Wednesday, April 17, 2024

ಅಪಘಾತ ಎಂದು ಬಿಂಬಿಸಿ ಕೊಲೆ ನಡೆಸಲು ಯತ್ನಿಸಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು..!

ಬಂಟ್ವಾಳ: ಅಪಘಾತ ಎಂದು ಬಿಂಬಿಸಿ ಕೊಲೆ ನಡೆಸಲು ಯತ್ನಿಸಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು.

ಕಲ್ಲಡ್ಕ ಯತಿನ್, ರಾಜು ಕುಂಪಣಮಜಲು ಮತ್ತು ಮನೀಶ್ ಕೋಡಿಕೆರೆ ಬಂಧಿತ ಆರೋಪಿಗಳು.

ಉಳಿದಂತೆ ಕಲ್ಲಡ್ಕ, ಸಜೀಪ ಮತ್ತು ಕೋಡಿಕೆರೆಯ ಇನ್ನೂ ಐದಾರು ಆರೋಪಿಗಳ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ. ಕೊಲೆ ಪ್ರಯತ್ನಕ್ಕೆ ಬಳಸಿದ್ದ ಬಲೆನೋ ಕಾರು ಬೈಕ್ ಮತ್ತು ತಲಾವಾರುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಘಟನೆಯ ವಿವರ:

ಶರತ್ ಮಡಿವಾಳ ಅವರ ಕೊಲೆ ಆರೋಪಿ ಸಜೀಪ ಮುನ್ನೂರು ಗ್ರಾಮದ ಆಲಾಡಿ ನಿವಾಸಿ, ಶರೀಫ್ ಅವರಿಗೆ ಆಲಾಡಿಯಲ್ಲಿ ಅಪಘಾತ ನಡೆದು ಬಳಿಕ ಕೊಲೆ ಮಾಡಲು ಸಂಚು ರೂಪಿಸಿದ್ದ ಮೂರು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.

ಅಗಸ್ಟ್ 7ರಂದು ಮಧ್ಯಾಹ್ನ 12.30 ಗಂಟೆಗೆ ಶರತ್ ಮಡಿವಾಳ ಕೊಲೆ ಆರೋಪಿ ಬೈಕ್ ನಲ್ಲಿ ಮಸೀದಿಗೆ ತೆರಳುವ ಸಮಯ ಆಲಾಡಿ ಎಂಬಲ್ಲಿ ಎದುರು ಬಂದ ಬೈಕ್ ಒಂದಕ್ಕೆ ಅಪಘಾತ ಸಂಭವಿಸಿ ಆತನ ಕೊಲೆಗೆ ಯತ್ನ ಮಾಡಿದ್ದರು. ಆದರೆ ಶರೀಫ್ ಮತ್ತು ಆತನ ಸಹೋದರ ತಪ್ಪಿಸಿ ಹೋಗಿದ್ದರು. ಬೈಕ್ ಅಪಘಾತದಲ್ಲಿ ಗಾಯಗೊಂಡ ಶರೀಫ್ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು.

ಸ್ಥಳೀಯರೊಬ್ಬರು ಮರಣ ಹೊಂದಿದ ಸಂಬಂಧ ಅಲ್ಲೆ ಓಡಾಡುತ್ತಿದ್ದ ಅಲಾಡಿ ನವೀನ್ ಎಂಬ ಹುಡುಗ ಇವರಿಗೆ ಮೆಸೇಜ್ ನೀಡಿದ್ದ ಎಂಬ
ಸಂಶಯದ ಮೇಲೆ ಸ್ಥಳೀಯರು ಥಳಿಸಿರುವ ಘಟನೆ ಕೂಡ ನಡೆದಿದ್ದು, ಆತ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ನವೀನ್ ಗೆ ಹಲ್ಲೆ ನಡೆಸಿರುವ ಬಗ್ಗೆಯೂ ದೂರು ದಾಖಲಾಗಿತ್ತು.

ಮೇಲ್ನೋಟಕ್ಕೆ ಇದೊಂದು ಅಪಘಾತ ಪ್ರಕರಣ ಎಂದು ಕಂಡರೂ ಸಂಶಯಗೊಂಡ ಪೊಲೀಸರು ಮಾಹಿತಿ ಕಲೆಹಾಕಿದಾಗ ಇದೊಂದು ಕೊಲೆ ಪ್ರಯತ್ನ ಎಂದು ಸಾಬೀತಾಗಿದ್ದು, ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆಲಾಡಿ ಶರೀಫ್ ಅವರ ಕೊಲೆಗೆ ಪ್ರಯತ್ನಿಸಿ ಸಂಚು ವಿಫಲಗೊಂಡ ಬಳಿಕ ಇದೇ ತಂಡ ಸಂಜೆ ವೇಳೆ ಸುರತ್ಕಲ್ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯನ್ನು ಕಿನ್ನಿಗೋಳಿಯ ಉಳ್ಳಂಜೆ ಬಳಿ ಪ್ರಯತ್ನ ನಡೆಸಿದ್ದರು ಎಂಬ ಮಾಹಿತಿಯನ್ನು ಪೋಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಆರೋಪಿಗಳಾದ ಮನೀಶ್ ಮತ್ತು ರಾಜ ಅವರು 2017 ರಲ್ಲಿ ಕಂಕನಾಡಿಯಲ್ಲಿ ನಡೆದ ಪ್ರತಾಪ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಅಲ್ಲದೆ ಅನೇಕ ಕೋಮು ಗಲಭೆ ಪ್ರಕರಣಗಳಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಮತ್ತು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾ ಎಸ್.ಐ. ಅವಿನಾಶ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

More from the blog

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...