Thursday, April 25, 2024

ಕೊಯಿಲ-ಸಂಗಬೆಟ್ಟು ರಸ್ತೆ ಕಾಮಗಾರಿ ವಿಳಂಬಕ್ಕೆ ರಮನಾಥ ರೈ ಅಸಮಾಧಾನ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಯಿಲ- ಸಂಗಬೆಟ್ಟು ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಮಾಜಿ ಸಚಿವ ಬಿ.ರಮನಾಥ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜ್ ಅವರಿಗೆ ಲಿಖಿತ ಪತ್ರ ಬರೆದು ಆಗ್ರಹಿಸಿದ್ದಾರೆ.
ಸುಮಾರು ನಾಲ್ಕೂವರೆ ಕಿ.ಮೀ ಉದ್ದದ ಈ ರಸ್ತೆಗೆ ಸ್ಟೇಟ್ ಹೈವೇ ಡೆವಲಪ್ಮೆಂಟ್ ಪ್ರೊಜೆಕ್ಟ್ (ಎಸ್.ಎಚ್.ಡಿ.ಪಿ.) ಯೋಜನೆಯಡಿ 2 ವರ್ಷಗಳ ಹಿಂದೆ 12 ಕೋಟಿ ರೂಪಾಯಿ ಮಂಜೂರಾತಿಯಾಗಿದೆ. ಈ ಕಾಮಗಾರಿಯ ಟೆಂಡರ್ ಅನುಮತಿಯಾಗಿ 1 ವರ್ಷ ಕಳೆದಿದೆ. ಭಟ್ಕಳ ಇಬ್ರಾಹಿಂ ಎಂಬವರು ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ. ಆದರೂ ಇದುವರೆಗೂ ಈ ರಸ್ತೆಯ ಕಾಮಗಾರಿ ಆರಂಭಗೊಂಡಿಲ್ಲ. ತಕ್ಷಣದಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡುವಂತೆ ರಮಾನಾಥ ರೈ ಬರೆದ ಪತ್ರದಲ್ಲಿ ಇಂಜಿನಿಯರ್ ಅವರಿಗೆ ಆಗ್ರಹಿಸಿದ್ದಾರೆ.

More from the blog

ಚುನಾವಣಾ ಕಾರ್ಯಕ್ಕೆ ಸರ್ಕಾರಿ ಬಸ್​ಗಳ​ ಬಳಕೆ : ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ

ಬೆಂಗಳೂರು:​ ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಕಾರ್ಯಕ್ಕೆ ಬಸ್ ಬಳಕೆಯಾಗುವುದರಿಂದ ಇಂದು, ನಾಳೆ ಸರ್ಕಾರಿ ಸಾರಿಗೆ,...

ಬಂಟ ಬ್ರಿಗೇಡ್ ಹೆಸರಿನಲ್ಲಿ ಕರಪತ್ರ ತಯಾರಿಸಿ ಅಪಪ್ರಚಾರ : ಪಣೋಲಿಬೈಲಿನಲ್ಲಿ ಸಜೀಪಮೂಡ ಬಿಜೆಪಿ ಕಾರ್ಯಕರ್ತರಿಂದ ಪ್ರಾರ್ಥನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದು ಹಿಂದುತ್ವದ ಭದ್ರಕೋಟೆಯನ್ನು ಚಿದ್ರಮಾಡುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಅಸ್ತಿತ್ವವೇ ಇಲ್ಲದೇ ಇರುವ ಬಂಟ ಬ್ರಿಗೇಡ್ ಎಂಬ ನಾಮದ ಅಡಿಯಲ್ಲಿ ಕರಪತ್ರ ತಯಾರಿಸಿ ಜಾತಿ ಜಾತಿಗಳ...

ಬಾಲಕಿ ಜೊತೆ ಅಸಭ್ಯ ವರ್ತನೆ : ಪ್ರಕರಣ ದಾಖಲು

ಬಂಟ್ವಾಳ: ಪೊಳಲಿಯಲ್ಲಿ ಬಾಲಕಿಯನ್ನು ಅಪ್ಪಿ ಹಿಡಿದು ಅನುಚಿತವಾಗಿ ವರ್ತಿಸಿದ ಘಟನೆಯು ಎ. ೨೪ರಂದು ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್...

ಅಡಿಕೆ ಹಾಗೂ ಹಿಂಗಾರ ಕಳ್ಳತನ : ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕೆಲಸಗಾರರು

ಕಿನ್ನಿಗೋಳಿ: ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತೋಟದ ಕೆಲಸಗಾರರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಅಡಿಕೆ ಕಳ್ಳನನ್ನು ಅಂಗಾರ ಗುಡ್ಡೆ ನಿವಾಸಿ ವಿಜಯ ಎಂದು ಗುರುತಿಸಲಾಗಿದೆ. ಇಲ್ಲಿನ ಕೆಂಚನಕೆರೆಯ ಉದ್ಯಮಿ...