಗ್ರಾಮಾಂತರ ಭಾಗದಲ್ಲಿ ತಲೆ ತಲಾಂರಗಳಿಂದ ದಾಖಲೆಗಳನ್ನು ಹೊಂದಿದ್ದ ಗ್ರಾಮಸ್ಥರಿಗೆ, ತಮ್ಮ ಆಸ್ತಿಗಳ ದಾಖಲಾತಿಗಳನ್ನು ಸಿದ್ದಪಡಿಸಿಕೊಳ್ಳಲು ಈ ಮೂಲಕ ಅವಕಾಶವನ್ನು ಸರಕಾರ ನೀಡಿದ್ದು, ದಾಖಲೆಗಳಿಗಾಗಿ ಡ್ರೋನ್ ತಂತ್ರಜ್ಞಾನ ಅಳವಡಿಸಲಾಗಿದೆ.
ಬ್ರಿಟಿಷ್‌ ಆಳ್ವಿಕೆಯ ಸಂದರ್ಭದಲ್ಲಿ ಆಸ್ತಿಗಳ ದಾಖಲೆಗಳನ್ನು ಮಾಡಲಾಗಿದ್ದು ಅ ಬಳಿಕ ದ ದಿನಗಳಲ್ಲಿ ಆಸ್ತಿಗಳ ಸರಿಯಾದ ಬೌಂಡರಿ(ಗಡಿ ಗುರುತು) ಇಲ್ಲದೆ ಸಮಸ್ಯೆ ಎದುರಿಸುವವರು ಈ ಅವಕಾಶ ವನ್ನು ಉಪಯೋಗಿಸಬಹುದು.
ನಿಖರವಾದ ಗಡಿಗುರುತುಗಳನ್ನು ಡ್ರೋನ್ ತಂತ್ರಜ್ಞಾನ ಜೊತೆಗೆ ಸರ್ವೆ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ ಪಿ.ಡಿ.ಒಗಳ ಸಹಕಾರದಿಂದ ಮಾಡಲು ಅವಕಾಶವಿದೆ.

ಬಂಟ್ವಾಳ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಪುಷ್ಪರಾಜ್ ಪೂಜಾರಿ ಅವರು “ಸ್ವಾಮಿತ್ವ” ( ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನ ದ ಮೂಲಕ ಸಮೀಕ್ಷೆ ಬಗ್ಗೆ ಮಾಹಿತಿಯನ್ನು ನೀಡಿದರು.

ಗ್ರಾ.ಪಂ.ಅಡಳಿತ ಅಧಿಕಾರಿ ನಂದನ್ ಶೆಣ್ಯೆ ಮಾತನಾಡಿ ತಾಲೂಕಿನಲ್ಲಿ ಪ್ರಪ್ರಥಮ ವಾಗಿ ಪೆರಾಜೆ ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನ ಮಾಡಿದ್ದು, ಜನರ ಸಹಕಾರ ಅತೀ ಅಗತ್ಯವಿದೆ ಎಂದು ತಿಳಿಸಿದರು.

ತಾ.ಪಂ.ಸದಸ್ಯೆ ಮಂಜುಳಾಕುಶಲ ಅವರು ಈ ಸಂದರ್ಭದಲ್ಲಿ ಮಾತನಾಡಿ ಗ್ರಾಮದ ಒಳಿತಿಗಾಗಿ ಸರಕಾರ ಈ ಯೋಜನೆ ಜಾರಿ ಮಾಡಿದ್ದು, ಇಲಾಖೆಯ ವರ ಜೊತೆ ಗ್ರಾಮದ ಜನತೆ ಕೈಜೋಡಿಸಿ ಅವರಿಗೆ ಸಹಕಾರ ನೀಡುವಂತೆ ತಿಳಿಸಿದರು.
ಗ್ರಾಮಕಣೀಕ ಸುರಕ್ಷಾ,ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪಿ.ಡಿ.ಒ.ಶಂಭು ಕುಮಾರ ಶರ್ಮಾ ಸ್ವಾಗತಿಸಿ ವಂದಿಸಿದರು.

More articles

Latest article