Thursday, October 19, 2023

ವಿದೇಶದಿಂದ ಬಂದವರ ಕೊರೊನಾ ವರದಿ ನೆಗೆಟಿವ್‌ ಬಂದರೆ ಸಾಂಸ್ಥಿಕ ಕ್ವಾರಂಟೈನ್‌ ಇಲ್ಲ

Must read

ಮಂಗಳೂರು: ಕರ್ನಾಟಕ ಸರ್ಕಾರ ವಿದೇಶದಿಂದ ರಾಜ್ಯಕ್ಕೆ ಹಿಂತಿರುಗುವವರ ಕ್ವಾರಂಟೈನ್‌ ಮಾರ್ಗಸೂಚಿಯನ್ನು ಬದಲಿಸಿದ್ದು, ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗಿಲ್ಲ ಅದರ ಬದಲಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಗಾದರೆ ಸಾಕು ಎಂಬ ವರದಿಯಾಗಿದೆ. ಈ ಹಿಂದೆ ವಿದೇಶದಿಂದ ವಾಪಾಸ್‌ ಆಗುವವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಇದ್ದು, ಆ ನಂತರ ಕೊರೊನಾ ವರದಿ ನೆಗೆಟಿವ್‌ ಬಂದರೆ 7 ದಿನಗಳ ಕಾಲ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು. ಆದರೆ ಇನ್ನು ಮುಂದೆ ವಿದೇಶದಿಂದ ಬರುವವರಿಗೆ ಜ್ವರ, ಶೀತ, ಕೆಮ್ಮು ಮೊದಲಾದ ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ರ್‍ಯಾಪಿಡ್‌ ಆಂಟಿಜ್ನ್‌ ಟೆಸ್ಟ್‌ ಮಾಡಿಸಿ, ಕೊರೊನಾ ಪಾಸಿಟಿವ್‌ ಬಂದಲ್ಲಿ ಹೋಂ ಐಸೊಲೇಷನ್‌ ಅಥವಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನೆಗಟಿವ್‌ ವರದಿ ಬಂದ್ದಲ್ಲಿ 14 ದಿನಗಳ ಕಾಲ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ. ಒಂದು ವೇಳೆ ಹೋಂ ಕ್ವಾರಂಟೈನ್‌ ಸಾಧ್ಯವಾಗದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಿದೆ ಎಂಬ ಮಾಹಿತಿ ಇದೆ.
ಅಲ್ಪಕಾಲದ ಅವಧಿಗೆ ಪ್ರಯಾಣಕ್ಕೆ ಆಗಮಿಸುವವರು ಕೊರೊನಾ ನೆಗೆಟಿವ್‌ ವರದಿಯನ್ನು ನೀಡಬೇಕಾಗಿದೆ. ಹಾಗೆಯೇ ಎಲ್ಲಾ ಪ್ರಯಾಣಿಕರು ಯಾತ್ರಿ ಕರ್ನಾಟಕ ಆನ್‌ಲೈನ್‌ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕಾಗಿದೆ.

More articles

Latest article