Saturday, April 20, 2024

ಮುಲ್ಕಜೆ ಮಾಡ ಆಯುಷ್ಮಾನ್ ನೊಂದಾಣೆ ಮತ್ತು ಇತರ ಸರ್ಕಾರಿ ಯೋಜನೆಗಳ ನೊಂದಾವಣೆ ಶಿಬಿರ

ಬಂಟ್ವಾಳ: ಸರಪಾಡಿ ವಲಯದ ಹಿಂದೂ ಜಾಗರಣಾ ವೇದಿಕೆ ಮತ್ತು ಮಣಿ ನಾಲ್ಕೂರು ವೀರ ಸಾವರ್ಕರ್‍ ಘಟಕ, ದೇವಶ್ಯ ಪಡೂರು ಓಂಕಾರ ಘಟಕ, ದಮಡಿಬೆಟ್ಟ ವೀರಾಂಜನೇಯ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಾಣೆ ಮತ್ತು ವಿತರನೆ ಕಾರ್ಯಕ್ರಮ ಮುಲ್ಕಜೆ ಮಾಡ ಶಾಲಾ ವಠಾರದಲ್ಲಿ ನಡೆಯಿತು. ರತ್ನಾಕರ ಶೆಟ್ಟಿ ಕಲ್ಲಡ್ಕ ವಿಭಾಗ ಸಂಪರ್ಕ ಪ್ರಮುಖ ಮಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ಉಳಿಪ್ಪಾಡಿ ಕಾರ್ಯಕ್ರಮಕ್ಕೆ ಆಗಮಿಸಿ, ಮಾತನಾಡಿ, ಪ್ರಧಾನ ಮಂತ್ರಿಯವರ ಕನಸಿನ ಯೋಜನೆ ಇದಾಗಿದ್ದು, ಬಡವರ ಬಗ್ಗೆ ಅಪಾರ ಕಾಳಜಿಯುಳ್ಳ ಈ ಯೋಜನೆಯ ಪ್ರಯೂಜನವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ಹೇಳಿದರು.
ಪ್ರಮುಖರಾದ ರಾಜೇಶ್ ಬೊಳ್ಳುಕಲ್, ನಾಗೇಶ್, ಚಿದಾನಂದ ರೈ, ಕಕ್ಯ, ರಾಮಕೃಷ್ಣ ಮಯ್ಯ ದೇವಶ್ಯ ಧನಂಜಯಶೆಟ್ಟಿ ಸರಪಾಡಿ, ಶಾಂತಪ್ಪ ಹಂದಡ್ಕ, ಚಂದ್ರಹಾಸ ಶೆಟ್ಟಿ, ಧರಣೇಂದ್ರ ಜೈನ್, ಶರ್ಮಿತ್ ಜೈನ್, ಅರ್ಹತ್ ಜೈನ್, ದಿನೇಶ್ ಆಚಾರ್ಯ, ಶ್ರೀನಿವಾಸ್, ಶಶಿಕಿರಣ್ ನಾಯಕ್, ಸಂತೋಷ್ ಜೈನ್ ಕೊಲ್ಯ ಉಪಸ್ಥಿತರಿದ್ದರು.

More from the blog

ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಒಟ್ಟು 28 ಸ್ಥಾನದಲ್ಲಿದಲ್ಲಿ ಗೆಲುವು ಸಾಧಿಸುವುದು ನಿಶ್ವಿತ,ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಅವರು ಬಿಸಿರೋಡಿನ ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು...

ಸೈಕಲ್ ರಿಪೇರಿಗೆ ಹಟ : ಬಾಲಕ ಆತ್ಮಹತ್ಯೆ

ಉಪ್ಪಿನಂಗಡಿ: ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ನಡೆದಿದೆ. ಮೂಲತಃ ಪಂಜದ ಅಳ್ಪೆಬನದ ನಿವಾಸಿ. ದಿ. ರೋಹಿತ್ ಮತ್ತು ರಮ್ಯ ದಂಪತಿಗಳ ಪುತ್ರ ಖಾಸಗಿ ಶಾಲೆಯ 8ನೇ ತರಗತಿಯ...

ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ ವಿದ್ಯಾರ್ಥಿನಿ

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 4ರಂದು ಕಾಲೇಜಿನಲ್ಲಿ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಬಿನ್...

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾಲೋಚನಾ...