Wednesday, October 18, 2023

ಮಡಂತ್ಯಾರು ಗಣಪತಿ ಮಂಟಪದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದವಾಣೆ ಕಾರ್ಯಕ್ರಮ

Must read

ಬೆಳ್ತಂಗಡಿ: ಮಡಂತ್ಯಾರು ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಕ್ರಷ್ಣ ಜನ್ಮಾಷ್ಟಮಿ ಸಮಿತಿ, ಮಡಂತ್ಯಾರು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್. ಇದರ ಜಂಟಿ ಆಶ್ರಯದಲ್ಲಿ ಭಾರತ ಸರ್ಕಾರದ ಆರೋಗ್ಯ ಇಲಾಖೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದವಾಣೆ ಕಾರ್ಯಕ್ರಮ ಸೆ. 4 ರಿಂದ 6 ರವರೆಗೆ ಮಡಂತ್ಯಾರು ಗಣಪತಿ ಮಂಟಪದಲ್ಲಿ ಜರಗಿತು.

ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಪದೆಂಜಿಲ ಉದ್ಘಾಟಿಸಿ, ಸಂಘ -ಸಂಸ್ಥೆಗಳು ಒಟ್ಟು ಸೇರಿಕೊಂಡು ಇಂತಹ ಉತ್ತಮ ಸಮಾಜಮುಖಿ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಶ್ರೀ ಕ್ರಷ್ಣ ಜನ್ಮಾಷ್ಟಮಿ ಸಮಿತಿ ಇದರ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಮಚ್ಚಿನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಶ ಸಮನ್ವಯ ಅಧಿಕಾರಿ ಹರಿಣಿ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿಯ ಸದಸ್ಯ ಕಾಂತಪ್ಪ ಗೌಡ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಮುಗೆರೋಡಿ, ಕಾರ್ಯದರ್ಶಿ ಉಮೇಶ್ ಸುವರ್ಣ, ಸಮಿತಿ ಸದಸ್ಯರಾದ ವಿಶ್ವನಾಥ ಪೂಜಾರಿ ಹಾರಬೆ, ಪದ್ಮನಾಭ ಸಾಲಿಯನ್, ತುಳಸಿ ಹಾರಬೆ, ನಾರಾಯಣ ಪೂಜಾರಿ ಮಚ್ಚಿನ, ವೀರೇಂದ್ರ ಕುಮಾರ್ ಮಡಂತ್ಯಾರು, ಉಮೇಶ್ ಸುವರ್ಣ ಅಲೆಕ್ಕಿ, ದರ್ಣಪ್ಪ ಗೌಡ, ಸದಾಶಿವ ಶೆಟ್ಟಿ ಮುಗೆರೋಡಿ, ವಿಶ್ವನಾಥ ಪೂಜಾರಿ ಕೋಟೆ, ಕಿಶೋರ್ ಶೆಟ್ಟಿ, ಮಂಜಪ್ಪ ಮೆಸ್ಕಾಂ, ಸೇವಾ ಪ್ರತಿನಿಧಿ ಸರಿತ, ವಿಜಯ ಲಕ್ಷ್ಮಿ,

ನವೀನ್ ಕೋಡ್ಲಕ್ಕೆ ಸ್ವಾಗತಿಸಿ, ಸೇವಾ ಪ್ರತಿನಿಧಿ ಹರಿನಾಕ್ಷಿ ವಂದಿಸಿದರು. ಸೇವಾ ಪ್ರತಿನಿಧಿ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡರು.

More articles

Latest article