Saturday, April 6, 2024

ಪಣೋಲಿಬೈಲ್ ಕ್ಷೇತ್ರದಲ್ಲಿ ‘ಕಲೆಯೆರ್ಕಿ ಕಲ್ಲುರ್ಟಿ’ ವೀಡಿಯೋ ಆಲ್ಬಮ್ ಬಿಡುಗಡೆ

ಬಂಟ್ವಾಳ: ದಕ್ಷ ಕ್ರಿಯೇಷನ್ಸ್ ಮಂಗಳೂರು ಪ್ರಸ್ತುತಿಯ ಅನಿವಾಸಿ ಭಾರತೀಯ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನಮನೆ ನಿರ್ಮಾಣದಲ್ಲಿ ಉದಯೋನ್ಮುಖ ಯುವ ಗಾಯಕ ಮನೀಶ್ ಕುತ್ತಾರ್ ಧ್ವನಿ ನೀಡಿರುವ *ಕಲೆಯೆರ್ಕಿ ಕಲ್ಲುರ್ಟಿ* ವೀಡಿಯೋ ಆಲ್ಬಮ್ ಶನಿವಾರದಂದು ಬಂಟ್ವಾಳ ತಾಲೂಕಿನ ಪಣೋಲಿ ಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ಬಿಡುಗಡೆಯಾಯಿತು.

ನಿವೃತ್ತ ಕಾರ್ಗಿಲ್ ಯೋಧ ಪ್ರವೀಣ್ ಶೆಟ್ಟಿ ಪಿಲಾರ್ ಅವರು ವೀಡಿಯೋ ಆಲ್ಬಮ್ ಬಿಡುಗಡೆ ಮಾಡಿದರು.ಈ ವೇಳೆ ಮಾತನಾಡಿದ ಅವರು ಹಿಂದೆ ಕಲಾವಿದರು ಅವಕಾಶಕ್ಕಾಗಿ ಕಾಯುವುದೋ ಅಥವಾ ಯಾರದೋ ಬೆನ್ನ ಹಿಂದೆ ಬೀಳೋ ಪರಿಸ್ಥಿತಿ ಇತ್ತು.ಆದರೆ ಇಂದು ಕಲಾವಿದರು ತಮ್ಮ ಕಲೆಯನ್ನು ಅನಾವರಣಗೊಳಿಸಲು ಇಂತಹ ಆಲ್ಬಮ್ ಗಳು ಪ್ರಮುಖ ಪಾತ್ರವಹಿಸುವುದಲ್ಲದೆ,ಇಂತಹ ಪ್ರಯತ್ನದಲ್ಲಿ ಕಲಾವಿದರು ರಾತ್ರಿ ಕಳೆದು ಹಗಲಾಗುವಾಗ ಪ್ರಸಿದ್ಧಿ ಪಡೆದಿರುವ ಉದಾಹರಣೆಗಳಿವೆ.ಬೆನ್ನು ತಟ್ಟಿ ಹುರಿದುಂಬಿಸುವ ಜನರಿದ್ದರೆ ಬಡ ಕಲಾವಿದರ ಕಲಾ ನೈಪುಣ್ಯತೆಯು ಪ್ರಪಂಚಕ್ಕೆ ಪರಿಚಿತವಾಗಲು ಸಾಧ್ಯ ಎಂದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್ ಮಾತನಾಡಿ ಮನೀಶ್ ಕುತ್ತಾರ್ ಏಕಲವ್ಯನ ಹಾಗೆ.ನಿರ್ದಿಷ್ಟ ಗುರುಗಳಿಲ್ಲದ ಪ್ರತಿಭೆ ಅವರದ್ದಾಗಿದೆ.ಸಾಧಕರು ,ಕಲಾವಿದರು ಯಾರೇ ಆಗಲಿ ಅವರಲ್ಲಿ ವಿದೇಯತೆ ಇರಬೇಕು ಆ ವಿದೇಯತೆಯನ್ನು ಮನೀಷ್ ಅವರು ಮೈಗೂಡಿಸಿದ್ದು ಅವರು ಉತ್ತಮ ಗಾಯಕರಾಗಿ ಪ್ರಸಿದ್ಧಿ ಪಡೆಯಲೆಂದು ಹಾರೈಸಿದರು.

ಸಜಿಪ ಮೂಡ ಗ್ರಾ.ಪಂ ಮಾಜಿ ಸದಸ್ಯರಾದ ರಮೇಶ್ ಎಮ್. ಪಣೋಲಿಬೈಲು ಭಂಡಾರಮನೆ , ಪಣೋಲಿಬೈಲು ಕ್ಷೇತ್ರದ ಅರ್ಚಕರಾದ ರಮೇಶ್ ಮೂಲ್ಯ ,ಶ್ರೀ ಗುಡ್ಡಮೂಲ್ಯ ಯಾನೆ ವಾಸುದೇವ್ ಮೂಲ್ಯ ,ಗಾಯಕ ಮನೀಷ್ ಕುತ್ತಾರ್ ,ಮಾಜಿ ಯೋಧ ಸುನಿಲ್ ಕುಮಾರ್ ,ರಜನೀಶ್ ನಾಯ್ಕ್ ಪಂಡಿತ್ ಹೌಸ್.ಪ್ರತೀಕ್ ಬಜ್ಪೆ,ಕೊಲಲುವಾದಕ ಸಂತೋಷ್ ವಿಟ್ಲ,ನಿಖಿತ್ ಕುತ್ತಾರ್ ಉಪಸ್ಥಿತರಿದ್ದರು.ವಿಜೆ ಮನೋಜ್ ವಾಮಂಜೂರು ಅವರು ಸ್ವಾಗತಿಸಿ ,ನಿರೂಪಿಸಿದರು.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...